HomeLatest NewsBREAKING : ಪೊಲೀಸ್ ಗೌರವಗಳೊಂದಿಗೆ ಮಂಜುನಾಥ್ ರಾವ್ , ಭರತ್ ಭೂಷಣ್ ಅಂತ್ಯಕ್ರಿಯೆ :...

BREAKING : ಪೊಲೀಸ್ ಗೌರವಗಳೊಂದಿಗೆ ಮಂಜುನಾಥ್ ರಾವ್ , ಭರತ್ ಭೂಷಣ್ ಅಂತ್ಯಕ್ರಿಯೆ : ‘CM ಸಿದ್ದರಾಮಯ್ಯ’ ಘೋಷಣೆ |Pahalgam terror attack 

ಬೆಂಗಳೂರು : ಪೊಲೀಸ್ ಗೌರವಗಳೊಂದಿಗೆ ಮಂಜುನಾಥ್ ರಾವ್ , ಭರತ್ ಭೂಷಣ್ ಅಂತ್ಯಕ್ರಿಯೆ ನಡೆಸಲು ಸಿಎಂ ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ.

ಈ ಬಗ್ಗೆ ಮಾಹಿತಿ ನೀಡಿದ ಸಿಎಂ ಸಿದ್ದರಾಮಯ್ಯ ಪಹಲ್ಗಾಮ್ನಲ್ಲಿ ನಡೆದ ಉಗ್ರರ ದಾಳಿಯಲ್ಲಿ ಮೃತರಾಗಿರುವ ಮಂಜುನಾಥ ರಾವ್ ಹಾಗೂ ಭರತ್ ಭೂಷಣ್ ಅವರ ಪಾರ್ಥೀವ ಶರೀರದ ಅಂತ್ಯಕ್ರಿಯೆಯನ್ನು ಪೊಲೀಸ್ ಗೌರವದೊಂದಿಗೆ ನೆರವೇರಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ದೇನೆ.

ಭಯೋತ್ಪಾದಕ ದಾಳಿಯಂತಹ ಹೀನ ಕೃತ್ಯದಲ್ಲಿ ಅಮಾಯಕ ಜೀವಗಳು ಬಲಿಯಾಗಿರುವುದು ಅತ್ಯಂತ ದುಃಖದ ವಿಚಾರ. ಈ ದಾಳಿಯಲ್ಲಿ ಮಡಿದ ಕನ್ನಡಿಗರ ಅಂತ್ಯಸಂಸ್ಕಾರವನ್ನು ಗೌರವದಿಂದ ನೆರವೇರಿಸಬೇಕಿರುವುದು ನಮ್ಮ ಸರ್ಕಾರದ ಕರ್ತವ್ಯವೆಂದು ಭಾವಿಸಿ, ಈ ನಿರ್ಣಯ ತೆಗೆದುಕೊಂಡಿದ್ದೇನೆ ಎಂದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ದೇಶದಲ್ಲಿ ಭಯೋತ್ಪಾದಕ ಕೃತ್ಯಗಳು ನಿಲ್ಲಬೇಕು ಮತ್ತು ಅಮಾಯಕ ಜೀವಗಳು ಬಲಿಯಾಗುವುದನ್ನು ತಡೆಯಬೇಕು. ಭಯೋತ್ಪಾದನೆಯನ್ನು ಸಂಪೂರ್ಣವಾಗಿ ಕಿತ್ತೊಗೆಯುವ ಕೇಂದ್ರ ಸರ್ಕಾರದ ಕಾರ್ಯಕ್ಕೆ ನಮ್ಮ ಸರ್ಕಾರವು ಬೆಂಬಲವಾಗಿ ನಿಲ್ಲಲಿದೆ.ಭಯೋತ್ಪಾದಕರ ಈ ಹೇಯ ಕೃತ್ಯವನ್ನು ಎಲ್ಲರೂ ಒಗ್ಗಟ್ಟಾಗಿ ಖಂಡಿಸೋಣ. ಮೃತರ ಕುಟುಂಬಗಳ ಜೊತೆ ನಿಲ್ಲೋಣ ಎಂದಿದ್ದಾರೆ.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular