
ಕನಕಪುರ: ಬಸ್ ಹತ್ತುವ ಸಂದರ್ಭದಲ್ಲಿ ನೂಕು ನುಗ್ಗಲಿನಲ್ಲಿ ಮಹಿಳೆಯ ಮಾಂಗಲ್ಯ ಸರ ಕಳವು ಮಾಡಲಾಗಿದೆ. ಚನ್ನಪಟ್ಟಣ ತಾಲೂಕಿನ ಭೂಹಳ್ಳಿಯ ಶಾಂತಮ್ಮ ಸರ ಕಳೆದುಕೊಂಡವರು.
ಮಾರ್ಚ್ 24ರಂದು ಬೆಂಗಳೂರಿನಿಂದ ಬಂದಿದ್ದ ಶಾಂತಮ್ಮ ಚನ್ನಪಟ್ಟಣ ತಾಲೂಕಿನ ಸ್ವಗ್ರಾಮ ಭೂಹಳ್ಳಿಗೆ ಹೋಗಲು ಕನಕಪುರ- ಚನ್ನಪಟ್ಟಣ ಬಸ್ ನಲ್ಲಿ ಪ್ರಯಾಣಿಸಿದ್ದರು. ಅವರು ನಾರಾಯಣಪ್ಪನ ಕೆರೆಯ ಬಳಿ ಇಳಿದು ಹೋಗುವಾಗ ಪತಿ ಮಾಂಗಲ್ಯ ಗಮನಿಸಿದಾಗ ಕಳ್ಳತನವಾಗಿರುವುದು ಗೊತ್ತಾಗಿದೆ. ನಂತರ ದಂಪತಿ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾರೆ.