HomeLatest NewsBREAKING: ರಣಮಳೆಗೆ ಆಗುಂಬೆ ಘಾಟಿಯಲ್ಲಿ ಪಲ್ಟಿಯಾದ ಕಾರು: ತಾಯಿ-ಮಗುವಿನ ರಕ್ಷಣೆ

BREAKING: ರಣಮಳೆಗೆ ಆಗುಂಬೆ ಘಾಟಿಯಲ್ಲಿ ಪಲ್ಟಿಯಾದ ಕಾರು: ತಾಯಿ-ಮಗುವಿನ ರಕ್ಷಣೆ

ಶಿವಮೊಗ್ಗ: ಶಿವಮೊಗ್ಗ ಜಿಲ್ಲೆಯಲ್ಲಿ ಭಾರಿ ಮಳೆಯಿಂದಾಗಿ ಅವಘಾವೊಂದು ಸಂಭವಿಸಿದೆ. ಆಗುಂಬೆ ಘಾಟಿಯಲ್ಲಿ ಕಾರು ಪಲ್ಟಿಯಾಗಿ ಬಿದ್ದಿರುವ ಘಟನೆ ನಡೆದಿದೆ.

ರಣಮಳೆಯಿಂದಾಗಿ ಚಾಲಕನ ನಿಯಂತ್ರಣ ತಪ್ಪಿದ ಕಾರು ಆಗುಂಬೆ ಘಾಟಿಯಲ್ಲಿ ಪಲ್ಟಿಯಾಗಿ ಬಿದ್ದಿದೆ. ಕಾರಿನ ನಾಲ್ಕು ಚಕ್ರಗಳು ಮೇಲಾಗಿ ಕಾರು ಬಿದ್ದಿದೆ. ಕಾರಿನ ಒಳಗೆ ಸಿಲುಕಿದ್ದ ತಾಯಿ ಹಾಗೂ ಮಗು ಹೊರಬರಲಾಗದೇ ಪರದಾಟ ನಡೆಸಿದ್ದರು. ಈ ವೇಳೆ ಸ್ಥಳಕ್ಕಾಗಮಿಸಿದ ಸ್ಥಳೀಯರು ತಾಯಿ ಹಾಗೂ ಮಗುವನ್ನು ರಕ್ಷಿಸಿದ್ದಾರೆ.

ಆಗುಂಬೆ ಘಾಟಿಯ 6ನೇ ಕ್ರಾಸ್ ನಲ್ಲಿ ಘಟನೆ ನಡೆದಿದೆ. ಕಾರುಆಗುಂಬೆಯಿಂದ ಉಡುಪಿಗೆ ತೆರಳುತ್ತಿತ್ತು ಎಂದು ತಿಳಿದುಬಂದಿದೆ. ಅಪಘಾತದಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular