HomeKarnatakaBREAKING : 'RCB' ಗೆದ್ದಿದ್ದಕ್ಕೆ 'ಪೆಟ್ರೋಲ್ ಬಾಂಬ್' ರೀತಿಯಲ್ಲಿ ಸಿಡಿಸಿ ಸಂಭ್ರಮಾಚರಣೆ : ರಾಯಚೂರಿನಲ್ಲಿ 8...

BREAKING : ‘RCB’ ಗೆದ್ದಿದ್ದಕ್ಕೆ ‘ಪೆಟ್ರೋಲ್ ಬಾಂಬ್’ ರೀತಿಯಲ್ಲಿ ಸಿಡಿಸಿ ಸಂಭ್ರಮಾಚರಣೆ : ರಾಯಚೂರಿನಲ್ಲಿ 8 ಯುವಕರು ಅರೆಸ್ಟ್.!

ಬೆಂಗಳೂರು : ಮೊನ್ನೆ ನಡೆದ ಐಪಿಎಲ್ ಪಂದ್ಯಾವಳಿಯಲ್ಲಿ ಆರ್ ಸಿಬಿ ( ರಾಯಲ್ ಚಾಲೆಂಜರ್ಸ್ ಬೆಂಗಳೂರು) ಗೆದ್ದಿದ್ದಕ್ಕೆ ಪೆಟ್ರೋಲ್ ಬಾಂಬ್ ರೀತಿಯಲ್ಲಿ ಸಿಡಿಸಿ ಸಂಭ್ರಮಾಚರಣೆ ನಡೆಸಿದ 8 ಯುವಕರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಮೇ 29 ರಂದು ಮಸ್ಕಿ ತಾಲೂಕಿನ ಹಸಮಕಲ್ ಗ್ರಾಮದಲ್ಲಿ ಘಟನೆ ನಡೆದಿತ್ತು. ರಾಯಚೂರು ಜಿಲ್ಲೆ ಮಸ್ಕಿ ತಾಲೂಕಿನ ಬಳಗನೂರು ಠಾಣೆಯಲ್ಲಿ ಘಟನೆ ಸಂಬಂಧ ಎಫ್ ಐ ಆರ್ ದಾಖಲಾಗಿತ್ತು.

ಪ್ಲಾಸ್ಟಿಕ್ ಬ್ಯಾಗ್ ನಲ್ಲಿ ಪೆಟ್ರೋಲ್ ತುಂಬಿಸಿ ಅದಕ್ಕೆ ಮೈದಾ ಹಿಟ್ಟು ಹಾಕಿ ಬಾಂಬ್ ರೀತಿ ಸಿಡಿಸಿ ಸಂಭ್ರಮಾಚರಣೆ ನಡೆಸಿದ್ದರು. ನಂತರ ಈ ವಿಡಿಯೋ ಎಲ್ಲೆಡೆ ವೈರಲ್ ಆಗಿತ್ತು, ವಿಡಿಯೋ ವೈರಲ್ ಆಗುತ್ತಿದ್ದಂತೆ ಎಚ್ಚೆತ್ತ ಪೊಲೀಸರು ಎಫ್ ಐ ಆರ್ ದಾಖಲಿಸಿ 8 ಮಂದಿಯನ್ನು ವಶಕ್ಕೆ ಪಡೆದಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಸಾಂದರ್ಭಿಕ ಚಿತ್ರ

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular