HomeKarnatakaತೋಟಕ್ಕೆ ನುಗ್ಗಿ 80 ಅಡಿಕೆ ಸಸಿಗಳನ್ನು ಕಡಿದು ಹಾಕಿದ ದುಷ್ಕರ್ಮಿಗಳು

ತೋಟಕ್ಕೆ ನುಗ್ಗಿ 80 ಅಡಿಕೆ ಸಸಿಗಳನ್ನು ಕಡಿದು ಹಾಕಿದ ದುಷ್ಕರ್ಮಿಗಳು

ತುಮಕೂರು: ಅಡಿಕೆ ತೋಟಕ್ಕೆ ನುಗ್ಗಿದ ದುಷ್ಕರ್ಮಿಗಳು 80 ಅಡಿಕೆ ಸಸಿಗಳನ್ನು ಕಡಿದು ಹಾಕಿರುವ ಘಟನೆ ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ಶಿವರಾಂಪುರ ಗ್ರಾಮದಲ್ಲಿ ನಡೆದಿದೆ.

ತಿರುಮಲ್ಲಯ್ಯ ಎಂಬುವವರ ಅಡಿಕೆ ತೋಟಕ್ಕೆ ನುಗ್ಗಿದ ದುಷ್ಕರ್ಮಿಗಳು 80 ಅಡಿಕೆ ಸಸಿಗಳನ್ನು ಕತ್ತರಿಸಿ ಹಾಕಿದ್ದಾರೆ. ತಿರುಮಲ್ಲಯ್ಯನವರಿಗೆ ಆಗದವರ್ಯಾರೋ ರಾತ್ರಿ ಬೆಳಗಾಗುವಷ್ಟರಲ್ಲಿ ತೋಟಕ್ಕೆ ನುಗ್ಗಿ ಈ ಕೃತ್ಯವೆಸಗಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಈ ಹಿಂದೆ ತಿರುಮಲಯ್ಯ ಬೆಳೆದಿದ್ದ ಮೆಡಿಸಿನಲ್ ಸೌತೆಕಾಯಿ ಬೆಳೆಯನ್ನು ಇದೇ ರೀತಿ ದುಷ್ಕರ್ಮಿಗಳು ನಾಶಮಾಡಿದ್ದರಂತೆ. ಈಗ ಅಡಿಕೆ ಗಿಡಗಳ ಮಾರಣ ಹೋಮ ಮಾಡಿ, ಸಂಪೂರ್ಣ ನಾಶಪಡಿಸಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular