HomeLatest Newsಆನೆ Vs ಕುದುರೆ: ರಸ್ತೆ ಮಧ್ಯೆ 'ಹಾತೀ-ಘೋಡಾ' ಫೈಟ್ ವೈರಲ್ | Viral Video

ಆನೆ Vs ಕುದುರೆ: ರಸ್ತೆ ಮಧ್ಯೆ ‘ಹಾತೀ-ಘೋಡಾ’ ಫೈಟ್ ವೈರಲ್ | Viral Video

ಮಧ್ಯಪ್ರದೇಶದ ರತಲಂ ನಗರದಲ್ಲಿ ಬೃಹತ್ ಆನೆಯ ಮೇಲೆ ಬಿಳಿ ಕುದುರೆಯೊಂದು ಆಕ್ರಮಣಕಾರಿಯಾಗಿ ದಾಳಿ ನಡೆಸಿದ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಈ ಅನಿರೀಕ್ಷಿತ ದೃಶ್ಯ ಕಂಡು ಸ್ಥಳೀಯರು ದಿಗ್ಭ್ರಾಂತರಾಗಿ ಪ್ರಾಣ ಉಳಿಸಿಕೊಳ್ಳಲು ಚೆಲ್ಲಾಪಿಲ್ಲಿಯಾಗಿ ಓಡಿದ್ದಾರೆ.

ಪಾಲ್ಸೋಡಾ ಫಾಟಾ ಬಳಿ ನಡೆದ ಈ ಘಟನೆಯನ್ನು ಸ್ಥಳೀಯರು ತಮ್ಮ ಮೊಬೈಲ್‌ನಲ್ಲಿ ಸೆರೆಹಿಡಿದಿದ್ದು, ಈ ವಿಡಿಯೋ ಇಂಟರ್ನೆಟ್‌ನಲ್ಲಿ ತೀವ್ರ ಸಂಚಲನ ಮೂಡಿಸಿದೆ. ವೈರಲ್ ಆದ ವಿಡಿಯೋದಲ್ಲಿ, ಆಕ್ರೋಶಗೊಂಡ ಕುದುರೆಯು ಬೃಹತ್ ಆನೆಯತ್ತ ನುಗ್ಗುತ್ತಿರುವುದು ಸ್ಪಷ್ಟವಾಗಿ ಕಾಣುತ್ತದೆ. ಸುತ್ತಮುತ್ತಲ ಜನ ಗಾಬರಿಯಿಂದ ಓಡುತ್ತಿರುವುದು ದೃಶ್ಯಗಳಲ್ಲಿ ಸೆರೆಯಾಗಿದೆ.

ಕುದುರೆಯು ಆನೆಯನ್ನು ಬೆನ್ನಟ್ಟಿ, ಕಚ್ಚುವುದು ಮತ್ತು ಅದರ ಮೇಲೆ ಜಿಗಿಯುವುದನ್ನು ವಿಡಿಯೋದಲ್ಲಿ ಕಾಣಬಹುದು. ಆನೆಯ ಮೇಲೆ ಕುಳಿತಿದ್ದ ಮಾವುತ ಕೋಲಿನಿಂದ ಪರಿಸ್ಥಿತಿಯನ್ನು ನಿಯಂತ್ರಿಸಲು ಪ್ರಯತ್ನಿಸಿದರೂ, ಕುದುರೆ ಮಾತ್ರ ಹಿಂದೆ ಸರಿಯಲು ನಿರಾಕರಿಸಿದೆ. ತನ್ನ ಶಕ್ತಿ ಮತ್ತು ಗಾತ್ರದ ಹೊರತಾಗಿಯೂ, ಆನೆಯು ರಕ್ಷಣಾತ್ಮಕವಾಗಿ ವರ್ತಿಸಿದ್ದು, ಪ್ರತಿದಾಳಿಗೆ ಮುಂದಾಗಲಿಲ್ಲ. ಆನೆಯು ದೂರ ಹೋಗಲು ಪ್ರಯತ್ನಿಸಿದರೂ, ಕುದುರೆ ಅಷ್ಟೇ ವೇಗವಾಗಿ ಅದನ್ನು ಬೆನ್ನಟ್ಟಿದ್ದು, ಇವೆರಡು ಪ್ರಾಣಿಗಳ ನಡುವಿನ ನಾಟಕೀಯ ಕಾದಾಟವನ್ನು ಇನ್ನಷ್ಟು ತೀವ್ರಗೊಳಿಸಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಪ್ರಾಥಮಿಕ ವರದಿಗಳ ಪ್ರಕಾರ, ಸಮೀಪದಲ್ಲಿ ಕಟ್ಟಲಾಗಿದ್ದ ಕುದುರೆ ಬಂಧನದಿಂದ ತಪ್ಪಿಸಿಕೊಂಡು ಆನೆಯ ಮೇಲೆ ದಾಳಿ ನಡೆಸಿದೆ ಎನ್ನಲಾಗಿದೆ. ಆದರೆ, ಕುದುರೆಯ ಈ ಆಕ್ರಮಣಕಾರಿ ವರ್ತನೆಗೆ ನಿಖರ ಕಾರಣ ತಿಳಿದುಬಂದಿಲ್ಲ.

ಯಾವುದೇ ಗಾಯಗಳಿಲ್ಲ:

ಈ ಘಟನೆಯಲ್ಲಿ ಸಾರ್ವಜನಿಕರಿಗೆ ಯಾವುದೇ ಗಾಯಗಳಾದ ಬಗ್ಗೆ ವರದಿಯಾಗಿಲ್ಲ. ಆದಾಗ್ಯೂ, ರಸ್ತೆಯ ಮಧ್ಯೆ ಎರಡು ದೊಡ್ಡ ಪ್ರಾಣಿಗಳು ಕಾದಾಟ ನಡೆಸಿದ್ದನ್ನು ನೋಡಿದ ಜನರಲ್ಲಿ ಆತಂಕ ಮನೆ ಮಾಡಿತ್ತು. ದೃಶ್ಯಾವಳಿಗಳಲ್ಲಿ, ಕಾದಾಟದ ವೇಳೆ ಒಂದು ಬೈಕ್ ಬಿದ್ದಿರುವುದು ಕಾಣುತ್ತದೆ.

ಈ ವಿಚಿತ್ರ ವಿಡಿಯೋವನ್ನು ಸಾಮಾಜಿಕ ಮಾಧ್ಯಮ ಬಳಕೆದಾರರು ವ್ಯಾಪಕವಾಗಿ ಹಂಚಿಕೊಳ್ಳುತ್ತಿದ್ದಾರೆ. ಸ್ಪಷ್ಟ ತೀರ್ಮಾನವಿಲ್ಲದೆ ಅಂತ್ಯಗೊಂಡ ಈ ‘ಹಾತೀ-ಘೋಡಾ’ ಫೈಟ್ ಇಂಟರ್ನೆಟ್ ಬಳಕೆದಾರರಲ್ಲಿ ತೀವ್ರ ಕುತೂಹಲ ಕೆರಳಿಸಿದೆ.

ಇದೇ ರೀತಿಯ ಮತ್ತೊಂದು ವಿಡಿಯೋವನ್ನು 2023ರಲ್ಲಿ ಆಫ್ರಿಕಾದ ಸಫಾರಿ ಗುಂಪೊಂದು ಯೂಟ್ಯೂಬ್‌ನಲ್ಲಿ ಪೋಸ್ಟ್ ಮಾಡಿತ್ತು. ಆ ವಿಡಿಯೋದಲ್ಲಿ ಗಂಡು ಆನೆಯೊಂದು ಕುದುರೆ ಸವಾರನೊಂದಿಗೆ ಮುಖಾಮುಖಿಯಾಗಿತ್ತು. “ನಮ್ಮ ಮಾರ್ಗದರ್ಶಕರು ಮತ್ತು ಕುದುರೆಗಳು ಹಲವು ವರ್ಷಗಳಿಂದ ಆನೆಗಳ ಜೊತೆ ಸವಾರಿ ಮಾಡುತ್ತಿವೆ. ಹಿಂಬದಿ ಮಾರ್ಗದರ್ಶಕರಿಗೆ ಇತರ ಸವಾರರನ್ನು ಆನೆಯಿಂದ ದೂರ ಕರೆದುಕೊಂಡು ಹೋಗಲು ಅವಕಾಶ ನೀಡಲು, ಪ್ರಮುಖ ಮಾರ್ಗದರ್ಶಕ ಮತ್ತು ಪ್ರಮುಖ ಕುದುರೆಯ ಕೆಲಸವೆಂದರೆ ತಮ್ಮ ನೆಲೆಯನ್ನು ಕಾಯ್ದುಕೊಳ್ಳುವುದು… ಆನೆಗಳು ಪ್ರತಿಕ್ರಿಯಿಸುತ್ತವೆ ಮತ್ತು ಮುಂದೆ ಸಾಗುತ್ತವೆ” ಎಂದು ಆ ವಿಡಿಯೋಗೆ ಅಡಿಬರಹ ನೀಡಲಾಗಿತ್ತು.


ಈ ರೀತಿಯ ವಿಚಿತ್ರ ಪ್ರಾಣಿ ಕಾದಾಟಗಳನ್ನು ನೀವು ಎಂದಾದರೂ ನೋಡಿದ್ದೀರಾ?


https://twitter.com/i/status/1928857509457985666

For Latest News Updates, Join Our Whatsapp Community🚩
RELATED ARTICLES

Most Popular