HomeKarnatakaBREAKING : ಚಿಕ್ಕಮಗಳೂರಲ್ಲಿ ಅನುಮಾನಾಸ್ಪದವಾಗಿ ಪ್ರೇಮಿಗಳ ಶವ ಪತ್ತೆ, ಆತ್ಮಹತ್ಯೆ ಶಂಕೆ.!

BREAKING : ಚಿಕ್ಕಮಗಳೂರಲ್ಲಿ ಅನುಮಾನಾಸ್ಪದವಾಗಿ ಪ್ರೇಮಿಗಳ ಶವ ಪತ್ತೆ, ಆತ್ಮಹತ್ಯೆ ಶಂಕೆ.!

ಚಿಕ್ಕಮಗಳೂರು : ಅನುಮಾನಾಸ್ಪದವಾಗಿ ಯುವಕ, ಯುವತಿಯ ಶವ  ಪತ್ತೆಯಾಗಿದೆ.ಚಿಕ್ಕಮಗಳೂರು ತಾಲೂಕಿನ ದಾಸರಹಳ್ಳಿಯಲ್ಲಿ ಈ ಘಟನೆ ನಡೆದಿದೆ.

ಕಾರಿನಲ್ಲಿ ಯುವತಿ ಪೂರ್ಣಿಮ ಶವ ಪತ್ತೆಯಾದರೆ, ಹತ್ತಿರದ ಕಾಫಿ ತೋಟದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಯುವಕನ ಶವ ಪತ್ತೆಯಾಗಿದೆ. ಬಹಳ ಸಮಯದಿಂದ ನಿಲ್ಲಿಸಿದ್ದ ಕಾರನ್ನು ನೋಡಿ ಅನುಮಾನಗೊಂಡ ಸ್ಥಳೀಯರು ಹತ್ತಿರ ಹೋಗಿ ನೋಡಿದಾಗ ಕಾರಿನಲ್ಲಿ ಯುವತಿಯ ಶವ ಇರೋದು ಪತ್ತೆಯಾಗಿದೆ.

ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದ್ದು,ಮೃತರನ್ನು ಚಿಕ್ಕಮಗಳೂರಿನ ಪೂರ್ಣಿಮ, ಭದ್ರಾವತಿಯ ಮಧು ಎಂದು ಗುರುತಿಸಲಾಗಿದೆ. ಘಟನೆ ನಡೆದ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

 

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular