HomeLatest Newsಅಪಾರ್ಟ್ ಮೆಂಟ್ ನಿವಾಸಿಗಳಿಗೆ ಮತ್ತೊಂದು ಶಾಕ್: ನಿರ್ವಹಣಾ ಶುಲ್ಕದ ಮೇಲೆ ಶೇ. 18ರಷ್ಟು GST

ಅಪಾರ್ಟ್ ಮೆಂಟ್ ನಿವಾಸಿಗಳಿಗೆ ಮತ್ತೊಂದು ಶಾಕ್: ನಿರ್ವಹಣಾ ಶುಲ್ಕದ ಮೇಲೆ ಶೇ. 18ರಷ್ಟು GST

ಬೆಂಗಳೂರು: ಬೆಂಗಳೂರು ಸೇರಿದಂತೆ ರಾಜ್ಯದ ಪ್ರಮುಖ ನಗರಗಳಲ್ಲಿ ಅಪಾರ್ಟ್ಮೆಂಟ್ ಗಳಲ್ಲಿ ವಾಸಿಸುತ್ತಿರುವ ನಿವಾಸಿಗಳಿಗೆ ಹೊಸ ತೆರಿಗೆ ಶಾಕ್ ಎದುರಾಗುವ ಸಾಧ್ಯತೆ ಇದೆ.

ಅಪಾರ್ಟ್ಮೆಂಟ್ ಗಳಲ್ಲಿ ಮಾಸಿಕ ನಿರ್ವಹಣಾ ಶುಲ್ಕದ ಮೇಲೆ ಶೇಕಡ 18ರಷ್ಟು ಜಿಎಸ್‌ಟಿ ವಿಧಿಸುವ ಬಗ್ಗೆ ಸರ್ಕಾರ ಚಿಂತನೆ ನಡೆಸಿದೆ. ನಗರ ಪ್ರದೇಶಗಳಲ್ಲಿರುವ ಜನರು ಅಪಾರ್ಟ್ಮೆಂಟ್ ಗಳಲ್ಲಿ ವಾಸಿಸುವುದು ಸಾಮಾನ್ಯ. ಬೆಂಗಳೂರಿನಲ್ಲಿ ಈ ಪ್ರಮಾಣ ಶೇಕಡ 35 ರಷ್ಟು ಇದೆ. ಸುಮಾರು 40 ಲಕ್ಷಕ್ಕೂ ಹೆಚ್ಚು ಜನ ಬೆಂಗಳೂರಿನ ಅಪಾರ್ಟ್ಮೆಂಟ್ ಗಳಲ್ಲಿ ವಾಚಿಸುತ್ತಿದ್ದಾರೆ. ಅದೇ ರೀತಿ ಮಂಗಳೂರು, ಮೈಸೂರು, ಹುಬ್ಬಳ್ಳಿ, ಬೆಳಗಾವಿಯಂತಹ ನಗರಗಳಲ್ಲಿಯೂ ಒಟ್ಟು 30 ಲಕ್ಷಕ್ಕೂ ಹೆಚ್ಚು ಜನ ಅಪಾರ್ಟ್ಮೆಂಟ್ ಗಳಲ್ಲಿ ವಾಸಿಸುತ್ತಿದ್ದಾರೆ. ನಿರ್ವಹಣಾ ಶುಲ್ಕ ಮಾಸಿಕ 7500 ರೂ.ಗಿಂತ ಹೆಚ್ಚಾಗಿದ್ದಲ್ಲಿ ಅಂತವರಿಗೆ ಶೇಕಡ 18ರಷ್ಟು ಜಿಎಸ್‌ಟಿ ವಿಧಿಸುವ ಕುರಿತು ಸರ್ಕಾರ ಚಿಂತನೆ ನಡೆಸಿದೆ ಎಂದು ಹೇಳಲಾಗಿದೆ.

ನಿಯಮಾವಳಿ ಪ್ರಕಾರ ನಿವಾಸಿಗಳ ಅಸೋಸಿಯೇಷನ್ ರಚಿಸಿಕೊಂಡು ಸಹಕಾರ ಇಲಾಖೆಯಲ್ಲಿ ನೋಂದಾಯಿಸಬೇಕು ಈ ಸಂಘದ ಹೆಸರಲ್ಲಿ ಬಾಂಗ್ ಖಾತೆ ತೆರೆದು ಅದರ ಮೂಲಕ ಎಲ್ಲಾ ಹಣಕಾಸಿನ ವೈವಾಟು ನಡೆಸಬೇಕು ಕಟ್ಟಡಕ್ಕೆ ಬಣ್ಣ, ಸ್ವಚ್ಛತೆ, ನೀರಿನ ಬಿಲ್ ಪಾವತಿ, ವಿದ್ಯುತ್ ಬಿಲ್ ಪಾವತಿ, ಸೆಕ್ಯೂರಿಟಿ ಗಾರ್ಡ್, ಕೆಲಸಗಾರರ ಸಂಬಳ, ಲಿಫ್ಟ್, ಮೋಟರ್, ಈಜುಕೊಳ, ಉದ್ಯಾನವನ ನಿರ್ವಹಣೆ ಎಲ್ಲವೂ ಸೇರಿ ಸಂಘದ ವಾರ್ಷಿಕ ವಹಿವಾಟು 20 ಲಕ್ಷ ರೂ. ಮೀರಿದರೆ ಶೇಕಡ 18ರಷ್ಟು ಜಿಎಸ್​ಟಿ ಅನ್ವಯವಾಗಲಿದ್ದು, ವಾರ್ಷಿಕ 3.6 ಲಕ್ಷ ರೂ. ತೆರಿಗೆ ಪಾವತಿಸಬೇಕಾಗುತ್ತದೆ ಎಂದು ಹೇಳಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular