HomeLatest NewsBIG NEWS : ರಾಜ್ಯದ ಎಲ್ಲಾ ಶಾಲೆಗಳಲ್ಲಿ ಇಂದು 'ಅಂತರ ರಾಷ್ಟ್ರೀಯ ಆಟದ ದಿನ' ಆಚರಿಸುವಂತೆ...

BIG NEWS : ರಾಜ್ಯದ ಎಲ್ಲಾ ಶಾಲೆಗಳಲ್ಲಿ ಇಂದು ‘ಅಂತರ ರಾಷ್ಟ್ರೀಯ ಆಟದ ದಿನ’ ಆಚರಿಸುವಂತೆ ಶಿಕ್ಷಣ ಇಲಾಖೆ ಮಹತ್ವದ ಆದೇಶ

ಬೆಂಗಳೂರು : ರಾಜ್ಯದ ಎಲ್ಲಾ ಶಾಲೆಗಳಲ್ಲಿ ಇಂದು ‘ಅಂತರರಾಷ್ಟ್ರೀಯ ಆಟದ ದಿನ’ ಆಚರಿಸುವಂತೆ ಶಿಕ್ಷಣ ಇಲಾಖೆ ಮಹತ್ವದ ಆದೇಶ ಹೊರಡಿಸಿದೆ.

ಮೇಲ್ಕಂಡ ವಿಷಯ ಮತ್ತು ಉಲ್ಲೇಖಕ್ಕೆ ಸಂಬಂಧಿಸಿದಂತೆ ಜೂನ್ 11ರಂದು ಅಂತರ ರಾಷ್ಟ್ರೀಯ ಆಟದ ದಿನ’ ಅಂಗವಾಗಿ ಆಟದ ಹಕ್ಕನ್ನು ಸಂಭ್ರಮಿಸುವ ಕುರಿತು ಚಟುವಟಿಕೆಗಳನ್ನು ಶಾಲಾ ಹಂತದಲ್ಲಿ ಮೇಲ್ಕಂಡ ಉಲ್ಲೇಖದನ್ವಯ ಅಯೋಜಿಸಲು ಸೂಚಿಸಿದೆ ಉಲ್ಲೇಖಿತ ಪ್ರತಿಯನ್ನು ಸದರಿ ಪತ್ರದೊಂದಿಗೆ ಲಗತ್ತಿಸಿದೆ.

ಜೂನ್ 11ರಂದು ಅಂತರ ರಾಷ್ಟ್ರೀಯ ಆಟದ ದಿನ” ದ ಅಂಗವಾಗಿ ಆಟದ ಹಕ್ಕನ್ನು ಸಂಭ್ರಮಿಸುವ ಕುರಿತು ಚಟುವಟಿಕೆಗಳನ್ನು ಆಯೋಚಿಸುವ ಕುರಿತು ಸುತ್ತೋಲೆಯನ್ನು ಹೊರಡಿಸುವಂತೆ ಕೋರಿ.ಮೇಲಿನ ವಿಷಯಕ್ಕೆ ಸಂಬಂಧಿಸಿದಂತೆ. ವಿಶ್ವಸಂಸ್ಥೆಯು ಜೂನ್ 11ಅನ್ನು ಅಂತರ ರಾಷ್ಟ್ರೀಯ ಆಟದ ದಿನ ವೆಂದು ಘೋಷಿಸಿದೆ. ವಿಶ್ವಸಂಸ್ಥೆಯ ಎಲ್ಲಾ ಸದಸ್ಯ ರಾಷ್ಟ್ರಗಳು, ವಿಶೇಷವಾಗಿ ಮಕ್ಕಳ ಹಕ್ಕುಗಳ ಒಡಂಬಡಿಕೆಯನ್ನು ಒಪ್ಪಿರುವ ಎಲ್ಲಾ ದೇಶಗಳು ಬದ್ಧರಾಗಿರುತ್ತಾರೆ.

ವಿಶ್ವಸಂಸ್ಥೆಯ ಈ ಘೋಷಣೆಗೆ ಕಾರಣವಾದ ಜಾಗತಿಕ ಅಭಿಯಾನ, ಸಂಸ್ಥೆಗಳೊಂದಿಗೆ ನಡೆಸಿದ ವಕಾಲತ್ತು ಹಾಗೂ ವಿಶ್ವಸಂಸ್ಥೆಗೆ ನೀಡಿದ ಶಿಫಾರಸ್ಸುಗಳ ಪ್ರಕ್ರಿಯೆಯಲ್ಲಿ ನಮ್ಮ ರಾಜ್ಯದ ವಿವಿಧ ಹಿನ್ನೆಲೆಗಳ ಮಕ್ಕಳು ಭಾಗವಹಿಸಿ ಭಾರತದ ಪ್ರತಿನಿಧಿಗಳಾಗಿ ಪ್ರಬಲ ಪಾತ್ರ ವಹಿಸಿದ್ದನ್ನು ನಾವು ಹೆಮ್ಮೆಯಿಂದ ಗುರುತಿಸುತ್ತೇವೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಜಗತ್ತಿನ 10,000 ಕ್ಕೂ ಹೆಚ್ಚು ಮಕ್ಕಳನ್ನು ಒಳಗೊಂಡ ಈಜಾಗತಿಕ ಅಭಿಯಾನದಲ್ಲಿ ಉಡುಪಿ ಜಿಲ್ಲೆಯ ಶ್ರೀರಕ್ಷಾ, ನಿಶ್ಮಿತಾ, ಅಂಜಲಿ, ತನುಹ್ಮತ್ತು ವಿಜಯನಗರ ಜಿಲ್ಲೆಯ ಮಹೇಶ್ವರಿ ಅವರು, ಅಂತರಾಷ್ಟ್ರೀಯ ಮಕ್ಕಳ ಮತ್ತು ಯುವಜನರ ಸಲಹಾ ಸಮಿತಿಯ (CAYAG) ಸದಸ್ಯರಾಗಿ ಭಾರತವನ್ನು ಸಕ್ರಿಯವಾಗಿ ಪ್ರತಿನಿಧಿಸಿದರು. ವಿಶ್ವಸಂಸ್ಥೆಯ ಮಕ್ಕಳ ಹಕ್ಕುಗಳ ಒಡಂಬಡಿಕೆಯ ಪ್ರಕಾರ, 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಎಲ್ಲಾ ಮಕ್ಕಳಿಗೂ ಮತ್ತು ಯುವ ಜನರಿಗೂ ಅಡುವ ಹಕ್ಕು ಇದೆ. “ದುಗು” ಎಂಬುದು 18 ವರ್ಷದೊಳಗಿನ ಯಾವುದೇ ವ್ಯಕ್ತಿಯನ್ನು ಸೂಚಿಸುತ್ತದೆ.

ಸರ್ಕಾರದ ಯೋಜನೆಗಳನ್ನು ಜಾರಿಗೆ ತರುವಾಗ, ಪ್ರತಿ ಪಂಚಾಯಿತಿ ವ್ಯಾಪ್ತಿಯೊಳಗಿನ ಅತ್ಯಂತ ದುರ್ಬಲ ವರ್ಗಗಳು ಮತ್ತು ಅಟಕ್ಕೆ ಕಡಿಮೆ ಅವಕಾಶವಿರುವ ಹಿನ್ನೆಲೆಗಳನ್ನು ಹೊಂದಿರುವ ಮಕ್ಕಳಿಗೆ ಆದ್ಯತೆ ನೀಡಬೇಕು. ಆದರೆ ಇದು ಈ ಗುಂಪುಗಳಿಗಷ್ಟೇ ಸೀಮಿತವಾಗದೇ, ಸ್ಥಳೀಯವಾಗಿ ಬದಿಗೊತ್ತಲ್ಪಟ್ಟ ಎಲ್ಲ ಮಕ್ಕಳನ್ನೂ ಒಳಗೊಳ್ಳವಂತಾಗಬೇಕು ಎಂದು ಉಲ್ಲೇಖಿಸಲಾಗಿದೆ.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular