HomeLatest NewsBREAKING : ನಟಿ 'ರನ್ಯಾ ರಾವ್' ಗೆ ಮತ್ತೊಂದು ಶಾಕ್ : ವಿಚಾರಣೆ ನಡೆಸಲು 'IT'...

BREAKING : ನಟಿ ‘ರನ್ಯಾ ರಾವ್’ ಗೆ ಮತ್ತೊಂದು ಶಾಕ್ : ವಿಚಾರಣೆ ನಡೆಸಲು ‘IT’ ಇಲಾಖೆಗೆ ಕೋರ್ಟ್ ಅನುಮತಿ.!

ಬೆಂಗಳೂರು : ಗೋಲ್ಡ್ ಸ್ಲಗ್ಲಿಂಗ್ ಪ್ರಕರಣದಲ್ಲಿ ಲಾಕ್ ಆಗಿರುವ ನಟಿ ರನ್ಯಾರಾವ್ ಗೆ ಮತ್ತೊಂದು ಶಾಕ್ ಎದುರಾಗಿದೆ. ನಟಿ ರನ್ಯಾರಾವ್ ವಿಚಾರಣೆ ನಡೆಸಲು ಐಟಿ ಇಲಾಖೆಗೆ ಕೋರ್ಟ್ ಅನುಮತಿ ನೀಡಿದೆ.

ಹೌದು, ಬೆಂಗಳೂರಿನ ಆರ್ಥಿಕ ಅಪರಾಧಗಳ ವಿಶೇಷ ನ್ಯಾಯಾಲಯವು ತನಿಖೆ ನಡೆಸಲು ಐಟಿ ಇಲಾಖೆಗೆ ಕೋರ್ಟ್ ಅನುಮತಿ ನೀಡಿದೆ. ಪರಪ್ಪನ ಅಗ್ರಹಾರದಲ್ಲಿ ಐಟಿ ಅಧಿಕಾರಿಗಳು ರನ್ಯಾರಾವ್ ವಿಚಾರಣೆ ನಡೆಸಲಿದ್ದಾರೆ.

ಗೋಲ್ಡ್ ಸ್ಲಗ್ಲಿಂಗ್ ‍ಪ್ರಕರಣದಲ್ಲಿ ನಟಿ ರನ್ಯಾರಾವ್ ಅರೆಸ್ಟ್ ಆಗಿದ್ದರು. ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ಬಳಿ ಇರುವ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಆರೋಪಿ ರನ್ಯಾ ರಾವ್ ಅವರನ್ನು ಬಂಧಿಸಲಾಗಿತ್ತು..ರನ್ಯಾ ರಾವ್ ಬಳಿ ಒಟ್ಟು 14.8 ಕೆಜಿ ಚಿನ್ನ ಸಿಕ್ಕಿರುವ ಮಾಹಿತಿ ಇದ್ದು ರಾಜ್ಯದ ಇತಿಹಾಸದಲ್ಲಿ ಅತಿ ದೊಡ್ಡ ಚಿನ್ನದ ಅಕ್ರಮ ಸಾಗಣೆ ಪ್ರಕರಣ ಎನ್ನಲಾಗಿದೆ. ರನ್ಯಾ ರಾವ್ ಡಿಜಿಪಿ ಡಾ. ಕೆ. ರಾಮಚಂದ್ರರಾವ್ ಅವರ ಮಲಮಗಳಾಗಿದ್ದಾರೆ.ಪ್ರಕರಣದಲ್ಲಿ ಜಾಮೀನು ಕೋರಿ ರನ್ಯಾರಾವ್ ಅರ್ಜಿ ಕೂಡ ಸಲ್ಲಿಸಿದ್ದರು, ಜಾಮೀನಿ ಸಿಗದೇ ಅವರಿಗೆ ಸದ್ಯಕ್ಕೆ ಜೈಲೇ ಗತಿ ಆಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular