HomeLatest NewsBIG NEWS : ರಾಜ್ಯದ 'ಪ್ರಾಥಮಿಕ ಶಾಲಾ ಶಿಕ್ಷಕರ ವರ್ಗಾವಣೆ' : ಶಿಕ್ಷಣ ಇಲಾಖೆಯಿಂದ ಮಹತ್ವದ...

BIG NEWS : ರಾಜ್ಯದ ‘ಪ್ರಾಥಮಿಕ ಶಾಲಾ ಶಿಕ್ಷಕರ ವರ್ಗಾವಣೆ’ : ಶಿಕ್ಷಣ ಇಲಾಖೆಯಿಂದ ಮಹತ್ವದ ಮಾಹಿತಿ.!

ಬೆಂಗಳೂರು : ಪ್ರಾಥಮಿಕ ಶಾಲಾ ಶಿಕ್ಷಕರ ವಲಯ ವರ್ಗಾವಣೆ/ಶಿಕ್ಷಕರ ಹೆಚ್ಚುವರಿ/ ವರ್ಗಾವಣೆ, ಶಿಸ್ತು ಪ್ರಕರಣಗಳು, ನಿರ್ಧಿಷ್ಟಪಡಿಸಿದ ಹುದ್ದೆಗಳ ವರ್ಗಾವಣೆ ಹಾಗೂ ಇನ್ನಿತರೆ ಆಡಳಿತಾತ್ಮಕ ನೀತಿ ವಿಷಯದ ಕುರಿತಂತೆ ಬಂದಿರುವ ಕೆ.ಎ.ಟಿ/ಉಚ್ಚ ನ್ಯಾಯಾಲಯಗಳ ತೀರ್ಪನ್ನು ಉಪನಿರ್ದೇಶಕರ ಹಂತದಲ್ಲಿ ಅನುಷ್ಟಾನಗೊಳಿಸಿರುವ ಬಗ್ಗೆ ಪರಿಶೀಲಿಸಲು ವಿಭಾಗಮಟ್ಟದ ಕ್ರೋಢೀಕೃತ ವರದಿಯನ್ನು ಸಲ್ಲಿಸುವ ಕುರಿತು ಶಿಕ್ಷಣ ಇಲಾಖೆ ಸುತ್ತೋಲೆ ಹೊರಡಿಸಿದೆ.

ವಿಷಯಕ್ಕೆ ಸಂಬಂಧಿಸಿದಂತೆ ಪ್ರಾಥಮಿಕ ಶಾಲಾ ಮತ್ತು ಪ್ರೌಢಶಾಲಾ ಶಿಕ್ಷಕರ ವಲಯ ವರ್ಗಾವಣೆ, ಪ್ರಾಥಮಿಕ ಶಾಲಾ ಶಿಕ್ಷಕರ ಹೆಚ್ಚುವರಿ, ಕೋರಿಕೆ ವರ್ಗಾವಣೆ, ಶಿಸ್ತು ಪ್ರಕರಣಗಳು, ನಿರ್ಧಿಷ್ಟಪಡಿಸಿದ ಹುದ್ದೆಗಳ ವರ್ಗಾವಣೆ ಹಾಗೂ ಇನ್ನಿತರೆ ಆಡಳಿತಾತ್ಮಕ ನೀತಿ ವಿಷಯದ ಕುರಿತಂತೆ ಕರ್ನಾಟಕ ಆಡಳಿತ ನ್ಯಾಯ ಮಂಡಳಿ ಹಾಗೂ ಉಚ್ಚನ್ಯಾಯಾಲಯದಿಂದ ವಿವಿಧ ದಿನಾಂಕಗಳಲ್ಲಿ ತೀರ್ಪು ಬಂದಿರುವ ವಿಷಯ ಸ್ವಯಂ ವೇದ್ಯವಾಗಿರುತ್ತದೆ. ಸದರಿ ನ್ಯಾಯಾಲಯಗಳಲ್ಲಿ ಕೆಲವು ಪ್ರಕರಣದಲ್ಲಿ ಅರ್ಜಿದಾರರ ಅರ್ಜಿಯನ್ನು ನ್ಯಾಯಾಲಯವು ವಜಾಗೊಳಿಸಿರುತ್ತದೆ. ಕೆಲವು ಪ್ರಕರಣದಲ್ಲಿ ನಿಯಮಾನುಸಾರ ಕ್ರಮಕೈಗೊಳ್ಳುವಂತೆ ಸೂಚಿಸಿರುತ್ತದೆ. ಕೆಲವು ಪ್ರಕರಣದಲ್ಲಿ ಇಲಾಖೆಗೆ ವ್ಯತಿರಿಕ್ತ ತೀರ್ಪುಗಳು ಬಂದಿರುವುದನ್ನು ಗಮನಿಸಲಾಗಿದೆ.

ಇಂತಹಾ ಪ್ರಕರಣಗಳಲ್ಲಿ ಸಕ್ಷಮ ವ್ಯಾಜ್ಯ ನಿರ್ವಹಣಾಧಿಕಾರಿಗಳು ಸಂಬಂಧಪಟ್ಟ ಉಪನಿರ್ದೇಶಕರು(ಆಡಳಿತ) ಇವರೇ ಆಗಿರುವುದರಿಂದ ನ್ಯಾಯಾಲಯದ ತೀರ್ಪನ್ನು ನಿಗಧಿತ ಕಾಲಮಿತಿಯೊಳಗೆ ಅನುಷ್ಠಾನಗೊಳಿಸದೇ ಇರುವುದರಿಂದ ನ್ಯಾಯಾಂಗ ನಿಂದನಾ ದಾವೆ ದಾಖಲಾಗುತ್ತಿರುವುದನ್ನು ಬಹಳ ಗಂಭೀರವಾಗಿ ಪರಿಗಣಿಸಲಾಗಿದೆ. ಉಪನಿರ್ದೇಶಕರ ವಿಳಂಬಧೋರಣೆಯಿಂದ ನಿಗಧಿತ ಕಾಲಮಿತಿಯೊಳಗೆ ಅರ್ಜಿದಾರ ಶಿಕ್ಷಕರಿಗೆ ನಿಯಮಾನುಸಾರ ಹಿಂಬರಹ ನೀಡದೇ ಇರುವುದು ಇಲಾಖೆಯ ವಿರುದ್ಧ ತೀರ್ಪು ಬಂದಿದ್ದರೂ ಮೇಲ್ಮನವಿ ಸಲ್ಲಿಸದೇ ಅನಗತ್ಯ ಕಾಲಹರಣ ಮಾಡಿ ಇಲಾಖೆಯನ್ನು ಮುಜುಗರಕ್ಕೆ ಒಳಗಾಗಿ ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು ಹಾಗೂ ಮಾನ್ಯ ಆಯುಕ್ತರು ಹಾಗೂ ನಿರ್ದೇಶಕರುಗಳನ್ನು ನ್ಯಾಯಾಲಯದಲ್ಲಿ ಖುದ್ದು ಹಾಜರಾತಿಗೆ ನ್ಯಾಯಾಲಯವು ಆದೇಶಿಸುತ್ತಿರುವ ಪ್ರಕರಣಗಳು ಇತ್ತೀಚೆಗೆ ಹೆಚ್ಚಾಗಿರುತ್ತದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಇದಕ್ಕೆ ಸಕ್ಷಮ ವ್ಯಾಜ್ಯ ನಿರ್ವಹಣಾಧಿಕಾರಿಗಳು ಪ್ರಕರಣದ ತೀವ್ರತೆಯನ್ನು ಗಮನಿಸದೇ ಪ್ರತೀ ಹಂತದಲ್ಲಿ ಬೇಜವಾಬ್ದಾರಿತನ ಹಾಗೂ ತೀವ್ರ ಉದಾಸೀನತೆ ತೋರಿರುವ ಪ್ರಕರಣಗಳು ಸಾಕಷ್ಟು ಬೆಳಕಿಗೆ ಬಂದಿರುತ್ತದೆ. ಈ ವಿಚಾರವನ್ನು ಬಹಳ ಗಂಭೀರವಾಗಿ ಪರಿಗಣಿಸಲಾಗಿದ್ದು ನ್ಯಾಯಾಲಯ ಪ್ರಕರಣಗಳಲ್ಲಿ ಜಿಲ್ಲಾವಾರು ಪ್ರಗತಿ ಪರಿಶೀಲನೆಯನ್ನು ಹಮ್ಮಿಕೊಳ್ಳಲು ನಿರ್ಧರಿಸಲಾಗಿರುತ್ತದೆ.

“Accordance with law ‘ಎಂದಿರುವ ಪ್ರಕರಣದಲ್ಲಿ ಅರ್ಜಿದಾರ ಶಿಕ್ಷಕರಿಗೆ ಸೂಕ್ತ ಹಿಂಬರಹ ನೀಡಬೇಕಾಗುತ್ತದೆ.

  • ಅರ್ಜಿದಾರರ ಅರ್ಜಿಯನ್ನು ‘Dismiss ಕ್ರಮವಹಿಸಬೇಕಾಗುತ್ತದೆ. ವಜಾಗೊಳಿಸಿದ್ದಲ್ಲಿ ನ್ಯಾಯಾಲಯ ತೀರ್ಪಿನಂತೆ
  • ಅರ್ಜಿದಾರರ ಅರ್ಜಿಯನ್ನು ನ್ಯಾಯಾಲಯವು ‘Application is allowed” ಅಂಗೀಕರಿಸಿ ಇಲಾಖೆಗೆ ವ್ಯತಿರಿಕ್ತ ತೀರ್ಪು ಬಂದಿದ್ದಲ್ಲಿ ರಾಜ್ಯ ಉಚ್ಚ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಲು ಪ್ರಸ್ತಾವನೆ ಸಲ್ಲಿಸಬೇಕಾಗುತ್ತದೆ. ಅಥವಾ ತೀರ್ಪಿನ ಅನುಷ್ಟಾನಕ್ಕೆ ಮಾನ್ಯ ಆಯುಕ್ತರಿಗೆ ಪತ್ರ ಬರೆದಿರಬೇಕಾಗುತ್ತದೆ.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular