HomeKarnatakaBIG NEWS : ರಾಜ್ಯದಲ್ಲಿ ನಂದಿನಿ ಹಾಲಿನ ದರ ಏರಿಕೆ ಜೊತೆ ಹೆಚ್ಚುವರಿ ಹಾಲು ಕಡಿತ...

BIG NEWS : ರಾಜ್ಯದಲ್ಲಿ ನಂದಿನಿ ಹಾಲಿನ ದರ ಏರಿಕೆ ಜೊತೆ ಹೆಚ್ಚುವರಿ ಹಾಲು ಕಡಿತ ..!

ಬೆಂಗಳೂರು : ರಾಜ್ಯದಲ್ಲಿ ನಂದಿನಿ ಹಾಲಿನ ದರ ಏರಿಕೆ ಜೊತೆ ಹೆಚ್ಚುವರಿ ಹಾಲು ಕಡಿತವಾಗುವ ಸಾಧ್ಯತೆಯಿದೆ. ಇಷ್ಟು ದಿನ ಅರ್ಧ ಲೀಟರ್ ಹಾಲಿನ ಪ್ಯಾಕೆಟ್ ಗಳಲ್ಲಿ ಬರುತ್ತಿದ್ದ ಹೆಚ್ಚುವರಿ ಹಾಲಿಗೂ ಕತ್ತರಿ ಬೀಳುವ ಸಾಧ್ಯತೆಯಿದೆ.

ಪ್ರತಿ ಲೀಟರ್ ಹಾಲಿನ ಪ್ಯಾಕೆಟ್ ನಲ್ಲೂ ಹೆಚ್ಚುವರಿಯಾಗಿ ನೀಡುತ್ತಿದ್ದ ಹಾಲನ್ನೂ ಕೂಡ ಕಡಿತ ಮಾಡುವ ನಿಟ್ಟಿನಲ್ಲಿ ಕೆಎಂಎಫ್ ಚಿಂತನೆ ನಡೆಸಿದೆ.

ರಾಜ್ಯದಲ್ಲಿ ಮತ್ತೆ ನಂದಿನಿ ಹಾಲಿನ ದರ ಏರಿಕೆಯಾಗಲಿದೆ ಎಂದು ಕೆಎಂಎಫ್ ಅಧ್ಯಕ್ಷ ಭೀಮಾನಾಯ್ಕ್ ಹೇಳಿದ್ದಾರೆ.ಸುದ್ದಿಗಾರರ ಜೊತೆ ಮಾತನಾಡಿದ ಅವರು ರಾಜ್ಯದಲ್ಲಿ ಹಾಲಿನ ದರ ಏರಿಕೆ ಮಾಡಲಾಗುವುದು. ಹೆಚ್ಚಳ ಮಾಡಿದ ಹಾಲಿನ ದರ ರೈತರಿಗೆ ಸಿಗಲಿದೆ ಎಂದು ಅವರು ಹೇಳಿದರು. ಅಧಿವೇಶನ ಮುಗಿದ ಬಳಿಕ ಹಾಲಿನ ದರ ಏರಿಕೆಯಾಗಲಿದೆ. ಎಷ್ಟು ಏರಿಕೆಯಾಗುತ್ತದೆ ಎಂಬುದು ಇನ್ನೂ ಕೂಡ ಅಂತಿಮವಾಗಿಲ್ಲ ಎಂದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಹಾಲಿನ ದರ ಲೀ.ಗೆ 10 ರೂ ಹೆಚ್ಚಳಕ್ಕೆ ರೈತರು ಬೇಡಿಕೆ ಇಟ್ಟಿದ್ದಾರೆ ಎಂದು ಪಶುಸಂಗೋಪನೆ ಸಚಿವ ಕೆ.ವೆಂಕಟೇಶ್ ಇತ್ತೀಚೆಗೆ ಹೇಳಿದ್ದರು. ವಿಧಾನಸಭೆಯಲ್ಲಿ ಮಾತನಾಡಿದ ಸಚಿವರು ಹಾಲಿನ ದರ ಲೀ.ಗೆ 10 ರೂ ಹೆಚ್ಚಳಕ್ಕೆ ರೈತರು ಬೇಡಿಕೆ ಇಟ್ಟಿದ್ದಾರೆ, ಹಾಲಿನ ದರ ಏರಿಕೆ ಸರ್ಕಾರದ ತೀರ್ಮಾನದ ಹಂತದಲ್ಲಿದೆ ಎಂದಿದ್ದಾರೆ. ಈ ಬೆನ್ನಲ್ಲೇ ನಂದಿನಿ ಹಾಲಿನ ದರ ಏರಿಕೆಯಾಗಲಿದೆ ಎಂದು ಕೆಎಂಎಫ್ ಅಧ್ಯಕ್ಷ ಭೀಮಾನಾಯ್ಕ್ ಹೇಳಿದ್ದಾರೆ.

 

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular