HomeLatest NewsBREAKING : ನಿಮ್ಮ ಹೇಳಿಕೆಯಿಂದ ನಟ ಶಿವರಾಜ್ ಕುಮಾರ್ ಗೆ ಸಮಸ್ಯೆಯಾಗಿದೆ : ನಟ...

BREAKING : ನಿಮ್ಮ ಹೇಳಿಕೆಯಿಂದ ನಟ ಶಿವರಾಜ್ ಕುಮಾರ್ ಗೆ ಸಮಸ್ಯೆಯಾಗಿದೆ : ನಟ ‘ಕಮಲ್ ಹಾಸನ್’ ಗೆ ಹೈಕೋರ್ಟ್ ತರಾಟೆ

ಬೆಂಗಳೂರು : ನಿಮ್ಮ ಹೇಳಿಕೆಯಿಂದ ನಟ ಶಿವರಾಜ್ ಕುಮಾರ್ ಗೆ ಸಮಸ್ಯೆಯಾಗಿದೆ ಎಂದು ನಟ ಕಮಲ್ ಹಾಸನ್ ಗೆ ಹೈಕೋರ್ಟ್ ತರಾಟೆ ತೆಗೆದುಕೊಂಡಿದೆ.

ಕರ್ನಾಟಕದಲ್ಲಿ ಥಗ್ ಲೈಫ್ ಸಿನಿಮಾ ಬಿಡುಗಡೆಗೆ ಅವಕಾಶ ಕೋರಿ ಕಮಲ್ ಹಾಸನ್ ಹೈಕೋರ್ಟ್ ಮೆಟ್ಟಿಲೇರಿದ್ದು, ಹೈಕೋರ್ಟ್ ನಲ್ಲಿ ನ್ಯಾ ಎಂ ನಾಗಪ್ರಸನ್ನ ಪೀಠದಲ್ಲಿ ಅರ್ಜಿ ವಿಚಾರಣೆ ನಡೆಯುತ್ತಿದೆ.ಬೇರೆಯವರ ಭಾವನೆಗೆ ಧಕ್ಕೆ ತಂದು ಸಿನಿಮಾ ರಿಲೀಸ್ ಮಾಡಲು ಹೊರಟಿದ್ದೀರಾ..? ನೀವು ಕ್ಷಮೆಯಾಚಿಸಿದರೆ ಸಮಸ್ಯೆಯೇ ಇರಲ್ಲ ಎಂದು ಹೈಕೋರ್ಟ್ ಕಮಲ್ ಹಾಸನ್ ಪರ ವಕೀಲರಿಗೆ ಹೇಳಿದೆ. ನೀವು ಕ್ಷಮೆಯಾಚಿಸದಿದ್ರೆ ಬಿಡಿ..ಕರ್ನಾಟಕದಲ್ಲಿ ಸಿನಿಮಾ ಯಾಕೆ ರಿಲೀಸ್ ಆಗಬೇಕು ಎಂದು ಹೈಕೋರ್ಟ್ ಪ್ರಶ್ನಿಸಿದೆ.

ವಿವಾದದ ಹಿನ್ನೆಲೆ
ಕನ್ನಡದ ಬಗ್ಗೆ ನಟ ಕಮಲ್ ಹಾಸನ್ ವಿವಾದಿತ ಹೇಳಿಕೆ ನೀಡಿದ್ದರು. ಕನ್ನಡ ಹುಟ್ಟಿದ್ದು ತಮಿಳುನಿಂದ ಎಂದು ಹೇಳುವ ಮೂಲಕ ಹೊಸ ವಿವಾದ ಸೃಷ್ಟಿಸಿದ್ದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಥಗ್ ಲೈಫ್ ಇವೆಂಟ್ ನಲ್ಲಿ ಭಾಗಿಯಾಗಿದ್ದ ನಟ ಕಮಲ್ ಹಾಸನ್, ಕನ್ನಡದ ಬಗ್ಗೆ ಮಾತನಾಡುತ್ತಾ ಈ ಹೇಳಿಕೆ ನೀಡಿದ್ದಾರೆ. ನಟ ಶಿವರಾಜ್ ಕುಮಾರ್ ಎದುರಲ್ಲೇ ಕಮಲ್ ಹಾಸನ್, ಕನ್ನಡದ ಬಗ್ಗೆ ವಿವಾದಾತ್ಮಾ ಹೇಳಿಕೆ ನೀಡಿದ್ದು, ಸಾಮಜಿಕ ಜಾಲತಾಣಗಳಲ್ಲಿ ಭಾರಿ ಆಕ್ರೋಶ ವ್ಯಕ್ತವಾಗಿದೆ. ಕನ್ನಡಿಗರ ಪ್ರೀತಿ, ಗೌರವಕ್ಕೆ ನಮಿಸುತ್ತಲೇ ಕಮಲ್ ಹಾಸನ್ ನಿಮ್ಮ ಕನ್ನಡ ನಮ್ಮಿಂದ ಬಂದಿದ್ದು. ಕನ್ನಡ ಹುಟ್ಟಿದ್ದು, ನಮ್ಮ ತಮಿಳಿನಿಂದ ಎಂದು ಹೇಳಿದ್ದಾರೆ.

ನಟ ಕಮಲ್ ಹಾಸನ್ ವಿರುದ್ಧ ಸೋಷಿಯಲ್ ಮೀಡಿಯಾಗಳಲ್ಲಿ ಆಕ್ರೋಶ ವ್ಯಕ್ತವಾಗಿದ್ದು, ತಮಿಳಿಗಿಂತ ಕನ್ನಡ ಭಾಷೆಯೇ ಪುರಾತನವಾದದ್ದು. ಕನ್ನಡ ತಮಿಳಿನಿಂದ ಬಂದಿದ್ದಲ್ಲ ಎಂದು ಗುಡುಗಿದ್ದಾರೆ. ಕಮಲ್ ಹೇಳಿಕೆ ತಮಿಳುಗರ ಶ್ರೇಷ್ಠತೆಯ ವ್ಯಸನ ಎಂದು ಕನ್ನಡಿಗರು ಕಿಡಿಕಾರಿದ್ದರು.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular