ಕೂಚ್‌ಬೆಹಾರ್‌ನ ಚಾಂಗ್ರಾಬಂಧದಲ್ಲಿ ಮಂಗಳವಾರ ಅಚ್ಚರಿಯ ಘಟನೆಯೊಂದು ನಡೆದಿದೆ. ಮಾನ್ಯವಾದ ಪಾಸ್‌ಪೋರ್ಟ್ ಮತ್ತು ವೀಸಾದೊಂದಿಗೆ ಭಾರತಕ್ಕೆ ಬಂದಿದ್ದ ಬಾಂಗ್ಲಾದೇಶದ ಪ್ರಜೆ ಮೊಹಮ್ಮದ್ ಅಜಾದೂರ್ ರಹಮಾನ್, ಭಾರತವನ್ನು ನಿಂದಿಸಿದ್ದಾರೆ ಎಂಬ ಆರೋಪದ ಮೇಲೆ ಕೆಲವೇ ಗಂಟೆಗಳಲ್ಲಿ ವಾಪಸ್ ಕಳುಹಿಸಲಾಗಿದೆ.
ಚಾಂಗ್ರಾಬಂಧದ ವಲಸೆ ತಪಾಸಣಾ ಕೇಂದ್ರದ ಮೂಲಕ ಭಾರತಕ್ಕೆ ಪ್ರವೇಶಿಸಿದ ರಹಮಾನ್, ಟ್ಯಾಕ್ಸಿ ಬಾಡಿಗೆ ವಿಚಾರದಲ್ಲಿ ಕ್ಯಾಬ್ ಚಾಲಕನೊಂದಿಗೆ ವಾದಕ್ಕಿಳಿದಿದ್ದ. ಈ ವೇಳೆ, ಆತ ಭಾರತವನ್ನು ನಿಂದಿಸಿದ್ದಾನೆ ಎಂದು ಆರೋಪಿಸಲಾಗಿದೆ. ಇದರಿಂದ ಸ್ಥಳೀಯರು ಆಕ್ರೋಶಗೊಂಡರು.
ಪೊಲೀಸರು ತಕ್ಷಣವೇ ಕಾರ್ಯಪ್ರವೃತ್ತರಾಗಿ ರಹಮಾನ್ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದರು. ನಂತರ, ಆತನನ್ನು ವಾಪಸ್ ಕಳುಹಿಸಲು ವಲಸೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ರಹಮಾನ್ ಅವರ ಮಗ ಕುರ್ಸಿಯಾಂಗ್‌ನ ಶಾಲೆಯೊಂದರಲ್ಲಿ ವ್ಯಾಸಂಗ ಮಾಡುತ್ತಿದ್ದು, ಆತನನ್ನು ಭೇಟಿಯಾಗಲು ಭಾರತಕ್ಕೆ ಬಂದಿದ್ದರು ಎನ್ನಲಾಗಿದೆ.
ಸ್ಥಳೀಯರು ಹೇಳುವ ಪ್ರಕಾರ, ರಹಮಾನ್ ಅವರ ವರ್ತನೆಯಿಂದ ಆಶ್ಚರ್ಯಚಕಿತರಾದ ಕ್ಯಾಬ್ ಚಾಲಕರು ಮತ್ತು ಇ-ರಿಕ್ಷಾ ಚಾಲಕರು ಆತನನ್ನು ಕರೆದುಕೊಂಡು ಹೋಗಲು ನಿರಾಕರಿಸಿದ್ದಾರೆ. ಇದರಿಂದಾಗಿ, ಆತ ಸುಮಾರು 1.5 ಕಿ.ಮೀ ನಡೆದುಕೊಂಡು ಹೋಗಬೇಕಾಯಿತು. ಈ ವೇಳೆ, ಸ್ಥಳೀಯ ಯುವಕರು ಆತನ ವಿಡಿಯೋ ಚಿತ್ರೀಕರಿಸಿದ್ದಾರೆ.
ಸುದ್ದಿ ತಿಳಿದ ಪೊಲೀಸರು ರಹಮಾನ್ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದು, ಆತನ ಸುರಕ್ಷತೆಯ ದೃಷ್ಟಿಯಿಂದ ವಾಪಸ್ ಕಳುಹಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.