HomeLatest Newsವೀಕೆಂಡ್ ಗೆ ನಂದಿಬೆಟ್ಟಕ್ಕೆ ಹರಿದುಬಂದ ಪ್ರವಾಸಿಗರು: ಫುಲ್ ಟ್ರಾಫಿಕ್ ಜಾಮ್!

ವೀಕೆಂಡ್ ಗೆ ನಂದಿಬೆಟ್ಟಕ್ಕೆ ಹರಿದುಬಂದ ಪ್ರವಾಸಿಗರು: ಫುಲ್ ಟ್ರಾಫಿಕ್ ಜಾಮ್!

ಚಿಕ್ಕಬಳ್ಳಾಪುರ: ಐತಿಹಾಸಿಕ ಪ್ರವಾಸಿ ತಾಣ ನಂದಿಗಿರಿಧಾಮಕ್ಕೆ ಪ್ರವಾಸಿಗರ ದಂಡೇ ಹರಿದು ಬರುತ್ತಿದೆ. ವೀಕೆಂಡ್ ಹಿನ್ನೆಲೆಯಲ್ಲಿ ಸಾಗರೋಪಾದಿಯಲ್ಲಿ ಪ್ರವಾಸಿಗರು ಮುಂಜಾನೆಯಿಂದಲೇ ನಂದಿಬೆಟ್ಟದತ್ತ ಪ್ರಯಾಣ ಬೆಳೆಸಿದ್ದು, ಟ್ರಾಫಿಕ್ ಜಾಮ್ ಉಂಟಾಗಿದೆ.

ಇಂದು ಮುಂಜಾನೆಯಿಂದಲೇ ಪ್ರವಾಸಿಗರು ನಂದಿಬೆಟ್ಟ ಹತ್ತುತ್ತಿದ್ದಾರೆ. ಸೂರ್ಯೋದಯ ನೋಡಲೆಂದು ಸಾವಿರಾರು ಪ್ರವಾಸಿಗರು ತೆರಳಿದ್ದು, ಚಿಕ್ಕಬಳ್ಳಾಪುರದ ನಂದಿಗಿರಿಧಾಮ ಮಾರ್ಗದಲ್ಲಿ ಸಂಚಾರ ದಟ್ಟಣೆ ಉಂಟಾಗಿದೆ. ಇದರಿಂದಾಗಿ ವಾಹನ ಸವಾರರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.

ಕಿಲೋಮೀಟರ್ ದೂರದವರೆಗೂ ಸಾಲು ಸಾಲಾಗಿ ವಾಹನಗಳು ನಿಂತ ಜಾಗದಲ್ಲಿಯೇ ನಿಂತಿವೆ. ಪೊಲೀಸ್ ಚೆಕ್ ಪೋಸ್ಟ್ ನಿಂದ ಬೆಟ್ಟದ ಕ್ರಾಸ್ ವರೆಗೂ ಫುಲ್ ಟ್ರಾಫಿಕ್ ಜಾಮ್ ಸಂಭವಿಸಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular