HomeLatest NewsBIG NEWS: ಜನನ ಪ್ರಮಾಣ ಪತ್ರದಲ್ಲಿ ತಂದೆ, ತಾಯಿ ಬದಲು 'ಪೋಷಕರು' ಎಂದು ನಮೂದಿಸಬಹುದು: ದೇಶದಲ್ಲೇ...

BIG NEWS: ಜನನ ಪ್ರಮಾಣ ಪತ್ರದಲ್ಲಿ ತಂದೆ, ತಾಯಿ ಬದಲು ‘ಪೋಷಕರು’ ಎಂದು ನಮೂದಿಸಬಹುದು: ದೇಶದಲ್ಲೇ ಮೊದಲ ಬಾರಿಗೆ ಹೈಕೋರ್ಟ್ ಮಹತ್ವದ ಆದೇಶ

ತಿರುವನಂತಪುರಂ: ಲಿಂಗತ್ವ ಅಲ್ಪಸಂಖ್ಯಾತ ದಂಪತಿ ಮಗುವಿನ ಜನನ ಪ್ರಮಾಣ ಪತ್ರದಲ್ಲಿ ತಮ್ಮನ್ನು ತಂದೆ ಮತ್ತು ತಾಯಿ ಎಂದು ನಮೂದಿಸುವ ಬದಲಿಗೆ ಪೋಷಕರು ಎಂದು ನಮೂದಿಸಬಹುದು ಎಂದು ಕೇರಳ ಹೈಕೋರ್ಟ್ ಆದೇಶ ನೀಡಿದೆ.

ದೇಶದಲ್ಲಿ ಇದೇ ಮೊದಲ ಬಾರಿಗೆ ಇಂತಹ ತೀರ್ಪು ಬಂದಿದೆ. 2023ರ ಫೆಬ್ರವರಿಯಲ್ಲಿ ಮಗುವಿಗೆ ಜನ್ಮ ನೀಡಿದ ಕೇರಳದ ಜಹಾದ್(25) ಮತ್ತು ಜಿಯಾ(24) ದಂಪತಿಗೆ ಕೇರಳ ಹೈಕೋರ್ಟ್ ನಿರ್ಧಾರದಿಂದ ಸಮಾಧಾನ ತಂದಿದೆ.

ಕೋಯಿಕ್ಕೋಡ್ ನಗರ ಪಾಲಿಕೆ ನೀಡಿದ ಜನನ ಪ್ರಮಾಣ ಪತ್ರದಲ್ಲಿ ಮಗುವಿಗೆ ಜನ್ಮ ನೀಡಿದ ಜಹಾದ್ ಅವರನ್ನು ತಾಯಿ ಎಂದು, ಆಕೆಯ ಸಂಗಾತಿ ಜಿಯಾ ಅವರನ್ನು ತಂದೆ ಎಂದು ಉಲ್ಲೇಖಿಸಲಾಗಿತ್ತು. ನಾವಿಬ್ಬರೂ ಲಿಂಗತ್ವ ಅಲ್ಪಸಂಖ್ಯಾತರಾಗಿರುವುದರಿಂದ ತಮ್ಮನ್ನು ಪೋಷಕರು ಎಂದು ಉಲ್ಲೇಖಿಸುವಂತೆ ಅವರು ಮನವಿ ಮಾಡಿದ್ದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಕೇರಳದ ಲಿಂಗತ್ವ ಅಲ್ಪಸಂಖ್ಯಾತ ಸಮುದಾಯದ ಮೊದಲ ವಕೀಲೆಯಾಗಿರುವ ಪದ್ಮ ಲಕ್ಷ್ಮಿ ಅವರು ಕೇರಳ ಹೈಕೋರ್ಟ್ ನಲ್ಲಿ ಈ ಲಿಂಗತ್ವ ಅಲ್ಪಸಂಖ್ಯಾತ ದಂಪತಿಯ ಪರವಾಗಿ ವಾದ ಮಂಡಿಸಿದ್ದರು.

ಈ ದಂಪತಿಯ ಅರ್ಜಿಯನ್ನು ಅಂಗೀಕರಿಸಿದ ನ್ಯಾಯಮೂರ್ತಿ ಜಿಯಾದ್ ರೆಹಮಾನ್ ಅವರು ಇಬ್ಬರನ್ನೂ ಪೋಷಕರು ಎಂದು ಉಲ್ಲೇಖಿಸುವ ಜನನ ಪ್ರಮಾಣ ಪತ್ರ ನೀಡುವಂತೆ ಕೋಯಿಕ್ಕೋಡ್ ನಗರ ಪಾಲಿಕೆಗೆ ನಿರ್ದೇಶನ ನೀಡಿದೆ.

ಕೋಯಿಕ್ಕೋಡ್ ಸರ್ಕಾರಿ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ 2023ರ ಫೆಬ್ರವರಿ 8 ರಂದು ಜಹಾದ್ ಮಗುವಿಗೆ ಜನ್ಮ ನೀಡಿದ್ದರು. ಲಿಂಗತ್ವ ಅಲ್ಪಸಂಖ್ಯಾತರೊಬ್ಬರು ಜನ್ಮ ನೀಡಿದ ಮೊದಲ ಪ್ರಕರಣ ಇದು ಎಂದು ಹೇಳಲಾಗಿತ್ತು.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular