ಡಿಜಿಟಲ್ ಡೆಸ್ಕ್ : ಸೀತೆ ಪಾತ್ರಧಾರಿ ನಟಿ ‘ಕೃತಿ ಸನೋನ್’ ಮದ್ಯದ ಬ್ರ್ಯಾಂಡ್ ಗೆ ರಾಯಭಾರಿಯಾಗಿದ್ದು, ವ್ಯಾಪಕ ಟೀಕೆಗೆ ಗುರಿಯಾಗಿದ್ದಾರೆ.
ಹೌದು, “ಮ್ಯಾಜಿಕ್ ಮೊಮೆಂಟ್ಸ್ ವೋಡ್ಕಾ” ಎಂಬ ವೋಡ್ಕಾ ಬ್ರ್ಯಾಂಡ್ ಗೆ ಬಾಲಿವುಡ್ ನಟಿ ಕೃತಿ ಸನೋನ್ ರಾಯಭಾರಿಯಾಗಿದ್ದಾರೆ. ಆದರೆ ನೆಟ್ಟಿಗರು ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಆದಿಪುರುಷ್ ಸಿನಿಮಾದಲ್ಲಿ ಕೃತಿ ಸನೋನ್ ಸೀತೆ ಪಾತ್ರದಲ್ಲಿ ಕಾಣಿಸಿಕೊಂಡು ಮೆಚ್ಚುಗೆಗೆ ಪಾತ್ರವಾಗಿದ್ದರು. ಸೀತೆ ಪಾತ್ರ ಮಾಡಿದ ಮೇಲೆ ಮದ್ಯದ ಜಾಹೀರಾತುಗಳಲ್ಲಿ ಕಾಣಿಸಿಕೊಳ್ಳುವುದು ಸರಿಯಲ್ಲ ಎಂದು ಕೆಲವರು ವಾದಿಸಿದ್ದಾರೆ.


