HomeCrimeBREAKING: ಬೈಕ್ ಖರೀದಿಗೆ ಹಣ ಕೊಡದಿದ್ದಕ್ಕೆ ಚಾಕುವಿನಿಂದ ಇರಿದು ತಂದೆಯನ್ನೇ ಕೊಂದ ಕೊಲೆಗಡುಕ ಪುತ್ರ ಅರೆಸ್ಟ್

BREAKING: ಬೈಕ್ ಖರೀದಿಗೆ ಹಣ ಕೊಡದಿದ್ದಕ್ಕೆ ಚಾಕುವಿನಿಂದ ಇರಿದು ತಂದೆಯನ್ನೇ ಕೊಂದ ಕೊಲೆಗಡುಕ ಪುತ್ರ ಅರೆಸ್ಟ್

ಯಾದಗಿರಿ: ಬೈಕ್ ಖರೀದಿಸಲು ಹಣ ಕೊಡದ ಕಾರಣ ತಂದೆಯನ್ನೇ ಪುತ್ರ ಕೊಲೆ ಮಾಡಿದ ಘಟನೆ ಯಾದಗಿರಿ ಜಿಲ್ಲೆ, ಸುರಪುರ ತಾಲೂಕಿನ ಕಿರದಳ್ಳಿ ತಾಂಡಾದಲ್ಲಿ ನಡೆದಿದೆ.

ಮಗ ಶೇಖರ್ ಕೊಲೆ ಆರೋಪಿ. ತಂದೆ ಚೆನ್ನಾರೆಡ್ಡಿ ರಾಥೋಡ್(50) ಅವರನ್ನು ಶೇಖರ್ ಕೊಲೆ ಮಾಡಿದ್ದಾನೆ. ಬೈಕ್ ತೆಗೆದುಕೊಳ್ಳಲು ಹಣ ಕೊಟ್ಟಿಲ್ಲವೆಂದು ತಂದೆಯನ್ನೇ ಕೊಲೆ ಮಾಡಿದ್ದಾನೆ. ತಂದೆಯನ್ನು ಕೊಲೆ ಮಾಡಿ ನೇಣು ಹಾಕಿಕೊಂಡು ಮೃತಪಟ್ಟಿದ್ದಾನೆಂದು ನಾಟಕವಾಡಿದ್ದಾನೆ. ಅಜ್ಜಿಯ ಜೊತೆ ಠಾಣೆಗೆ ದೂರು ಕೊಡಲು ಹೋಗಿದ್ದ ಶೇಖರ್  ಲಾಕ್ ಆಗಿದ್ದಾನೆ. ಪೊಲೀಸರು ವಿಚಾರಣೆ ನಡೆಸಿದ್ದಾರೆ.

ಕೊಲೆಯಾದ ತಂದೆ ಚೆನ್ನಾ ರೆಡ್ಡಿ ಖಾತೆಯಲ್ಲಿ ಎರಡು ಲಕ್ಷ ರೂಪಾಯಿ ಹಣ ಇತ್ತು. ಬೈಕ್ ತೆಗೆದುಕೊಳ್ಳಲು ತಂದೆಯ ಬಳಿ 2 ಲಕ್ಷ ಕೊಡುವಂತೆ ಶೇಖರ್ ಕೇಳಿದ್ದ. ಹಣ ಕೊಡಲ್ಲ ಎಂದಿದ್ದಕ್ಕೆ ತಂದೆಯನ್ನು ಶೇಖರ್ ಕೊಲೆ ಮಾಡಿದ್ದಾನೆ. ಮದ್ಯ ಸೇವಿಸಿ ಮಲಗಿದ್ದ ತಂದೆಯನ್ನು ತಡರಾತ್ರಿ ಚಾಕುವಿನಿಂದ ಇರಿದು ಕೊಲೆ ಮಾಡಿದ್ದು, ಆತ್ಮಹತ್ಯೆಯ ಕತೆ ಕಟ್ಟಿದ್ದಾನೆ. ತಂದೆ ನೇಣು ಬಿಗಿದುಕೊಂಡು ಮೃತಪಟ್ಟಿದ್ದಾನೆ ಎಂದು ಹೇಳಿ ಸಂಬಂಧಿಕರನ್ನು ನಂಬಿಸಿದ್ದಾನೆ. ತರಾತುರಿಯಲ್ಲಿ ಅಂತ್ಯಸಂಸ್ಕಾರಕ್ಕೆ ಸಿದ್ಧತೆ ನಡೆಸಿದ್ದ ಶೇಖರ್ ಅಜ್ಜಿಯ ಜೊತೆಗೆ ತೆರಳಿ ಪೊಲೀಸರಿಗೆ ದೂರು ನೀಡಲು ಹೋಗಿದ್ದ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಪೊಲೀಸರ ವಿಚಾರಣೆಯ ವೇಳೆ ಮಗನೇ ತಂದೆಯನ್ನು ಕೊಲೆ ಮಾಡಿರುವುದು ಬೆಳಕಿಗೆ ಬಂದಿದೆ. ವಿಷಯ ತಿಳಿದು ಮೊಮ್ಮಗನ ವಿರುದ್ಧವೇ ಅಜ್ಜಿ ತಾರಾಬಾಯಿ ದೂರು ನೀಡಿದ್ದಾರೆ. ಕೊಲೆಗಡುಕ ಮಗ ಶೇಖರನನ್ನು ಕೆಂಭಾವಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಕೆಂಭಾವಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular