
ಮೈಸೂರು: ಮೈಸೂರು ಕೆ.ಎಸ್.ಆರ್.ಟಿ.ಸಿ ವಿಶೇಷ ಸೂಚನೆ ಹೊರಡಿಸಿದೆ. ಪುರುಷರಿಗೆ ಮೀಸಲಿರುವ ಸೀಟ್ ನಲ್ಲಿ ಪುರುಷರೇ ಕುಳಿತುಕೊಳ್ಳುವಂತೆ ನೋಡಿಕೊಳ್ಳಿ ಎಂದು ತನ್ನ ಸಿಬ್ಬಂದಿಗೆ ದೂಚಿಸಿದೆ.
ಶಕ್ತಿ ಯೋಜನೆ ಜಾರಿಯಾದ ಬಳಿಕ ರಜಯದ ಸರ್ಕಾರಿ ಬಸ್ ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಆರಂಭವಾಗಿರುವುದರಿಂದ ಎಲ್ಲಾ ಬಸ್ ಗಳು ಪ್ರಯಾಣಿಕರಿಂದ ಕಿಕ್ಕಿರಿದು ತುಂಬುತ್ತಿವೆ. ಇದರಿಂದ ಪುರುಷ ಪ್ರಯಾಣಿಕರು ತಮಗೆ ಬಸ್ ನಲ್ಲಿ ಸೀಟು ಸಿಗುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.
ಈ ನಡುವೆ ಮೈಸೂರು ನಿವಾಸಿ ವಿಷ್ಣುವರ್ಧನ್ ಎಂಬುವವರು ಬಸ್ ನಲ್ಲಿ ಪುರುಷರಿಗೂ ಸೀಟು ಕೊಡಿ ಎಂದು ಕೆ.ಎಸ್.ಆರ್.ಟಿ.ಸಿಗೆ ಮನವಿ ಮಾಡಿದ್ದರು. ಮಹಿಳಾ ಪ್ರಯಾಣಿಕರಿಂದಾಗಿ ಪುರುಷರಿಗೆ ಬಸ್ ನಲ್ಲಿ ಕುಳಿತುಕೊಳ್ಳಲು ಸೀಟ್ ಸಿಗಲ್ಲ ಎಂದಿದ್ದರು. ಈ ಹಿನ್ನೆಲೆರ್ಯಲ್ಲಿ ಮೈಸೂರು ಕೆ.ಎಸ್.ಆರ್.ಟಿ. ಸಿ ಘಟಕ ಪುರುಷರ ಸೀಟ್ ನಲ್ಲಿ ಪುರುಷರೇ ಕುಳಿತುಕೊಳ್ಳುವಂತೆ ನೋಡಿಕೊಳ್ಳಿ ಎಂದು ತನ್ನ ಸಿಬ್ಬಂದಿಗಳಿಗೆ ಸೂಚಿಸಿದೆ.