alex Certify BREAKING: ಏ. 2 ರಿಂದಲೇ ಜಾರಿಗೆ ಬರುವಂತೆ ಆಮದು ಕಾರ್ ಗಳ ಮೇಲೆ ಶೇ. 25ರಷ್ಟು ‘ಶಾಶ್ವತ’ ಸುಂಕ ಘೋಷಿಸಿದ ಅಮೆರಿಕ ಅಧ್ಯಕ್ಷ ಟ್ರಂಪ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BREAKING: ಏ. 2 ರಿಂದಲೇ ಜಾರಿಗೆ ಬರುವಂತೆ ಆಮದು ಕಾರ್ ಗಳ ಮೇಲೆ ಶೇ. 25ರಷ್ಟು ‘ಶಾಶ್ವತ’ ಸುಂಕ ಘೋಷಿಸಿದ ಅಮೆರಿಕ ಅಧ್ಯಕ್ಷ ಟ್ರಂಪ್

ವಾಷಿಂಗ್ಟನ್: ಆಮದು ಮಾಡಿಕೊಂಡ ಕಾರುಗಳ ಮೇಲೆ ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಟ್ರಂಪ್ ‘ಶಾಶ್ವತ’ 25 ಪ್ರತಿಶತ ಸುಂಕವನ್ನು ಘೋಷಿಸಿದ್ದಾರೆ.

ಅವರು ಬುಧವಾರ ಎಲ್ಲಾ ಆಟೋಮೊಬೈಲ್ ಆಮದುಗಳ ಮೇಲೆ ‘ಶಾಶ್ವತ’ 25 ಪ್ರತಿಶತ ಸುಂಕವನ್ನು ಘೋಷಿಸಿದ್ದಾರೆ, ಸುಂಕಗಳು ಏಪ್ರಿಲ್ 2 ರಿಂದ ಜಾರಿಗೆ ಬರಲಿದ್ದು, ಏಪ್ರಿಲ್ 3 ರಿಂದ ಸಂಗ್ರಹವಾಗಲಿದೆ. ಈ ನಿರ್ಧಾರವು ದೇಶೀಯ ಉತ್ಪಾದನೆಯನ್ನು ಉತ್ತೇಜಿಸುತ್ತದೆ ಎಂದು ಶ್ವೇತಭವನ ಹೇಳಿದೆ. ಆದರೆ ಜಾಗತಿಕ ಪೂರೈಕೆ ಸರಪಳಿಗಳನ್ನು ಅವಲಂಬಿಸಿರುವ ವಾಹನ ತಯಾರಕರಿಗೆ ಆರ್ಥಿಕವಾಗಿ ಒತ್ತಡವನ್ನುಂಟು ಮಾಡುತ್ತದೆ

ಸುಂಕಗಳು ವಾರ್ಷಿಕ USD 100 ಶತಕೋಟಿ ಆದಾಯವನ್ನು ಗಳಿಸುತ್ತವೆ ಎಂದು ಶ್ವೇತಭವನ ನಿರೀಕ್ಷಿಸಿದೆ.

ಹೊಸ ಸುಂಕಗಳು ಪೂರ್ಣಗೊಂಡ ವಾಹನಗಳು ಮತ್ತು ಆಟೋ ಬಿಡಿಭಾಗಗಳೆರಡನ್ನೂ ಒಳಗೊಳ್ಳುತ್ತವೆ. ಈ ಸುಂಕಗಳು ಅಸ್ತಿತ್ವದಲ್ಲಿರುವ ತೆರಿಗೆಗಳ ಜೊತೆಗೆ ಇರುತ್ತವೆ ಹೆಸರು ಬಹಿರಂಗಪಡಿಸಲು ಬಯಸದ ಶ್ವೇತಭವನದ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಇದು ಬೆಳವಣಿಗೆಯನ್ನು ಉತ್ತೇಜಿಸುತ್ತಲೇ ಇರುತ್ತದೆ. ನಾವು ಪರಿಣಾಮಕಾರಿಯಾಗಿ ಶೇಕಡ 25 ರಷ್ಟು ಸುಂಕವನ್ನು ವಿಧಿಸುತ್ತೇವೆ. ಇದು ಶಾಶ್ವತ ಎಂದು ಟ್ರಂಪ್ ಹೇಳಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...