ಬೆಂಗಳೂರು: ಬೆಂಗಳೂರು ಸೇರಿದಂತೆ ರಾಜ್ಯದ ಪ್ರಮುಖ ನಗರಗಳಲ್ಲಿ ಅಪಾರ್ಟ್ಮೆಂಟ್ ಗಳಲ್ಲಿ ವಾಸಿಸುತ್ತಿರುವ ನಿವಾಸಿಗಳಿಗೆ ಹೊಸ ತೆರಿಗೆ ಶಾಕ್ ಎದುರಾಗುವ ಸಾಧ್ಯತೆ ಇದೆ.
ಅಪಾರ್ಟ್ಮೆಂಟ್ ಗಳಲ್ಲಿ ಮಾಸಿಕ ನಿರ್ವಹಣಾ ಶುಲ್ಕದ ಮೇಲೆ ಶೇಕಡ 18ರಷ್ಟು ಜಿಎಸ್‌ಟಿ ವಿಧಿಸುವ ಬಗ್ಗೆ ಸರ್ಕಾರ ಚಿಂತನೆ ನಡೆಸಿದೆ. ನಗರ ಪ್ರದೇಶಗಳಲ್ಲಿರುವ ಜನರು ಅಪಾರ್ಟ್ಮೆಂಟ್ ಗಳಲ್ಲಿ ವಾಸಿಸುವುದು ಸಾಮಾನ್ಯ. ಬೆಂಗಳೂರಿನಲ್ಲಿ ಈ ಪ್ರಮಾಣ ಶೇಕಡ 35 ರಷ್ಟು ಇದೆ. ಸುಮಾರು 40 ಲಕ್ಷಕ್ಕೂ ಹೆಚ್ಚು ಜನ ಬೆಂಗಳೂರಿನ ಅಪಾರ್ಟ್ಮೆಂಟ್ ಗಳಲ್ಲಿ ವಾಚಿಸುತ್ತಿದ್ದಾರೆ. ಅದೇ ರೀತಿ ಮಂಗಳೂರು, ಮೈಸೂರು, ಹುಬ್ಬಳ್ಳಿ, ಬೆಳಗಾವಿಯಂತಹ ನಗರಗಳಲ್ಲಿಯೂ ಒಟ್ಟು 30 ಲಕ್ಷಕ್ಕೂ ಹೆಚ್ಚು ಜನ ಅಪಾರ್ಟ್ಮೆಂಟ್ ಗಳಲ್ಲಿ ವಾಸಿಸುತ್ತಿದ್ದಾರೆ. ನಿರ್ವಹಣಾ ಶುಲ್ಕ ಮಾಸಿಕ 7500 ರೂ.ಗಿಂತ ಹೆಚ್ಚಾಗಿದ್ದಲ್ಲಿ ಅಂತವರಿಗೆ ಶೇಕಡ 18ರಷ್ಟು ಜಿಎಸ್‌ಟಿ ವಿಧಿಸುವ ಕುರಿತು ಸರ್ಕಾರ ಚಿಂತನೆ ನಡೆಸಿದೆ ಎಂದು ಹೇಳಲಾಗಿದೆ.
ನಿಯಮಾವಳಿ ಪ್ರಕಾರ ನಿವಾಸಿಗಳ ಅಸೋಸಿಯೇಷನ್ ರಚಿಸಿಕೊಂಡು ಸಹಕಾರ ಇಲಾಖೆಯಲ್ಲಿ ನೋಂದಾಯಿಸಬೇಕು ಈ ಸಂಘದ ಹೆಸರಲ್ಲಿ ಬಾಂಗ್ ಖಾತೆ ತೆರೆದು ಅದರ ಮೂಲಕ ಎಲ್ಲಾ ಹಣಕಾಸಿನ ವೈವಾಟು ನಡೆಸಬೇಕು ಕಟ್ಟಡಕ್ಕೆ ಬಣ್ಣ, ಸ್ವಚ್ಛತೆ, ನೀರಿನ ಬಿಲ್ ಪಾವತಿ, ವಿದ್ಯುತ್ ಬಿಲ್ ಪಾವತಿ, ಸೆಕ್ಯೂರಿಟಿ ಗಾರ್ಡ್, ಕೆಲಸಗಾರರ ಸಂಬಳ, ಲಿಫ್ಟ್, ಮೋಟರ್, ಈಜುಕೊಳ, ಉದ್ಯಾನವನ ನಿರ್ವಹಣೆ ಎಲ್ಲವೂ ಸೇರಿ ಸಂಘದ ವಾರ್ಷಿಕ ವಹಿವಾಟು 20 ಲಕ್ಷ ರೂ. ಮೀರಿದರೆ ಶೇಕಡ 18ರಷ್ಟು ಜಿಎಸ್‌ಟಿ ಅನ್ವಯವಾಗಲಿದ್ದು, ವಾರ್ಷಿಕ 3.6 ಲಕ್ಷ ರೂ. ತೆರಿಗೆ ಪಾವತಿಸಬೇಕಾಗುತ್ತದೆ ಎಂದು ಹೇಳಲಾಗಿದೆ.