alex Certify UPSC ವಯೋಮಿತಿ 5 ವರ್ಷ ಸಡಿಲಿಕೆ, 9 ಬಾರಿ ಪರೀಕ್ಷೆ ಬರೆಯಲು ಅವಕಾಶ: ಹೈಕೋರ್ಟ್ ಮಹತ್ವದ ಆದೇಶ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

UPSC ವಯೋಮಿತಿ 5 ವರ್ಷ ಸಡಿಲಿಕೆ, 9 ಬಾರಿ ಪರೀಕ್ಷೆ ಬರೆಯಲು ಅವಕಾಶ: ಹೈಕೋರ್ಟ್ ಮಹತ್ವದ ಆದೇಶ

ಭೋಪಾಲ್: ಆರ್ಥಿಕವಾಗಿ ಹಿಂದುಳಿದ ಸಾಮಾನ್ಯ ವರ್ಗದ(EWS) ಅಭ್ಯರ್ಥಿಗಳಿಗೆ ನಾಗರಿಕ ಸೇವಾ ಪರೀಕ್ಷೆ ಬರೆಯಲು 5 ವರ್ಷ ವಯೋಮಿತಿ ಸಡಲಿಕೆ ಕಲ್ಪಿಸುವಂತೆ ಮಧ್ಯಪ್ರದೇಶ ಹೈಕೋರ್ಟ್ ಸೂಚಿಸಿದೆ.

ಅಲ್ಲದೆ, ಮೀಸಲಾತಿ ಸೌಲಭ್ಯ ಪಡೆಯುವ ವರ್ಗಗಳಿಗೆ ಕಲ್ಪಿಸಿರುವಂತೆ 9 ಬಾರಿ ಪರೀಕ್ಷೆ ಬರೆಯಲು ಅವಕಾಶ ನೀಡುವಂತೆ ಕೇಂದ್ರ ಲೋಕಸೇವಾ ಆಯೋಗಕ್ಕೆ ಹೈಕೋರ್ಟ್ ನಿರ್ದೇಶಿಸಿದೆ. ಆರ್ಥಿಕವಾಗಿ ಹಿಂದುಳಿದ ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೂ ವಯೋಮಿತಿ ಸಡಿಲಿಕೆ ಮತ್ತು ಹೆಚ್ಚಿನ ಪರೀಕ್ಷಾ ಪ್ರಯತ್ನಗಳ ಸೌಲಭ್ಯ ನೀಡುವಂತೆ ಕೋರಿ ಆದಿತ್ಯ ನಾರಾಯಣ ಪಾಂಡೆ ಎಂಬುವರು ಅರ್ಜಿ ಸಲ್ಲಿಸಿದ್ದರು.

ಈ ಅರ್ಜಿ ವಿಚಾರಣೆ ನಡೆಸಿದ ಮಧ್ಯಪ್ರದೇಶ ಹೈಕೋರ್ಟ್ ನ್ಯಾಯಮೂರ್ತಿಗಳಾದ ಸುರೇಶ್ ಕುಮಾರ್ ಕೇತ್ ಮತ್ತು ಸುರೇಶ್ ಜೈನ್ ಅವರಿದ್ದ ಪೀಠದಿಂದ ಈ ಆದೇಶ ನೀಡಲಾಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...
Optická ilúzia: Odhaľte svoju skrytú silu v Optický klam pre Rozhodnite sa rýchlo: