HomeIndiaಸೈಫ್ ಅಲಿ ಖಾನ್ ಕೇಸ್ ಗೆ ಸ್ಪೋಟಕ ತಿರುವು: ತಾಳೆಯಾಗದ ಬೆರಳಚ್ಚು, ಹಾಗಾದ್ರೆ ಚಾಕುವಿನಿಂದ ಚುಚ್ಚಿದ್ದು...

ಸೈಫ್ ಅಲಿ ಖಾನ್ ಕೇಸ್ ಗೆ ಸ್ಪೋಟಕ ತಿರುವು: ತಾಳೆಯಾಗದ ಬೆರಳಚ್ಚು, ಹಾಗಾದ್ರೆ ಚಾಕುವಿನಿಂದ ಚುಚ್ಚಿದ್ದು ಯಾರು…?

ಮುಂಬೈ: ಬಾಲಿವುಡ್ ನಟ ಸೈಫ್ ಅಲಿಕಾನ್ ಅವರಿಗೆ ಚಾಕು ಇರಿದ ಪ್ರಕರಣದಲ್ಲಿ ಬಂಧಿತನಾಗಿರುವ ಆರೋಪಿ ಶರೀಫುಲ್ ಇಸ್ಲಾಂ ಶೆಹಜಾದ್ ಬೆರಳಚ್ಚು ಮತ್ತು ಸ್ಥಳದಲ್ಲಿ ಸಂಗ್ರಹಿಸಿದ ಬೆರಳಚ್ಚು ಮಾದರಿಗಳಿಗೆ ಹೋಲಿಕೆಯಾಗುತ್ತಿಲ್ಲ ಎಂದು ಸಿಐಡಿ ತಂಡ ಸಲ್ಲಿಸಿದ ಪರೀಕ್ಷಾ ವರದಿ ತಿಳಿಸಿದ್ದು, ಈ ವರದಿಯಿಂದ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಂತಾಗಿದೆ.

ದಾಳಿ ನಡೆದ ಸ್ಥಳದಲ್ಲಿ ಸಂಗ್ರಹಿಸಿದ ಬೆರಳಚ್ಚುಗಳಿಗೂ ಬಂಧಿತ ಆರೋಪಿ ಬೆರಳಚ್ಚಿಗೂ ಹೋಲಿಕೆ ಆಗುತ್ತಿಲ್ಲ ಎನ್ನುವ ಸ್ಪೋಟಕ ಸಂಗತಿ ಹೊರಬಿದ್ದಿದೆ. ಸಿಸಿಟಿವಿಯಲ್ಲಿ ಕಂಡು ಬಂದ ವ್ಯಕ್ತಿಗೂ ಬಂಧಿಸಲಾದ ಆರೋಪಿಗೂ ಹೋಲಿಕೆಯಾಗುತ್ತಿಲ್ಲ ಎನ್ನುವ ಸಂಶಯದ ಬೆನ್ನಿಗೆ ಮಹಾರಾಷ್ಟ್ರ ಸಿಐಡಿಗೆ ಸೇರಿದ ಫಿಂಗರ್ ಪ್ರಿಂಟ್ ಪ್ರಯೋಗಾಲಯದಲ್ಲಿ ನಡೆದ ಬೆರಳಚ್ಚು ಪರೀಕ್ಷೆಯಲ್ಲಿ ಆರೋಪಿಯ ಬೆರಳಚ್ಚಿಗೂ ಅಪರಾಧ ಸ್ಥಳದಲ್ಲಿ ನಡೆದ ಸಂಗ್ರಹಿಸಿದ ಮಾದರಿಗಳಿಗೂ ಹೋಲಿಕೆಯಾಗುತ್ತಿಲ್ಲ ಎಂದು ವರದಿ ನೀಡಲಾಗಿದೆ.

ಸೈಫ್ ಅಲಿಖಾನ್ ಮನೆಯಲ್ಲಿ ಸಂಗ್ರಹಿಸಲಾದ 19 ಬೆರಳಚ್ಚು ಮಾದರಿಗಳಲ್ಲಿ ಒಂದು ಕೂಡ ಬಂಧಿತ ಆರೋಪಿ ಶೆಹಜಾದ್ ಬೆರಳಚ್ಚಿಗೆ ಹೋಲಿಕೆ ಆಗುತ್ತಿಲ್ಲ ಎನ್ನಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular