HomeLatest News'SHOCKING : 'ಮೊಬೈಲ್' ನಲ್ಲಿ ಮಹಿಳೆಯರ 13,500 ಅಶ್ಲೀಲ ಚಿತ್ರ ಪತ್ತೆ : ಕಾಮುಕ ಅರೆಸ್ಟ್.!

‘SHOCKING : ‘ಮೊಬೈಲ್’ ನಲ್ಲಿ ಮಹಿಳೆಯರ 13,500 ಅಶ್ಲೀಲ ಚಿತ್ರ ಪತ್ತೆ : ಕಾಮುಕ ಅರೆಸ್ಟ್.!

ಮುಂಬೈ : ಮಹಿಳೆಯರ 13,500 ಅಶ್ಲೀಲ ಚಿತ್ರ ಹೊಂದಿದ್ದ ಆರೋಪಿಯನ್ನು ಸಂಡೂರಿನಲ್ಲಿ ಪೊಲೀಸರು ಬಂಧಿಸಿದ್ದಾರೆ. ಮಹಿಳೆಯರ ನಕಲಿ ಖಾತೆ ತೆರೆದು ಅಶ್ಲೀಲ ವಿಷಯಗಳನ್ನು ಪೋಸ್ಟ್ ಮಾಡುತ್ತಿದ್ದ ವ್ಯಕ್ತಿಯನ್ನು ಸಂಡೂರಿನಲ್ಲಿ ಪೊಲೀಸರು ಬಂಧಿಸಿದ್ದಾರೆ.

ವಿದ್ಯಾರ್ಥಿನಿಯೋರ್ವಳು ಮುಂಬೈನಲ್ಲಿ ದೂರು ನೀಡಿದ್ದಳು. ವಿದ್ಯಾರ್ಥಿನಿ ನೀಡಿದ ದೂರಿನ ಮೇರೆಗೆ  ತನಿಖೆ ಆರಂಭಿಸಿದ ಪೊಲೀಸರು ಮಾಹಿತಿ ಕಲೆಹಾಕಿ ಆರೋಪಿಯನ್ನು ಬಂಧಿಸಿದ್ದಾರೆ.

ಬಂಧಿತನನ್ನು ಶುಭಂಕುಮಾರ್ ಎಂದು ಗುರುತಿಸಲಾಗಿದೆ. ಈತ ಸಂಡೂರಿನಲ್ಲಿ ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದನು. ದೆಹಲಿಯಲ್ಲಿ ಕಂಪ್ಯೂಟರ್ ಸಾಫ್ಟ್ ಸ್ಟಿಲ್ಸ್ ನಲ್ಲಿ ಡಿಪ್ಲೋಮಾ ಪಡೆದಿದ್ದ ವ್ಯಕ್ತಿ ಸಂಡೂರಿನಲ್ಲಿ ಸೆಕ್ಯುರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದ ಎಂದು ತಿಳಿದುಬಂದಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಮಹಿಳೆಯರ ಹೆಸರಿನಲ್ಲಿ ಇಂಥ 11 ನಕಲಿ ಖಾತೆಗಳನ್ನು ಹಾಗೂ 100ಕ್ಕೂ ಹೆಚ್ಚು ಇ-ಮೇಲ್ ಐಡಿಗಳನ್ನು ಸೃಷ್ಟಿಸಿರುವುದು ತಿಳಿದುಬಂದಿದೆ. ಈತನ ಫೋನ್ನಿಂದ ಮಹಿಳೆಯರ 13,500 ಸ್ಟೀನ್ ಶಾಟ್ಗಳನ್ನು ವಶಪಡಿಸಿಕೊಳ್ಳಲಾಗಿದೆ’ ಎಂದು ಪೊಲೀಸರು ತಿಳಿಸಿದ್ದಾರೆ. ನಗ್ನವಾಗಿ ವಿಡಿಯೋ ಕರೆ ಮಾಡುವಂತೆ ಮಹಿಳೆಯರಿಗೆ ಕಿರುಕುಳ ಕೊಡುತ್ತಿದ್ದ ಕಾಮುಕ. ಅವರು ಒಪ್ಪದಿದ್ದಾಗ ನಕಲಿ ಖಾತೆ ಸೃಷ್ಟಿಸಿ ಮಾನಹಾನಿ ಮಾಡುತ್ತಿದ್ದ ಎಂದು’ ತನಿಖೆ ವೇಳೆ ಬಯಲಾಗಿದೆ.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular