HomeKarnatakaBREAKING: ಪೊಲೀಸ್ ಕಸ್ಟಡಿಯಲ್ಲಿರುವ ಐಶ್ವರ್ಯಾ ಗೌಡ ದಂಪತಿಗೆ ಮತ್ತೊಂದು ಸಂಕಷ್ಟ: ಇನ್ನೊಂದು ವಂಚನೆ ಕೇಸ್ ನಲ್ಲಿ...

BREAKING: ಪೊಲೀಸ್ ಕಸ್ಟಡಿಯಲ್ಲಿರುವ ಐಶ್ವರ್ಯಾ ಗೌಡ ದಂಪತಿಗೆ ಮತ್ತೊಂದು ಸಂಕಷ್ಟ: ಇನ್ನೊಂದು ವಂಚನೆ ಕೇಸ್ ನಲ್ಲಿ FIR ದಾಖಲು

ಬೆಂಗಳೂರು: ಡಿ.ಕೆ.ಸುರೇಶ್ ಸಹೋದರಿ ಎಂದು ಚಿನ್ನದಂಗಡಿ ಮಾಲಕಿಗೆ ವಂಚನೆ ಪ್ರಕರಣದಲ್ಲಿ ಬಂಧನಕ್ಕೀಡಾಗಿ ಪೊಲೀಸ್ ಕಸ್ಟಡಿಯಲ್ಲಿರುವ ಐಶ್ವರ್ಯಾ ಗೌಡ, ಪತಿ ಹರೀಶ್ ಗೌಡಗೆ ಮತ್ತೊಂದು ಸಂಕಷ್ಟ ಎದುರಾಗಿದೆ.

ಇನ್ನೊಂದು ವಂಚನೆ ಕೇಸ್ ನಲ್ಲಿ ಆರ್.ಆರ್.ನಗರ ಪೊಲೀಸ್ ಠಾಣೆಯಲ್ಲಿ ಅಶ್ವರ್ಯ ಗೌಡ, ಪತಿ ಹರೀಶ್ ಗೌಡ ಹಾಗೂ ಬೌನ್ಸರ್ ಗಜಾ ವಿರುದ್ಧ ಎಫ್ ಐಆರ್ ದಾಖಲಾಗಿದೆ.

3.25 ಕೋಟಿ ಹಣ, 430 ಗ್ರಾಮ್ ಚಿನ್ನಾಭರಣ ಪಡೆದು ವಂಚಿಸಿದ್ದಾರೆ ಎಂದು ಆರೋಪಿಸಿ ಶಿಲ್ಪಾ ಗೌಡ ಎಂಬುವವರು ಆರ್.ಆರ್.ನಗರ ಠಾನೆಯಲ್ಲಿ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

2022ರಲ್ಲಿ ಶಿಲ್ಪಾ ಗೌಡಾರಿಗೆ ಪರಿಚವಾಗಿದ್ದ ಆರೋಪಿ ಐಶ್ವರ್ಯಾ, ನಾನು ಡಿ.ಕೆ.ಸುರೇಶ್ ಅವರ ತಂಗಿ, ಗೋಲ್ಡ್ ಬಿಸಿನೆಸ್ ಮಾಡ್ತೀನಿ. ರಿಯಲ್ ಎಸ್ಟೇಟ್ ಹಾಗೂ ವಿಲ್ಲಾ ನಿರ್ಮಾಣ ಮಾಡುತ್ತೇನೆ. ಚಿಟ್ ಫಂಡ್ ವ್ಯವಹಾರ ಕೂಡ ಇದೆ ಎಂದು ಪರಿಚಯ ಮಾಡಿಕೊಂಡು 2022ರಿಂದ 2023ರವರೆಗೆ ಹಂತ ಹಂತವಾಗಿ 3.20 ಕೋಟಿ ನಗದು, 430 ಗ್ರಾಂ ಚಿನ್ನಾಭರಣ ಪಡೆದು ವಂಚನೆ ಮಾಡಿದ್ದಾಳೆ. ಹಣ, ಚಿನ್ನಾಭರಣ ವಾಪಾಸ್ ಕೇಳಿದ್ದಕ್ಕೆ ಬೆದರಿಕೆ ಹಾಕಿದ್ದಾಗಿ ದೂರು ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಆರ್.ಆರ್.ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

For Latest News Updates, Join Our Whatsapp Community🚩
RELATED ARTICLES

Most Popular