BIG NEWS: ಈ IPL ಟೂರ್ನಿಯಲ್ಲಿ ಅತಿವೇಗದ ಶತಕ ಬಾರಿಸಿದ ಪ್ರಿಯಾಂಶ್ ಆರ್ಯ ದಾಖಲೆ

ನವದೆಹಲಿ: ಯುವ ಆಟಗಾರ ಪ್ರಿಯಾಂಶ್ ಆರ್ಯ ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್) ಇತಿಹಾಸದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಅತಿ ವೇಗದ ಶತಕ ಬಾರಿಸಿದರು.

ಪಂಜಾಬ್ ಕಿಂಗ್ಸ್ ಕ್ರಿಕೆಟಿಗ ಪ್ರಿಯಾಂಶ್ ಆರ್ಯ ಅತಿ ವೇಗದ ಶತಕವನ್ನು ದಾಖಲಿಸಿದ್ದಾರೆ. ಡೇವಿಡ್ ಮಿಲ್ಲರ್ 38 ಎಸೆತಗಳಲ್ಲಿ ಶತಕ ಗಳಿಸಿದರೆ, ಆರ್ಯ 39 ಎಸೆತಗಳಲ್ಲಿ ಈ ದಾಖಲೆ ಬರೆದರು., ಇದು 2025ರ ಐಪಿಎಲ್ ನಲ್ಲಿ ಅತಿವೇಗದ ಶತಕವಾಗಿದೆ. ಐಪಿಎಲ್ ಇತಿಹಾಸದಲ್ಲಿ ಜಂಟಿಯಾಗಿ ನಾಲ್ಕನೇ ವೇಗದ ಶತಕವೂ ಆಗಿದೆ. 2013 ರಲ್ಲಿ ಪುಣೆ ವಾರಿಯರ್ಸ್ ಇಂಡಿಯಾ(ಈಗ ನಿಷ್ಕ್ರಿಯ) ವಿರುದ್ಧ 30 ಎಸೆತಗಳಲ್ಲಿ ಶತಕ ಗಳಿಸಿದ ಕ್ರಿಸ್ ಗೇಲ್ ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ.

ಅಷ್ಟೇ ಅಲ್ಲ, ಐಪಿಎಲ್ ಇತಿಹಾಸದಲ್ಲಿ ಭಾರತೀಯ ಕ್ರಿಕೆಟಿಗನ ಎರಡನೇ ಅತಿ ವೇಗದ ಶತಕ ಇದಾಗಿದೆ. ಯೂಸುಫ್ ಪಠಾಣ್ 37 ಎಸೆತಗಳಲ್ಲಿ ಈ ಮೈಲಿಗಲ್ಲು ತಲುಪಿದ ಮೊದಲ ಸ್ಥಾನದಲ್ಲಿದ್ದಾರೆ.

ಒಂದು ಹಂತದಲ್ಲಿ ಪಂಜಾಬ್ 81/4 ಕ್ಕೆ ಕುಸಿದಿತ್ತು. ಆದರೆ, ಚೆನ್ನೈ ಬೌಲರ್‌ಗಳ ವಿರುದ್ಧ ವಿನಾಶಕಾರಿ ಆಟವಾಡಿದ ಆರ್ಯ ಅವರ ಮೇಲೆ ಅದು ಪರಿಣಾಮ ಬೀರಲಿಲ್ಲ. 24 ವರ್ಷದ ಆಟಗಾರ 42 ಎಸೆತಗಳಲ್ಲಿ 103 ರನ್ ಗಳಿಸಿದಾಗ ಅವರ ಅಬ್ಬರದ ಇನ್ನಿಂಗ್ಸ್ 7 ಬೌಂಡರಿ ಮತ್ತು 9 ಸಿಕ್ಸರ್‌ಗಳನ್ನು ಒಳಗೊಂಡಿತ್ತು.

ಕ್ರಿಸ್ ಗೇಲ್ -30 ಎಸೆತ, ಆರ್‌ಸಿಬಿ –ಪಿಡಬ್ಲ್ಯೂಐ, ಬೆಂಗಳೂರು

ಯೂಸುಫ್ ಪಠಾಣ್ -37 ಎಸೆತ, ಆರ್‌ಆರ್ –ಎಂಐ, ಮುಂಬೈ

ಡೇವಿಡ್ ಮಿಲ್ಲರ್ 38 ಎಸೆತ, ಕೆಎಕ್ಸ್‌ಐಪಿ- ಆರ್‌ಸಿಬಿ, ಮೊಹಾಲಿ

ಟ್ರಾವಿಸ್ ಹೆಡ್ 39 ಎಸೆತ, ಎಸ್‌ಆರ್‌ಹೆಚ್ -ಆರ್‌ಸಿಬಿ, ಬೆಂಗಳೂರು

ಪ್ರಿಯಾಂಶ್ ಆರ್ಯ 39 ಎಸೆತ, ಪಿಬಿಕೆಎಸ್ -ಸಿಎಸ್‌ಕೆ, ಮುಲ್ಲನ್‌ಪುರ

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read