HomeLatest NewsSHOCKING: ಗರ್ಭಿಣಿಯಾದ ವಿಚಾರಕ್ಕೆ ಗಲಾಟೆ: ಲಿವ್-ಇನ್ ಸಂಗಾತಿ ಕೊಲೆಗೈದು ಬ್ಯಾಗ್ ನಲ್ಲಿ ಶವ ಇಟ್ಟು ಎಸೆದ...

SHOCKING: ಗರ್ಭಿಣಿಯಾದ ವಿಚಾರಕ್ಕೆ ಗಲಾಟೆ: ಲಿವ್-ಇನ್ ಸಂಗಾತಿ ಕೊಲೆಗೈದು ಬ್ಯಾಗ್ ನಲ್ಲಿ ಶವ ಇಟ್ಟು ಎಸೆದ ನೇಪಾಳಿ ಪ್ರಜೆ

ಹೈದರಾಬಾದ್‌ನಲ್ಲಿ ನಡೆದ ಆಘಾತಕಾರಿ ಘಟನೆಯೊಂದರಲ್ಲಿ 30 ವರ್ಷದ ನೇಪಾಳಿ ವ್ಯಕ್ತಿಯೊಬ್ಬ ತನ್ನ ಲಿವ್-ಇನ್ ಸಂಗಾತಿ ಕೊಲೆ ಮಾಡಿದ್ದಾನೆ. ಗರ್ಭಧಾರಣೆಯ ವಿವಾದದ ನಂತರ ಕೊಲೆ ಮಾಡಿ ಆಕೆಯ ಶವವನ್ನು ಚೀಲದಲ್ಲಿ ತುಂಬಿಸಿ ನಿರ್ಜನ ಪ್ರದೇಶದಲ್ಲಿ ಬಿಟ್ಟು ಹೋಗಿದ್ದಾನೆ. ಆರೋಪಿಯನ್ನು ಬಂಧಿಸಲಾಗಿದೆ.

ಅಧಿಕಾರಿಗಳ ಪ್ರಕಾರ, ತಾರಾ ಬೊಹ್ರಾ ಎಂದು ಗುರುತಿಸಲಾದ ಸಂತ್ರಸ್ತೆ ಕೂಡ ನೇಪಾಳಿ ಪ್ರಜೆ. ಆಕೆಯ ಶವ ಜೂನ್ 4 ರಂದು ಬಚುಪಲ್ಲಿಯ ವಸತಿ ಪ್ರದೇಶದ ಬಳಿ ಟ್ರಾವೆಲ್ ಬ್ಯಾಗ್‌ನಲ್ಲಿ ಪತ್ತೆಯಾಗಿದೆ. ಕೃತ್ಯವೆಸಗಿದ ವ್ಯಕ್ತಿ ವಿಜಯ್ ಟೊಪ್ಪಾ ಅಲಿಯಾಸ್ ವಿಲ್ಸನ್ ಸ್ಥಳೀಯ ರೆಸ್ಟೋರೆಂಟ್‌ನಲ್ಲಿ ಅಡುಗೆಯವರಾಗಿ ಕೆಲಸ ಮಾಡುತ್ತಿದ್ದು, ಹೈದರಾಬಾದ್‌ ನ ಬೌರಾಮ್‌ ಪೇಟೆಯಲ್ಲಿ ಬಾಡಿಗೆ ಮನೆಯಲ್ಲಿ ತಾರಾ ಅವರೊಂದಿಗೆ ವಾಸಿಸುತ್ತಿದ್ದರು.

ಇಬ್ಬರು ಸಂಬಂಧ ಬೆಳೆಸುವ ಮೊದಲು ಸಾಮಾಜಿಕ ಮಾಧ್ಯಮ ವೇದಿಕೆ ಫೇಸ್‌ಬುಕ್ ಮೂಲಕ ಸಂಪರ್ಕ ಹೊಂದಿದ್ದರು ತಾರಾ ಈಗಾಗಲೇ ವಿವಾಹಿತರಾಗಿ ಇಬ್ಬರು ಮಕ್ಕಳನ್ನು ಹೊಂದಿದ್ದರೂ, ಅವರು ವಿಜಯ್ ಜೊತೆ ವಾಸಿಸಲು ಏಪ್ರಿಲ್ 15 ರಂದು ಹೈದರಾಬಾದ್‌ಗೆ ಬಂದಿದ್ದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಮೇ 23 ರಂದು ತಾರಾಳ ಗರ್ಭಧಾರಣೆಯ ಬಗ್ಗೆ ಇಬ್ಬರ ನಡುವೆ ತೀವ್ರ ವಾಗ್ವಾದ ನಡೆದಾಗ ಉದ್ವಿಗ್ನತೆ ಹೆಚ್ಚಾಯಿತು. ಕೋಪದ ಭರದಲ್ಲಿ ವಿಜಯ್ ಅವಳನ್ನು ಕತ್ತು ಹಿಸುಕಿ ಕೊಂದಿದ್ದಾನೆ. ಕೊಲೆಯ ನಂತರ, ಅವನು ಅವಳ ದೇಹವನ್ನು ಬ್ಯಾಗ್ ಬಚ್ಚಿಟ್ಟು ನಿರ್ಜನ ಸ್ಥಳದಲ್ಲಿ ಎಸೆದಿದ್ದಾನೆ.

ಸ್ಥಳೀಯ ಕಾವಲುಗಾರನೊಬ್ಬ ಅನುಮಾನಾಸ್ಪದ ಚೀಲವನ್ನು ನೋಡಿ ಅಧಿಕಾರಿಗಳಿಗೆ ತಿಳಿಸಿದಾಗ ಅಪರಾಧ ಬೆಳಕಿಗೆ ಬಂದಿತು. ವಿಧಿವಿಜ್ಞಾನ ತಜ್ಞರೊಂದಿಗೆ ಹೈದರಾಬಾದ್ ಪೊಲೀಸರು ತ್ವರಿತವಾಗಿ ವಿವರವಾದ ತನಿಖೆಯನ್ನು ಪ್ರಾರಂಭಿಸಿದರು.

ಶಂಕಿತನನ್ನು ಪತ್ತೆಹಚ್ಚಲು, ಐದು ವಿಶೇಷ ತಂಡಗಳನ್ನು ನಿಯೋಜಿಸಲಾಗಿದ್ದು, ಸಿಸಿಟಿವಿ ದೃಶ್ಯಾವಳಿಗಳು ಮತ್ತು ತಾಂತ್ರಿಕ ಡೇಟಾವನ್ನು ವಿಶ್ಲೇಷಿಸುವ ಮೂಲಕ, ಪೊಲೀಸರು ಹೈದರಾಬಾದ್ ಹೊರವಲಯದಲ್ಲಿರುವ ಮೆಡ್ಚಲ್ ಪ್ರದೇಶದಲ್ಲಿ ವಿಜಯ್‌ನನ್ನು ಪತ್ತೆಹಚ್ಚಿ ಬಂಧಿಸಿದ್ದಾರೆ. ವಿಚಾರಣೆಯ ಸಮಯದಲ್ಲಿ ತನ್ನ ಕೃತ್ಯವನ್ನು ಒಪ್ಪಿಕೊಂಡಿದ್ದಾನೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular