ಡಿಜಿಟಲ್ ಡೆಸ್ಕ್ : ಮೂವರು ಪುರುಷರನ್ನು ರಸ್ತೆಯಲ್ಲಿ ಕುಳಿತುಕೊಳ್ಳುವಂತೆ ಒತ್ತಾಯಿಸಿ ಪೊಲೀಸರು ಲಾಠಿಯಿಂದ ತಳಿಸಿದ ಘಟನೆಯ ವೀಡಿಯೋ ವೈರಲ್ ಆಗಿದ್ದು, ಪೊಲೀಸ್ ಸಿಬ್ಬಂದಿಗಳನ್ನು ಅಮಾನತು ಮಾಡಲಾಗಿದೆ.
ಆಂಧ್ರಪ್ರದೇಶದ ಗುಂಟೂರಿನ ತೆನಾಲಿ ಹೆದ್ದಾರಿಯಲ್ಲಿ ಈ ಘಟನೆ ವರದಿಯಾಗಿದ್ದು, ಕೃತ್ಯದ ವೀಡಿಯೊವನ್ನು ವೈಎಸ್ಆರ್ ಪಕ್ಷದ ವಕ್ತಾರ ಅಂಬಟಿ ರಾಂಬಾಬು ಹಂಚಿಕೊಂಡಿದ್ದಾರೆ.
ಮೂವರು ವ್ಯಕ್ತಿಗಳನ್ನು ವಿಕ್ಟರ್, ಬಾಬುಲಾಲ್ ಮತ್ತು ರಾಕೇಶ್ ಎಂದು ಗುರುತಿಸಲಾಗಿದ್ದು, ಕಾನ್ಸ್ಟೆಬಲ್ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ ಅವರನ್ನು ಥಳಿಸಲಾಯಿತು. ಕಾನ್ಸ್ಟೆಬಲ್ ಮೇಲೆ ಹಲ್ಲೆ ನಡೆಸುವಾಗ ಮೂವರು ಡ್ರಗ್ಸ್ ಸೇವಿಸಿದ್ದರು ಎಂದು ಆರೋಪಿಸಲಾಗಿದೆ.ವಿಷಯ ಬೆಳಕಿಗೆ ಬರುತ್ತಿದ್ದಂತೆ, ಮೂವರನ್ನು ಐತಾನಗರ ಪ್ರದೇಶಕ್ಕೆ ಕರೆದೊಯ್ದು ಒಬ್ಬ ಪೊಲೀಸ್ ಸಿಬ್ಬಂದಿ ಅವರ ಕಾಲಿಗೆ ಕೋಲುಗಳಿಂದ ಹೊಡೆದರು, ಮತ್ತೊಬ್ಬ ಪೊಲೀಸ್ ಸಿಬ್ಬಂದಿ ಅವರಿಗೆ ಸಹಾಯ ಮಾಡಿದರು.

