RCB ಗೆಲುವಿನ ನಂತರ ಭಾವುಕರಾದ ವಿರಾಟ್ ಕೊಹ್ಲಿಯನ್ನ ತಬ್ಬಿಕೊಂಡು ಅನುಷ್ಕಾ ಶರ್ಮಾ ಮುತ್ತಿಟ್ಟಿದ್ದಾರೆ. ಈ ಕ್ಷಣವನ್ನು ಅಭಿಮಾನಿಗಳು ಸಂಭ್ರಮಿಸಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಈ ವೀಡಿಯೋ ಸಖತ್ ವೈರಲ್ ಆಗಿದೆ.
ಅಹಮದಾಬಾದ್ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ 2025 ರ ಫೈನಲ್ನಲ್ಲಿ ಪಂಜಾಬ್ ಕಿಂಗ್ಸ್ ತಂಡವನ್ನು ಸೋಲಿಸುವ ಮೂಲಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಅಂತಿಮವಾಗಿ ತನ್ನ ಪ್ರಶಸ್ತಿ ಬರವನ್ನು ನೀಗಿಸಿಕೊಂಡಿತು. ಈ ರೋಮಾಂಚಕ ಗೆಲುವು ಆರ್ಸಿಬಿ ಅಭಿಮಾನಿಗಳು ಮತ್ತು ಆಟಗಾರರ 18 ವರ್ಷಗಳ ಕಾಯುವಿಕೆಗೆ ಅಂತ್ಯ ಹಾಡಿತು. ಮೂರು ಬಾರಿ ಫೈನಲ್ ತಲುಪಿ ಸೋತಿದ್ದ ತಂಡಕ್ಕೆ, ಇದು ಒಂದು ಐತಿಹಾಸಿಕ ಕ್ಷಣವಾಗಿತ್ತು.
ಕೊನೆಯ ಎಸೆತ ಎಸೆದು ಆರ್ಸಿಬಿ ಜಯಭೇರಿ ಬಾರಿಸುತ್ತಿದ್ದಂತೆ, ಕ್ಯಾಮೆರಾ ಕ್ರೀಡಾಂಗಣದಲ್ಲಿ ಸಂಭ್ರಮದ ಅಲೆಯನ್ನು ಸೆರೆಹಿಡಿತು. ವಿರಾಟ್ ಕೊಹ್ಲಿ ಅವರ ಪತ್ನಿ ಅನುಷ್ಕಾ ಶರ್ಮಾ ಸಂತೋಷದಿಂದ ಜಿಗಿಯುತ್ತಾ ಭಾವುಕರಾದ ವಿರಾಟ್ ರನ್ನು ತಬ್ಬಿಕೊಂಡು ಮುತ್ತಿಟ್ಟಿದ್ದಾರೆ.

