BREAKING : ಸ್ಯಾಂಡಲ್ ವುಡ್ ನಟಿ ‘ರಚಿತಾ ರಾಮ್’ ವಿರುದ್ಧ ‘ಫಿಲ್ಮ್ ಚೇಂಬರ್’ ಗೆ ದೂರು ಸಲ್ಲಿಕೆ |Actress’s Rachita ram

ಬೆಂಗಳೂರು : ಸ್ಯಾಂಡಲ್ ವುಡ್ ನಟಿ ರಚಿತಾ ರಾಮ್ ವಿರುದ್ಧ ಫಿಲ್ಮ್ ಚೇಂಬರ್ ಗೆ ದೂರು ಸಲ್ಲಿಕೆಯಾಗಿದೆ. ಹೌದು, ನಾಗಶೇಖರ್ ನಿರ್ದೇಶನದ ಸಂಜು ವೆಡ್ಸ್ ಗೀತಾ 2 ಸಿನಿಮಾದಲ್ಲಿ ರಚಿತಾ ರಾಮ್ ನಾಯಕಿಯಾಗಿ ನಟಿಸಿದ್ದಾರೆ. ಆದರೆ ಈ ಸಿನಿಮಾದ ಪ್ರಚಾರದಲ್ಲಿ ರಚಿತಾ ರಾಮ್ ಭಾಗಿಯಾಗಿಲ್ಲ ಎಂದು ನಿರ್ದೇಶಕ ನಾಗಶೇಖರ್ ದೂರು ಸಲ್ಲಿಸಿದ್ದಾರೆ.

ನಮ್ಮ ಸಿನಿಮಾಕ್ಕೆ ಪ್ರಚಾರಕ್ಕೆ ರಚಿತಾ ರಾಮ್ ಬೆಂಬಲ ಕೊಡಲಿಲ್ಲ, ಯಾರೇ ಮನವೊಲಿಸಲು ಪ್ರಯತ್ನಿಸಿದ್ರು ರಚಿತಾ ರಾಮ್ ಒಪ್ಪಲಿಲ್ಲ. ನಾವು ಪೇಮೆಂಟ್ ಕಡಿಮೆ ಕೊಟ್ಟಿಲ್ಲ ಅಂತ, ಈ ಬಗ್ಗೆ ನಾವು ಬಹಳ ಸಮಸ್ಯೆ ಅನುಭವಿಸಿದ್ದೇವೆ ಎಂದು ನಾಗಶೇಖರ್ ಹಾಗೂ ಶ್ರೀನಗರ ಕಿಟ್ಟಿ ಫಿಲ್ಮ್ ಚೇಂಬರ್ ಗೆ ದೂರು ಸಲ್ಲಿಸಿದ್ದಾರೆ.

ಸಂಜು ವೆಡ್ಸ್ ಗೀತಾ 2 ಚಿತ್ರವನ್ನು ನಾಗಶೇಖರ್ ನಿರ್ದೇಶಿಸಿ ಬರೆದಿದ್ದಾರೆ. ಈ ಶೀರ್ಷಿಕೆಯನ್ನು ನಾಗಶೇಖರ್ ಅವರ 2011 ರ ಚಿತ್ರ ಸಂಜು ವೆಡ್ಸ್ ಗೀತಾದಿಂದ ಪಡೆಯಲಾಗಿದ್ದರೂ, ಎರಡು ಕಥಾವಸ್ತುಗಳ ನಡುವೆ ಯಾವುದೇ ಸಂಬಂಧವಿಲ್ಲದ ಕಾರಣ ಈ ಚಿತ್ರವು ಮುಂದುವರಿದ ಭಾಗವಲ್ಲ ಎಂದು ಹೇಳಲಾಗುತ್ತದೆ. ಈ ಚಿತ್ರದಲ್ಲಿ ಶ್ರೀನಗರ ಕಿಟ್ಟಿ ಮತ್ತು ರಚಿತಾ ರಾಮ್ ಪ್ರಮುಖ ಪಾತ್ರಗಳಲ್ಲಿನಟಿಸಿದ್ದಾರೆ , ಚೇತನ್ ಚಂದ್ರ ಮತ್ತು ರಾಗಿಣಿ ದ್ವಿವೇದಿ ವಿಶೇಷ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಾರೆ. ಛಲವಾದಿ ಕುಮಾರ್ ನಿರ್ಮಿಸಿರುವ ಈ ಚಿತ್ರದ ಸಂಗೀತವನ್ನು ಶ್ರೀಧರ್ ವಿ. ಸಂಭ್ರಮ್ ಸಂಯೋಜಿಸಿದ್ದಾರೆ ಮತ್ತು ಛಾಯಾಗ್ರಹಣ ಸತ್ಯ ಹೆಗ್ಡೆ ನಿರ್ವಹಿಸಿದ್ದಾರೆ .

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read