HomeLatest NewsBIG NEWS: ರಾಜ್ಯದಲ್ಲಿ ರೈತರ ಆತ್ಮಹತ್ಯೆ ಪ್ರಕರಣ ಗಣನೀಯ ಇಳಿಕೆ

BIG NEWS: ರಾಜ್ಯದಲ್ಲಿ ರೈತರ ಆತ್ಮಹತ್ಯೆ ಪ್ರಕರಣ ಗಣನೀಯ ಇಳಿಕೆ

ರೈತರನ್ನು ನಷ್ಟದ ಸುಳಿಯಿಂದ ಮೇಲೆತ್ತುವ ಸರ್ಕಾರದ ಎಲ್ಲಾ ಪ್ರಯತ್ನಗಳ ಫಲವಾಗಿ ರಾಜ್ಯದಲ್ಲಿ ರೈತರ ಆತ್ಮಹತ್ಯೆ ಗಣನೀಯ ಇಳಿಕೆಯಾಗಿದೆ.

ನಮ್ಮ ಸರ್ಕಾರವು ರೈತರ ಪರವಾಗಿದ್ದು, ಅವರ ಕಾಳಜಿಯನ್ನು ವಹಿಸುತ್ತಿದೆ. ಇದನ್ನು ಭಾಷಣಕ್ಕೆ ಸೀಮಿತವಾಗಿಸದೆ, ಕಾರ್ಯರೂಪಕ್ಕೆ ತಂದು ಅವರಿಗಾಗಿ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಿ ನೆಮ್ಮದಿಯ ಬದುಕನ್ನು ಕಲ್ಪಿಸಿದ್ದೇವೆ.

ರಾಜ್ಯಾದ್ಯಂತ ಬೀಜ, ಗೊಬ್ಬರ, ರಾಸಾಯನಿಕಗಳ ಲಭ್ಯತೆಯನ್ನು ಖಾತ್ರಿಪಡಿಸಲಾಗಿದೆ. ನೀರಾವರಿ ಯೋಜನೆಗಳು ಹಾಗೂ ಕೃಷಿ ಭಾಗ್ಯದಂತಹ ಕಾರ್ಯಕ್ರಮಗಳ ಮೂಲಕ ನೀರಿನ ಪೂರೈಕೆ ಮಾಡಲಾಗಿದೆ, ಕೃಷಿ ಸಾಲ ಯೋಜನೆ, ಬೆಳೆನಷ್ಟ ಪರಿಹಾರ ವಿತರಣೆ ಮಾಡಿ ರೈತರಲ್ಲಿ ಆರ್ಥಿಕ ಬಲ ತುಂಬಲಾಗಿದೆ. ಹಾರ್ವೆಸ್ಟರ್ ಹಬ್‌ಗಳ ಸ್ಥಾಪನೆ ಮೂಲಕ ಆಧುನಿಕ ಯಂತ್ರೋಪಕರಣಗಳ ಬಳಕೆಗೆ ಉತ್ತೇಜನ ನೀಡಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಕೃಷಿ ಸಂಸ್ಕರಣೆ, ರಿಯಾಯಿತಿ ದರದಲ್ಲಿ ಜೈವಿಕ ಕೀಟ ನಾಶಕ ವಿತರಣೆ, ಹಸಿರೆಲೆ ಗೊಬ್ಬರ, ಸಿರಿಧಾನ್ಯ ಬೆಳೆಯಲು ಪ್ರೋತ್ಸಾಹ ಮತ್ತು ಸಕಾಲದಲ್ಲಿ ಬೆಂಬಲ ಬೆಲೆ ಖರೀದಿ ಕೇಂದ್ರಗಳ ಸ್ಥಾಪನೆಯಂತಹ ಅನೇಕ ಕಾರ್ಯಕ್ರಮಗಳು ರೈತರ ಮನೋಬಲ ಹೆಚ್ಚಿಸಿದೆ.

ರೈತರನ್ನು ನಷ್ಟದ ಸುಳಿಯಿಂದ ಮೇಲೆತ್ತುವ ನಮ್ಮ ಎಲ್ಲಾ ಪ್ರಯತ್ನಗಳ ಫಲವಾಗಿ ರಾಜ್ಯದಲ್ಲಿ ರೈತರ ಆತ್ಮಹತ್ಯೆ ಗಣನೀಯ ಇಳಿಕೆಯಾಗಿದೆ. ಈ ಮೂಲಕ ಅನ್ನದಾತರ ಬದುಕಿಗೆ ನೆಮ್ಮದಿಯ ಗ್ಯಾರಂಟಿ ನೀಡಿದ್ದೇವೆ ಎಂದು ಸಿಎಂ ಸಿದ್ಧರಾಮಯ್ಯ ತಿಳಿಸಿದ್ದಾರೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular