HomeLatest NewsBIG NEWS: ಕಾರು ಡಿಕ್ಕಿಯಾಗಿ ಮಾಜಿ ಸೈನಿಕ ಸ್ಥಳದಲ್ಲೇ ಸಾವು

BIG NEWS: ಕಾರು ಡಿಕ್ಕಿಯಾಗಿ ಮಾಜಿ ಸೈನಿಕ ಸ್ಥಳದಲ್ಲೇ ಸಾವು

ರಾಯಚೂರು: ಕರ್ತವ್ಯ ಮುಗಿಸಿ ವಾಪಾಸ್ ಆಗುತ್ತಿದ್ದ ಮಾಜಿ ಸೈನಿಕರೊಬ್ಬರಿಗೆ ಕಾರು ಡಿಕ್ಕಿಹೊಡೆದು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ರಾಯಚೂರು ಹೊರವಲಯದ ಸಾತ್ ಮೈಲ್ ರಸ್ತೆ ಬಳಿ ನಡೆದಿದೆ.

ಶ್ರೀನಿವಾಸ್ ರಾವ್ (58) ಮೃತ ಮಾಜಿ ಸೈನಿಕ. ಶ್ರೀನಿವಾಸ್ ರಾವ್ ನಗರದ ಹೊರವಲಯದ ಪವರ್ ಗ್ರೀಡ್ ನಲ್ಲಿ ವಾಚ್ ಮೆನ್ ಆಗಿ ಕೆಲಸ ಮಾಡುತ್ತಿದ್ದರು. ಎಂದಿನಂತೆ ರಾತ್ರಿ ಪಾಳಿ ಮುಗಿಸಿ ಇಂದು ಬೆಳಿಗ್ಗೆ ಮನೆಗೆ ಬರುತ್ತಿದ್ದಾಗ ಅಪರಿಚಿತ ಕಾರು ಅವರ ಸೈಕಲ್ ಗೆ ಡಿಕ್ಕಿ ಹೊಡೆದಿದೆ. ಗಂಭೀರವಾಗಿ ಗಾಯಗೊಂಡಿದ್ದ ಶ್ರೀನಿವಾಸ್ ರಾವ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಘಟನಾ ಸ್ಥಳಕ್ಕೆ ಪಶ್ಚಿಮ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular