HomeLatest NewsBIG NEWS: ಲಿಂಗಸಗೂರು: ಒಂದೇ ದಿನ ಮೂವರು ಬಾಲಕಿಯರು ನಾಪತ್ತೆ

BIG NEWS: ಲಿಂಗಸಗೂರು: ಒಂದೇ ದಿನ ಮೂವರು ಬಾಲಕಿಯರು ನಾಪತ್ತೆ

ರಾಯಚೂರು: ಒಂದೇ ದಿನ ಮೂವರು ಬಾಲಕಿಯರು ನಾಪತ್ತೆಯಾಗಿರುವ ಘಟನೆ ರಾಅಯಚೂರು ಜಿಲ್ಲೆಯ ಲಿಂಗಸಗೂರು ತಾಲೂಕಿನಲ್ಲಿ ನಡೆದಿದೆ.

14 ಹಾಗೂ 16 ವರ್ಷದ ಮೂವರು ಬಾಲಕಿಯರು ಇದ್ದಕ್ಕಿದ್ದಂತೆ ನಾಪತ್ತೆಯಾಗಿದ್ದಾರೆ. ಜೂನ್ 6ರಂದು ನಡೆದಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಅಂದು ಸಂಜೆ ಮನೆಯಿಂದ ಹೊರ ಹೋಗಿ ಬರುವುದಾಗಿ ಹೇಳಿ ಹೊರಟ ಮೂವರು ಬಾಲಕಿರು ಮರಳಿ ಮನೆಗೆ ಬಂದಿಲ್ಲ. ಆತಂಕಗೊಂಡ ಪೋಷಕರು ಲಿಂಗಸಗೂರಿನ ಸುತ್ತಮುತ್ತಲು ಹುಡುಕಾಟ ನಡೆಸಿದ್ದಾರೆ. ಆದರೆ ಬಾಲಕಿಯರ ಸುಳಿವಿಲ್ಲ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಲಿಂಗಸಗೂರು ಪೊಲೀಸ್ ಠಾಣೆಯಲ್ಲಿ ಪೋಷಕರು ದೂರು ದಾಖಲಿಸಿದ್ದಾರೆ. ಇಬ್ಬರು ಬಾಲಕಿಯರು 9ನೇ ತರಗತಿ ಓಡುತ್ತಿದ್ದರೆ, ಓರ್ವ ಬಾಲಕಿ 10 ನೇತರಗಿ ಓದುತ್ತಿದ್ದಾಳೆ. ನಾಪತ್ತೆಯಾಗಿರುವ ಬಾಲಕಿಯರಿಗಾಗಿ ಲಿಂಗಸಗೂರು ಪೊಲೀಸರು ಹುಡುಕಾಟ ನಡೆಸಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular