ನೈರೋಬಿ : ಕೀನ್ಯಾದಲ್ಲಿ ಸೋಮವಾರ 28 ಭಾರತೀಯರನ್ನು ಹೊತ್ತೊಯ್ಯುತ್ತಿದ್ದ ಬಸ್ ಕಂದಕಕ್ಕೆ ಉರುಳಿ ಐದು ಜನರು ಸಾವನ್ನಪ್ಪಿದ್ದಾರೆ ಎಂದು ಕತಾರ್ನಲ್ಲಿರುವ ಭಾರತೀಯ ರಾಯಭಾರ ಕಚೇರಿ ತಿಳಿಸಿದೆ.
ಪ್ರವಾಸಿಗರನ್ನು ಕರೆದೊಯ್ಯುತ್ತಿದ್ದ ಬಸ್ ಪಲ್ಟಿಯಾಗಿ ಆರು ಮಂದಿ ಸಾವನ್ನಪ್ಪಿದ್ದು, 27 ಮಂದಿ ಗಾಯಗೊಂಡಿದ್ದಾರೆ. ನಯಾಂಡರುವಾ ಕೌಂಟಿಯ ಓಲ್ ಜೊರೊರೊಕ್-ನಕುರು ರಸ್ತೆಯ ಗಿಚಾಕಾದಲ್ಲಿ ಈ ಅಪಘಾತ ಸಂಭವಿಸಿದೆ. ಬಸ್ ಪಲ್ಟಿಯಾಗಲು ನಿಖರವಾದ ಕಾರಣ ದೃಢಪಟ್ಟಿಲ್ಲ ಮತ್ತು ತನಿಖೆಗಳು ನಡೆಯುತ್ತಿದೆ.
ಮೃತರೆಲ್ಲರೂ ಕತಾರ್ನಲ್ಲಿ ವಾಸಿಸುವ ಭಾರತೀಯರು ಎಂದು ಗಲ್ಫ್ ಟೈಮ್ಸ್ ವರದಿ ಮಾಡಿದೆ. ಪ್ರವಾಸಿ ಬಸ್ ನಿಯಂತ್ರಣ ತಪ್ಪಿ ನ್ಯಾಂಡರುವಾದ ಈಶಾನ್ಯ ಕೌಂಟಿಯಲ್ಲಿ ಕಂದಕಕ್ಕೆ ಉರುಳಿಬಿದ್ದಿದೆ. ಮೃತರು ಕೇರಳದ ಮೂಲದವರು ಎಂದು ಗುರುತಿಸಲಾಗಿದೆ.

