
ಬೆಂಗಳೂರು: ಅರಣ್ಯ, ಕಂದಾಯ ಭೂಮಿ ಬಗ್ಗೆ ಜಂಟಿ ಸಮೀಕ್ಷೆ ನಂತರ ಸಾಗುವಳಿ ಚೀಟಿ ನೀಡುವುದಾಗಿ ಕಂದಾಯ ಸಚಿವ ಕೃಷ್ಣ ಬೈರೇಗೌಡ ಹೇಳಿದ್ದಾರೆ.
ಕಾಂಗ್ರೆಸ್ ಸದಸ್ಯ ಹೆಚ್.ಡಿ. ತಮ್ಮಯ್ಯ ಅವರ ಗಮನ ಸೆಳೆಯುವ ಪ್ರಶ್ನೆಗೆ ಉತ್ತರ ನೀಡಿರುವ ಕಂದಾಯ ಸಚಿವರು, ಮಲೆನಾಡು ಜಿಲ್ಲೆಗಳಲ್ಲಿ ಒಂದೇ ಸರ್ವೇ ನಂಬರ್ ನಲ್ಲಿ ಅರಣ್ಯ ಹಾಗೂ ಕಂದಾಯ ಭೂಮಿ ಇರುವ ಕಾರಣಕ್ಕೆ ಹಕ್ಕು ಪತ್ರ ವಿತರಣೆಯಲ್ಲಿ ಆಗುವ ತೊಂದರೆ ಪರಿಹಾರಕ್ಕೆ ನಡೆಸುತ್ತಿರುವ ಜಂಟಿ ಸರ್ವೆ ಎರಡು ತಿಂಗಳಲ್ಲಿ ಪೂರ್ಣಗೊಳ್ಳಲಿದೆ ಎಂದು ಹೇಳಿದ್ದಾರೆ.
ಚಿಕ್ಕಮಗಳೂರು ಜಿಲ್ಲೆಯಲ್ಲಿ ಸರ್ವೆ ಸಮಸ್ಯೆಯಿಂದ ಸಾಗುವಳಿ ಜಮೀನುಗಳ ಇಂಡೀಕರಣವು ಸಾಧ್ಯವಾಗಿಲ್ಲ. ಈ ಕಾರ್ಯ ಮುಗಿದ ಕೂಡಲೇ ರೈತರಿಗೆ ಸಾಗುವಳಿ ಚೀಟಿ ನೀಡಲಾಗುವುದು ಎಂದು ಮಾಹಿತಿ ನೀಡಿದ್ದಾರೆ.