HomeLatest News40 ವರ್ಷದ ನಂತರ ಇತಿಹಾಸ ನಿರ್ಮಿಸಲು ಸಜ್ಜಾದ ಮತ್ತೊಬ್ಬ ಭಾರತೀಯ: ನಾಳೆ ಬಾಹ್ಯಾಕಾಶ ಪ್ರವಾಸಕ್ಕೆ ಶುಭಾಂಶು...

40 ವರ್ಷದ ನಂತರ ಇತಿಹಾಸ ನಿರ್ಮಿಸಲು ಸಜ್ಜಾದ ಮತ್ತೊಬ್ಬ ಭಾರತೀಯ: ನಾಳೆ ಬಾಹ್ಯಾಕಾಶ ಪ್ರವಾಸಕ್ಕೆ ಶುಭಾಂಶು ಶುಕ್ಲಾ

ಫ್ಲೋರಿಡಾ: ಭಾರತೀಯ ಸೇರಿ ನಾಲ್ವರು ಬಾಹ್ಯಾಕಾಶ ಪ್ರವಾಸಕ್ಕೆ ಸಜ್ಜಾಗಿದ್ದಾರೆ. ನಾಳೆ ಅಮೆರಿಕದಿಂದ ಬಾಹ್ಯಾಕಾಶಕ್ಕೆ ರಾಕೆಟ್ ಉಡಾವಣೆ ಮಾಡಲಾಗುವುದು.

ಭಾರತೀಯ ಸೇರಿ ನಾಲ್ವರು ಯಾತ್ರಿಗಳನ್ನೊಳಗೊಂಡ ರಾಕೆಟ್ ನಾಳೆ ಅಮೆರಿಕದಿಂದ ಉಡಾವಣೆಯಾಗಲಿದೆ, ನಾಳೆ ಫ್ಲೋರಿಡಾದ ಬಾಹ್ಯಾಕಾಶ ಕೇಂದ್ರದಿಂದ ರಾಕೆಟ್ ಉಡಾವಣೆ ಮಾಡಲಾಗುವುದು. ನಾಳೆ ಸಂಜೆ ಫಾಲ್ಕನ್ 9 ರಾಕೆಟ್ ಉಡಾವಣೆಯಾಗಲಿದೆ.

ಭಾರತೀಯ ಕಾಲಮಾನ ಪ್ರಕಾರ ನಾಳೆ ಸಂಜೆ 5.52ಕ್ಕೆ ರಾಕೆಟ್ ಉಡಾವಣೆ ಮಾಡಲಾಗುವುದು. ಅಮೆರಿಕದ ಆಕ್ಸಿಯೋಮ್- 4 ಯೋಜನೆಯಡಿ ಬಾಹ್ಯಾಕಾಶ ಪ್ರವಾಸ ಕೈಗೊಳ್ಳಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಭಾರತೀಯ ಶುಭಾಂಶು ಶುಕ್ಲಾ ಇತರೆ ಮೂವರಿಂದ ಅಂತರಿಕ್ಷ ಪ್ರವಾಸ ಕೈಗೊಳ್ಳಲಾಗಿದೆ. ಇದರೊಂದಿಗೆ ಅಂತರಿಕ್ಷ ಪ್ರವಾಸ ಕೈಗೊಳ್ಳುತ್ತಿರುವ ಎರಡನೇ ಭಾರತೀಯ ಶುಭಾಂಶು ಶುಕ್ಲಾ ಅವರಾಗಿದ್ದಾರೆ. ಇದಕ್ಕೂ ಮೊದಲು ಭಾರತದ ರಾಕೇಶ್ ಶರ್ಮಾ ಅವರು ಅಂತರಿಕ್ಷಯಾನ ಪ್ರವಾಸ ಕೈಗೊಂಡಿದ್ದರು. 1984ರಲ್ಲಿ ರಷ್ಯಾದ ಸೋಯುಜ್ ನೌಕೆಯಲ್ಲಿ  ಅಂತರಿಕ್ಷ ಪ್ರವಾಸ ಮಾಡಿ ರಾಕೇಶ್ ಶರ್ಮಾ ಇತಿಹಾಸ ನಿರ್ಮಿಸಿದ್ದರು. ಇದೀಗ ಮತ್ತೊಬ್ಬ ಭಾರತೀಯ ಅಂತರಿಕ್ಷ ಪ್ರವಾಸಕ್ಕೆ ಸಜ್ಜಾಗಿದ್ದಾರೆ. 40 ವರ್ಷದ ನಂತರ ಅಂತರಿಕ್ಷ ಯಾನ ಕೈಗೊಳ್ಳುತ್ತಿರುವ ಮೊದಲ ಭಾರತೀಯ ಶುಭಾಂಶು ಶುಕ್ಲಾ ಇಂತಹ ದೊಡ್ಡ ಯೋಜನೆಯ ಭಾಗವಾಗಿರುವುದಕ್ಕೆ ಅದೃಷ್ಟಶಾಲಿ ಎನ್ನಿಸುತ್ತದೆ ಎಂದು ತಮ್ಮ ಬಾಹ್ಯಾಕಾಶ ಕೇಂದ್ರ ಪ್ರವಾಸದ ಬಗ್ಗೆ ಭಾರತೀಯ ಶುಭಾಂಶು ಶುಕ್ಲಾ ಮಾಹಿತಿ ಹಂಚಿಕೊಂಡಿದ್ದಾರೆ.

“ಶುಕ್ಸ್” ಎಂಬ ಅಡ್ಡಹೆಸರಿನಿಂದ ಕರೆಯಲ್ಪಡುವ ಶುಕ್ಲಾ, ಬಾಹ್ಯಾಕಾಶಕ್ಕೆ ಪ್ರಯಾಣಿಸಿದ ಎರಡನೇ ಭಾರತೀಯರಾಗುತ್ತಾರೆ, ಅವರ ಆರಾಧ್ಯ ದೈವ ರಾಕೇಶ್ ಶರ್ಮಾ 1984 ರಲ್ಲಿ ಹಿಂದಿನ ಸೋವಿಯತ್ ಒಕ್ಕೂಟದ ಸೋಯುಜ್ ಬಾಹ್ಯಾಕಾಶ ನೌಕೆಯಲ್ಲಿ ಎಂಟು ದಿನಗಳ ಕಾಲ ಕಕ್ಷೆಯಲ್ಲಿ ಬಾಹ್ಯಾಕಾಶ ಹಾರಾಟ ನಡೆಸಿದ 40 ವರ್ಷಗಳ ನಂತರ ಪ್ರವಾಸಕ್ಕೆ ಶುಕ್ಲಾ ರೆಡಿಯಾಗಿದ್ದಾರೆ.

39 ವರ್ಷದ ಭಾರತೀಯ ವಾಯುಪಡೆಯ ಪೈಲಟ್ ಶುಕ್ಲಾ ಇತರ ಮೂವರು ಸಿಬ್ಬಂದಿಗಳೊಂದಿಗೆ ಐಎಸ್‌ಎಸ್‌ಗೆ ಫಾಲ್ಕನ್ 9 ರಾಕೆಟ್‌ನಲ್ಲಿ ಅಳವಡಿಸಲಾದ ಸ್ಪೇಸ್‌ಎಕ್ಸ್‌ನ ಡ್ರ್ಯಾಗನ್ ಬಾಹ್ಯಾಕಾಶ ನೌಕೆಯಲ್ಲಿ ಪ್ರಯಾಣಿಸಲು ಸಿದ್ಧರಾಗಿದ್ದಾರೆ, ಇದು ಮಂಗಳವಾರ ಸಂಜೆ 5:52 IST ಕ್ಕೆ ಫ್ಲೋರಿಡಾದ ಕೆನಡಿ ಬಾಹ್ಯಾಕಾಶ ಕೇಂದ್ರದಿಂದ ಉಡಾವಣೆಯಾಗಲಿದೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular