HomeLatest NewsBIG NEWS : 'ಪಂಚತಂತ್ರ 2.0' ತಂತ್ರಾಂಶದಲ್ಲಿ ಆಸ್ತಿ ತೆರಿಗೆ : ರಾಜ್ಯ ಸರ್ಕಾರದಿಂದ...

BIG NEWS : ‘ಪಂಚತಂತ್ರ 2.0’ ತಂತ್ರಾಂಶದಲ್ಲಿ ಆಸ್ತಿ ತೆರಿಗೆ : ರಾಜ್ಯ ಸರ್ಕಾರದಿಂದ ಮಹತ್ವದ ಆದೇಶ.!

ಬೆಂಗಳೂರು : ಪಂಚತಂತ್ರ 2.0 ತಂತ್ರಾಂಶದಲ್ಲಿ ಆಸ್ತಿಗೆ ತೆರಿಗೆ ವಿಧಿಸುವ ಬಗ್ಗೆ ರಾಜ್ಯ ಸರ್ಕಾರದ ಮಹತ್ವದ ಆದೇಶ ಹೊರಡಿಸಿದೆ.

ಏನಿದೆ ಆದೇಶದಲ್ಲಿ..?

ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ (ಗ್ರಾಮ ಪಂಚಾಯತಿಗಳ ತೆರಿಗೆ, ದರ ಮತ್ತು ಫೀಜುಗಳು) ನಿಯಮಗಳು, 2021 ರಸ್ತೆಯ ಗ್ರಾಮ ಪಂಚಾಯತಿಗಳ ತೆರಿಗೆ, ದರ ಮತ್ತು ಫೀಜುಗಳನ್ನು ವಿಧಿಸಲು ಸೈಯಂಚಾಲಿತ ತೆರಿಗೆ ಲೆಕ್ಕಾಚಾರ ಮಾಡುವ ವಿಧಾನವನ್ನು 지 Automation of Property Tax ವ್ಯವಸ್ಥೆಯನ್ನು ಡಿಜಿಟಲೀಕರಣಗೊಳಿಸುವ ನಿಟ್ಟಿನಲ್ಲಿ ವಂಚತಂತ್ರ 2.0 ತಂತ್ರಾಂಶದಲ್ಲಿ ‘ತೆರಿಗೆ ಸಂಗ್ರಹಣೆ” ಮಾಡ್ಯುಲ್ ನ್ನು ಅಭಿವೃದ್ಧಿಪಡಿಸಿ, ಅನುಷ್ಠಾನಗೊಳಿಸಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ (ಗ್ರಾಮ ಪಂಚಾಯತಿಗಳ ಆಯವ್ಯಯ ಮತ್ತು ಲೆಕ್ಕಪತ್ರಗಳು) ನಿಯಮಗಳು, 2006 ರ ನಿಯಮ 21 ರನ್ವಯ ಗ್ರಾಮ ಪಂಚಾಯತಿಗಳಲ್ಲಿ ತೆರಿಗೆ ವಸೂಲಾತಿ ಪ್ರಕ್ರಿಯೆಯಲ್ಲಿರುವ ಅವ್ಯವಹಾರಗಳನ್ನು ತಡೆಗಟ್ಟಿ ಪಾರದರ್ಶಕತೆಯನ್ನು ಕಾಪಾಡುವ ಉದ್ದೇಶದಿಂದ ತೆರಿಗೆ, ದರ ಮತ್ತು ಫೀಜುಗಳನ್ನು ಸಂಗ್ರಹಣೆ ಮಾಡಲು ನಮೂನೆ-3ರಲ್ಲಿ ನಿಗಧಿಪಡಿಸಿರುವ ಮ್ಯಾನ್ಯುಯಲ್ ರಶೀದಿಗಳನ್ನು ನೀಡುವ ಬದಲು ಡಿಜಿಟಲ್ ರಶೀದಿಗಳನ್ನು ಸೃಜಿಸಿ, ಸಾರ್ವಜನಿಕರಿಗೆ ನೀಡಲು ಪಂಚತಂತ್ರ 20 ತಂತ್ರಾಂಶದಲ್ಲಿ ಅವಕಾಶ ಕಲ್ಪಿಸಲಾಗಿದೆ.

ಅದರಂತೆ, ಕಳೆದ ಆರ್ಥಿಕ ವರ್ಷದಲ್ಲಿ ಪಂಚತಂತ್ರ 2.0 ತಂತ್ರಾಂಶದಲ್ಲಿ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ (ಗ್ರಾಮ ಪಂಚಾಯತಿಗಳ ತೆರಿಗೆ, ದರ ಮತ್ತು ಫೀಜುಗಳು) ನಿಯಮಗಳು, 2021 ರನ್ನಯ 2024-25 ನೇ ಸಾಲಿನಲ್ಲಿ ಪ್ರತಿಯೊಂದು ಆಸ್ತಿಗಳಿಗೆ Property Profile ಅನ್ನು ಇಂಧೀಕರಿಸಿ, ಆಸ್ತಿಗಳಿಗೆ ತೆರಿಗೆಯನ್ನು ವಿಧಿಸಲಾಗಿದೆ.

ಇದರಿಂದಾಗಿ, ಗ್ರಾಮ ಪಂಚಾಯತಿಗಳ ಅಸ್ತಿ ತೆರಿಗೆಯ 2024-25 ನೇ ಸಾಲಿನ ಬೇಡಿಕೆಯು ರೂ.1600/- ಕೋಟಿಗೆ ತಲುಪಿದೆ ಹಾಗೂ ಸಾರ್ವಜನಿಕರು ಆನ್-ಲೈನ್ ಮೂಲಕ ತೆರಿಗೆ ಪಾವತಿಸುವಲ್ಲಿ ಸಹಕಾರಿಯಾಗಿದೆ.
ಆದರೇ, ಕೆಲವೊಂದು ಗ್ರಾಮ ಪಂಚಾಯತಿಗಳು ಒಂದೇ ಆಸ್ತಿಗೆ ಹಲವಾರು ಬಾರಿ Property Profile ಅನ್ನು ಇಂಧೀಕರಿಸಿ, ಆಸ್ತಿಗಳಿಗೆ ತೆರಿಗೆಯನ್ನು ಬದಲಾವಣೆ ಮಾಡುವ ಮೂಲಕ ಸಾರ್ವಜನಿಕರಿಗೆ ತೆರಿಗೆ ಪಾವತಿಸಲು ತೊಂದರೆ ಉಂಟಾಗುತ್ತಿದೆ. ಈ ಬಗ್ಗೆ, ಒಂದು ಬಾರಿ ಆಸ್ತಿ ಮಾಲೀಕರು ಆಯಾ ವರ್ಷದ ತೆರಿಗೆಯನ್ನು ಪಾವತಿಸಿದ ನಂತರ ಆಯಾ ಆರ್ಥಿಕ ಸಾಲಿನಲ್ಲಿ ಮತ್ತೊಮ್ಮೆ ಸದರಿ ಆಸ್ತಿಗಳಿಗೆ Property Profile ಅನ್ನು ಇಂಧೀಕರಿಸುವ ಆಯ್ಕೆಯನ್ನು ನಿರ್ಷಿಯಗೊಳಿಸಲಾಗಿದೆ.

ಪ್ರಸ್ತುತ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ (ಗ್ರಾಮ ಪಂಚಾಯತಿಗಳ ತೆರಿಗೆ, ದರ ಮತ್ತು ಫೀಜುಗಳು) ನಿಯಮಗಳು, 2021 ರನ್ನೆಯ ಆರ್ಥಿಕ ವರ್ಷದ ಪ್ರಾರಂಭದ ಮೂರು ತಿಂಗಳ ಒಳಗಾಗಿ ಪ್ರಸಕ್ತ ಸಾಲಿನ ಸಂಪೂರ್ಣ ತೆರಿಗೆಯನ್ನು ಪಾವತಿಸುವವರಿಗೆ ಶೇ.5 ರಷ್ಟು ವಿನಾಯತಿಯನ್ನು ನೀಡಲಾಗಿದೆ.
ಅದುದರಿಂದ ಪ್ರಸ್ತುತ ಸಾಲಿನ ಗ್ರಾಮ ಪಂಚಾಯತಿಗಳು ಆಸ್ತಿಗಳಿಗೆ ತೆರಿಗೆ ವಿಧಿಸಲು ಪಂಚತಂತ್ರ 2.0 ತಂತ್ರಾಂಶದಲ್ಲಿ ನೀಡಲಾಗಿರುವ Property Profile ಅನ್ನು ಇಂಧೀಕರಿಸುವ ಆಯ್ಕೆಯನ್ನು ಬಳಸಿ ದಿನಾಂಕ:15.05.2025 ರೊಳಗೆ ಬಳಕೆ ಮಾಡಲು ಅವಕಾಶವನ್ನು ನೀಡಲಾಗಿದೆ. ತದನಂತರ ಯಾವುದೇ ಆಸ್ತಿಗಳಿಗೆ ಪಂಚತಂತ್ರ 2.0 ತಂತ್ರಾಂಶದಲ್ಲಿ ಆಸ್ತಿಗಳಿಗೆ Property Profile ಅನ್ನು ಇಂಧೀಕರಿಸುವ ಆಯ್ಕೆಯನ್ನು ನಿರ್ಷ್ಕ್ರಿಯಗೊಳಿಸಲಾಗುವುದು.ಅದರಂತೆ, ಪ್ರತಿ ಆರ್ಥಿಕ ವರ್ಷದ ಪ್ರಾರಂಭದ ಒಂದು ತಿಂಗಳ ಒಳಗಾಗಿ ಅಂದರೆ 30ನೇ ಏಪ್ರಿಲ್ ರೊಳಗೆ Property Profile ಅನ್ನು ಇಂಧೀಕರಿಸುವ ಆಯ್ಕೆಯನ್ನು ಬಳಸಿ. ಪಂಚತಂತ್ರ 20 ತಂತ್ರಾಂಶದಲ್ಲಿ ಆಸ್ತಿಗಳಿಗೆ Property Profile ಅನ್ನು ಅವಕಾಶವನ್ನು ನೀಡಲಾಗಿದೆ ಎಂದು ಆದೇಶ ಹೊರಡಿಸಲಾಗಿದೆ.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular