HomeKarnatakaBREAKING : ಕಲಬುರಗಿಯಲ್ಲಿ 'ಅಂಗನವಾಡಿ ಸಹಾಯಕಿ' ಹುದ್ದೆಗೆ ಲಂಚ ಪಡೆಯುತ್ತಿದ್ದ 'FDA' ಲೋಕಾಯುಕ್ತ ಬಲೆಗೆ |Lokayukta...

BREAKING : ಕಲಬುರಗಿಯಲ್ಲಿ ‘ಅಂಗನವಾಡಿ ಸಹಾಯಕಿ’ ಹುದ್ದೆಗೆ ಲಂಚ ಪಡೆಯುತ್ತಿದ್ದ ‘FDA’ ಲೋಕಾಯುಕ್ತ ಬಲೆಗೆ |Lokayukta Raid

ಕಲಬುರಗಿ : ಅಂಗನವಾಡಿ ಸಹಾಯಕಿ ಹುದ್ದೆಗೆ ಲಂಚ ಪಡೆಯುತ್ತಿದ್ದ ಸಿಡಿಪಿಒ ಕಚೇರಿಯ ಎಫ್ ಡಿ ಲೋಕಾಯುಕ್ತ ಬಲೆಗೆ ಬಿದ್ದಿರುವ ಘಟನೆ ಕಲಬುರಗಿಯಲ್ಲಿ ನಡೆದಿದೆ.

15 ಸಾವಿರ ಲಂಚ ಪಡೆಯುವಾಗ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದು, ಎಫ್ ಡಿ ಎ ಶಿಲ್ಪಾ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.

ಅಂಗನವಾಡಿ ಸಹಾಯಕಿ ಹುದ್ದೆ ಕೊಡಿಸುವುದಕ್ಕೆ ಮಹಿಳೆಯೊಬ್ಬರ ಬಳಿ ಶಿಲ್ಪಾ 50,000 ಲಂಚಕ್ಕೆ ಬೇಡಿಕೆಯಿಟ್ಟಿದ್ದರು. ಈಗಾಗಲೇ 35,000 ಪಡೆದಿದ್ದ ಶಿಲ್ಪ ಬಾಕಿ 15,000 ಪಡೆಯುತ್ತಿದ್ದ ವೇಳೆ ಸಿಕ್ಕಿಬಿದ್ದಿದ್ದಾರೆ. ಸದ್ಯ ಶಿಲ್ಪಾಳನ್ನ ಲೋಕಾಯುಕ್ತ ಪೊಲೀಸರು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular