HomeIndiaಬೀದಿ ನಾಯಿಗಳ ದಾಳಿ: ಕೂದಲೆಳೆ ಅಂತರದಲ್ಲಿ ಪಾರಾದ ಯುವತಿ | SHOCKING VIDEO

ಬೀದಿ ನಾಯಿಗಳ ದಾಳಿ: ಕೂದಲೆಳೆ ಅಂತರದಲ್ಲಿ ಪಾರಾದ ಯುವತಿ | SHOCKING VIDEO

ಆಲ್ವಾರ್: ರಾಜಸ್ಥಾನದ ಅಲ್ವಾರ್ ಜಿಲ್ಲೆಯಲ್ಲಿ ಶುಕ್ರವಾರ ನಡೆದ ಆಘಾತಕಾರಿ ಘಟನೆಯಲ್ಲಿ, ಬೀದಿ ನಾಯಿಗಳ ಗುಂಪೊಂದು ಯುವತಿಯ ಮೇಲೆ ದಾಳಿ ಮಾಡಿದೆ.

ವಿಡಿಯೋದಲ್ಲಿ ರಾಜಸ್ಥಾನದ ಹುಡುಗಿ ನವ್ಯಾ ಫೋನ್‌ನಲ್ಲಿ ಮಾತನಾಡುತ್ತಾ ನಡೆದುಕೊಂಡು ಹೋಗುತ್ತಿರುವಾಗ ಬೀದಿ ನಾಯಿಗಳ ಗುಂಪೊಂದು ಅವಳ ಮೇಲೆ ದಾಳಿ ಮಾಡಿದೆ. ಕಚ್ಚಿ ಗಾಯಗೊಳಿಸಲು ನಾಯಿಗಳ ಹಿಂಡು ಮುಂದಾಗಿದ್ದು, ಯುವತಿ ನೆಲಕ್ಕೆ ಬಿದ್ದಿದ್ದಾಳೆ.

ನೆರೆಹೊರೆಯವರು ಕೂಗಾಟ ಕೇಳಿ ಧಾವಿಸಿ ಬಂದಿದ್ದು, ನಾಯಿಗಳನ್ನು ಓಡಿಸಲು ಪ್ರಯತ್ನಿಸಿದ್ದಾರೆ. ಯುವತಿ 15-20 ಸೆಕೆಂಡುಗಳ ಕಾಲ ಕಿರುಚಾಡಿದ್ದು, ನಂತರ ನೆರೆಹೊರೆಯವರು ನಾಯಿಗಳ ದಾಳಿ ಕೇಳಿ ಓಡಿಸಲು ಬಂದಿದ್ದಾರೆ. ಸ್ಕೂಟರ್‌ನಲ್ಲಿ ಹೋಗುತ್ತಿದ್ದ ದಾರಿಹೋಕ ಮಹಿಳೆಯೊಬ್ಬರು ವಾಹನ ನಿಲ್ಲಿಸಿ ನಾಯಿಗಳ ದಾಳಿಯಿಂದ ಹುಡುಗಿಯನ್ನು ರಕ್ಷಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ವಿಡಿಯೊವನ್ನು ಇಲ್ಲಿ ವೀಕ್ಷಿಸಿ:

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular