HomeLatest NewsBIG NEWS : ಬೆಂಗಳೂರಲ್ಲಿ 'ಕಟ್ಟಡ ನಕ್ಷೆ' ಮಂಜೂರಾತಿಗೆ ಇ ಖಾತಾ ಕಡ್ಡಾಯ : ಜು....

BIG NEWS : ಬೆಂಗಳೂರಲ್ಲಿ ‘ಕಟ್ಟಡ ನಕ್ಷೆ’ ಮಂಜೂರಾತಿಗೆ ಇ ಖಾತಾ ಕಡ್ಡಾಯ : ಜು. 1 ರಿಂದ ಹೊಸ ನಿಯಮ ಜಾರಿ.!

ಬೆಂಗಳೂರು : ಕಟ್ಟಡ ನಕ್ಷೆ ಮಂಜೂರಾತಿಗೆ ಇ ಖಾತಾ ಕಡ್ಡಾಯವಾಗಿದ್ದು, ಜುಲೈ 1 ರಿಂದ ಹೊಸ ನಿಯಮ ಜಾರಿಗೆ ಬರಲಿದೆ.

ಬೆಂಗಳೂರಿನಲ್ಲಿ ಕಟ್ಟಡ ನಕ್ಷೆ ಮಂಜೂರಾತಿಗೆ ಇ-ಖಾತೆ ಕಡ್ಡಾಯ ಮಾಡಲಾಗಿದೆ.ಇ-ಖಾತೆ ಕಡ್ಡಾಯಗೊಳಿಸಿ ಬಿಬಿಎಂಪಿ ಮುಖ್ಯ ಆಯುಕ್ತರು ಆದೇಶ ಹೊರಡಿಸಿದ್ದಾರೆ.ಜುಲೈ 1ರಿಂದ ನಕ್ಷೆ ಮಂಜೂರಾತಿಗೆ ಇ-ಖಾತೆ ಸಲ್ಲಿಕೆ ಕಡ್ಡಾಯಗೊಳಿಸಲಾಗಿದೆ.ಆನ್ಲೈನ್ ನಲ್ಲಿ ನಂಬಿಕೆ ನಕ್ಷೆ ಸೇರಿದಂತೆ ಎಲ್ಲಾ ಅರ್ಜಿಗಳಿಗೆ ಇ-ಖಾತೆ ಅವಶ್ಯಕವಾಗಿದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಮಹೇಶ್ವರರಾವ್ ಆದೇಶ ಜಾರಿಗೊಳಿಸಿದ್ದಾರೆ.

ಬಿಬಿಎಂಪಿ ವ್ಯಾಪ್ತಿಯಲ್ಲಿ ಕಟ್ಟಡ ನಕ್ಷೆ ಮಂಜೂರಾತಿಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಕೆ ಮತ್ತು ವಿತರಣೆ ವ್ಯವಸ್ಥೆ ಮಾಡಲಾಗಿದೆ. ಅದರ ಜತೆಗೆ ಸ್ವತ್ತುಗಳಿಗೆಇ-ಖಾತಾವನ್ನು ಆನ್ಲೈನ್ಮೂಲಕ ನೀಡಲಾಗುತ್ತಿದೆ. ಇದೀಗ ಎರಡೂ ತಂತ್ರಾಂಶವನ್ನು ಏಕೀಕರಣಗೊಳಿಸಲಾಗುತ್ತಿದೆ. ಹೀಗಾಗಿ ಕಟ್ಟಡ ನಕ್ಷೆ ಮಂಜೂರಾತಿಗೆ ಅರ್ಜಿಸಲ್ಲಿಸುವವರು ಮೊದಲು ಇ- ಖಾತಾವನ್ನು ಪಡೆದಿರಬೇಕಿದೆ.ಇ-ಖಾತಾಸಲ್ಲಿಸದ ಅರ್ಜಿಗಳನ್ನು ಕಟ್ಟಡ ನಕ್ಷೆ ಮಂಜೂರಾತಿಗೆ ಪರಿಗಣಿ ಸದಂತೆಯೂ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಒಂದು ವೇಳೆ ನಕ್ಷೆ ಮಂಜೂರಾತಿ ಅರ್ಜಿಗಳು ಇ-ಖಾತಾ ಸೇರಿದಂತೆ ಇನ್ನಿತರ ದಾಖಲೆಗಳನ್ನು ಸಲ್ಲಿಸದೇ ಡೀಮ್ಸ್ ಅನುಮೋದನೆ ದೊರೆತರೆ, ಅದಕ್ಕೆ ಸಂಬಂಧಪಟ್ಟ ಅಧಿಕಾರಿಗಳನ್ನು ಹೊಣೆ ಮಾಡಿ ನಿಯಮದಪ್ರಕಾರ ಶಿಸ್ತುಕ್ರಮಕೈಗೊಳ್ಳುವುದಾಗಿ ಎಚ್ಚರಿಕೆ ನೀಡಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular