ಬೆಂಗಳೂರು : ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎ1 ಆರೋಪಿ ಪವಿತ್ರಾಗೌಡ ಕೋರ್ಟ್ ಗೆ ಹಾಜರಾಗಿದ್ದಾರೆ ಹಾಗೂ ಎ 2 ಆರೋಪಿ ನಟ ದರ್ಶನ್ ಗೈರಾಗಿದ್ದಾರೆ.
ಬೆನ್ನು ನೋವಿನ ಕಾರಣದಿಂದ ನಟ ದರ್ಶನ್ ಕೋರ್ಟ್ ಗೆ ಗೈರಾಗುತ್ತಿದ್ದಾರೆ ಎಂಬ ಮಾಹಿತಿ ಇದೀಗ ಲಭ್ಯವಾಗಿದೆ. 57 ನೇ ಸಿಸಿಹೆಚ್ ಕೋರ್ಟ್ ಗೆ ಬರಬೇಕಿದ್ದ ನಟ ದರ್ಶನ್ ಗೈರಾಗುತ್ತಿದ್ದಾರೆ. ಸದ್ಯ, ಪ್ರಕರಣದ ಎ1 ಆರೋಪಿ ಪವಿತ್ರಾಗೌಡ ಕೋರ್ಟ್ ಗೆ ಹಾಜರಾಗಿದ್ದಾರೆ.
ಪವಿತ್ರಾ ಗೌಡ ಜೊತೆ ನಂದೀಶ್ ಸೇರಿದಂತೆ ಹಲವು ಆರೋಪಿಗಳು ಹಾಜರಾಗಿದ್ದಾರೆ.ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಸೇರಿದಂತೆ 17 ಮಂದಿ ಆರೋಪಿಗಳನ್ನು ಬಂಧಿಸಲಾಗಿತ್ತು. ನಂತರ ಕೋರ್ಟ್ ಎಲ್ಲಾ 17 ಮಂದಿ ಆರೋಪಿಗಳಿಗೆ ಷರತ್ತುಬದ್ಧ ಜಾಮೀನು ಮಂಜೂರು ಮಾಡಿತ್ತು.
You Might Also Like
TAGGED:ರೇಣುಕಾಸ್ವಾಮಿ ಕೊಲೆ ಕೇಸ್