HomeLatest NewsBREAKING: 'ಎಕ್ಕ' ಚಿತ್ರತಂಡ ಸಿದ್ದಗಂಗಾ ಮಠಕ್ಕೆ ಬಂದಿದ್ದ ವೇಳೆ ಎಡವಟ್ಟು: ಬೌನ್ಸರ್ ಇದ್ದ ಕಾರು ಮಹಿಳೆಗೆ...

BREAKING: ‘ಎಕ್ಕ’ ಚಿತ್ರತಂಡ ಸಿದ್ದಗಂಗಾ ಮಠಕ್ಕೆ ಬಂದಿದ್ದ ವೇಳೆ ಎಡವಟ್ಟು: ಬೌನ್ಸರ್ ಇದ್ದ ಕಾರು ಮಹಿಳೆಗೆ ಡಿಕ್ಕಿ

ತುಮಕೂರು: ‘ಎಕ್ಕ’ ಚಿತ್ರತಂಡ ತುಮಕೂರಿನ ಸಿದ್ದಗಂಗಾ ಮಠಕ್ಕೆ ಬಂದಿದ್ದ ವೇಳೆ ಎಡವಟ್ಟು ಮಾಡಿಕೊಂಡಿದೆ. ಬೌನ್ಸರ್ ಇದ್ದ ಕಾರು ಮಹಿಳೆಯೊಬ್ಬರಿಗೆ ಡಿಕ್ಕಿ ಹೊಡೆದಿದ್ದು, ಅಪಘಾತದಲ್ಲಿ ಮಹಿಳೆ ಗಂಭೀರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ.

ಮಹಿಳೆಯ ಕಾಲಿಗೆ ಗಂಭೀರವಾಗಿ ಗಾಯಗಳಾಗಿದ್ದು, ತನ್ನನ್ನು ಆಸ್ಪತ್ರೆಗೆ ಕರೆದೊಯ್ಯುವಂತೆ ಮಹಿಳೆ ಗೋಳಾಡುತ್ತಿದ್ದರೂ ಗಮನಿಸದೇ ಚಿತ್ರತಂಡ ಸ್ಥಳದಿಂದ ಕಾಲ್ಕಿತ್ತಿದೆ ಎನ್ನಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಚಿತ್ರತಂಡದ ಜೊತೆ ನಟ ಯುವರಾಜ್ ಕುಮಾರ್ ಕೂಡ ಮಠಕ್ಕೆ ಬಂದಿದ್ದರು. ಈ ವೇಳೆ ಮಗುವನ್ನು ಶಾಲೆಗೆ ಬಿಟ್ಟು ಹೋಗುತ್ತಿದ್ದ ಮಹಿಳೆಗೆ ಬೌನ್ಸರ್ ಇದ್ದ ಕಾರು ಡಿಕ್ಕಿ ಹೊಡೆದಿದೆ. ಬಳ್ಳಾರಿ ಮೂಲದ ಲಿಂಗಮ್ಮ ಎಂಬುವವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಕಾರು ಮಹಿಳೆಗೆ ಗುದ್ದಿದರೂ ಬೌನ್ಸರ್ ತಿರುಗಿಯೂ ನೋಡದೇ ಕಾರನ್ನು ಚಲಾಯಿಸಿಕೊಂಡು ಹೋಗಿದ್ದಾರೆ. ಮಹಿಳೆ ತನ್ನನ್ನು ಆಸ್ಪತ್ರೆಗೆ ದಾಖಲಿಸುಂತೆ ಕಣ್ಣೀರಿಟ್ಟಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular