alex Certify ಹೆದ್ದಾರಿಯಲ್ಲಿ ಉರುಳಿಬಿದ್ದ ಟ್ರಕ್; ಅದರಲ್ಲಿದ್ದ ಕೋಳಿ ಕದಿಯಲು ಮುಗಿಬಿದ್ದ ಜನ | Viral Video | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹೆದ್ದಾರಿಯಲ್ಲಿ ಉರುಳಿಬಿದ್ದ ಟ್ರಕ್; ಅದರಲ್ಲಿದ್ದ ಕೋಳಿ ಕದಿಯಲು ಮುಗಿಬಿದ್ದ ಜನ | Viral Video

ಉತ್ತರ ಪ್ರದೇಶದ ಕನ್ನೌಜ್ ಹೆದ್ದಾರಿಯಲ್ಲಿ ನಡೆದ ಒಂದು ವಿಚಿತ್ರ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಕೋಳಿಗಳನ್ನು ಸಾಗಿಸುತ್ತಿದ್ದ ಪಿಕಪ್ ಟ್ರಕ್ ಒಂದು ಹೆದ್ದಾರಿಯಲ್ಲಿ ಉರುಳಿದ ನಂತರ, ಸ್ಥಳೀಯರು ಕೋಳಿಗಳನ್ನು ಕದಿಯಲು ಮುಗಿಬಿದ್ದಿದ್ದಾರೆ. ಈ ಘಟನೆಗೆ ಸಂಬಂಧಿಸಿದ ವಿಡಿಯೋ ಈಗ ಎಲ್ಲೆಡೆ ಹರಿದಾಡುತ್ತಿದೆ.

ಅಮೇಥಿಯಿಂದ ಫಿರೋಜಾಬಾದ್‌ಗೆ ಕೋಳಿಗಳನ್ನು ಸಾಗಿಸುತ್ತಿದ್ದ ಪಿಕಪ್ ಟ್ರಕ್ ಕನ್ನೌಜ್ ಹೆದ್ದಾರಿಯಲ್ಲಿ ಚಾಲಕನ ನಿದ್ದೆಯಿಂದಾಗಿ ಉರುಳಿದೆ ಎಂದು ತಿಳಿದುಬಂದಿದೆ. ಸುದ್ದಿ ಹರಡಿದಂತೆ, ಜನರು ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿ ಕೋಳಿಗಳನ್ನು ಕದಿಯಲು ಪ್ರಾರಂಭಿಸಿದರು. ಒಬ್ಬೊಬ್ಬರು ಎರಡು-ಮೂರು ಕೋಳಿಗಳನ್ನು ಕೈಯಲ್ಲಿ ಹಿಡಿದುಕೊಂಡು ಹೋಗುತ್ತಿರುವುದು ವಿಡಿಯೋದಲ್ಲಿ ಕಂಡುಬಂದಿದೆ.

ಪೊಲೀಸರು ಮತ್ತು ಯುಪಿಇಐಡಿಎ (ಉತ್ತರ ಪ್ರದೇಶ ಎಕ್ಸ್‌ಪ್ರೆಸ್‌ವೇ ಇಂಡಸ್ಟ್ರಿಯಲ್ ಡೆವಲಪ್‌ಮೆಂಟ್ ಅಥಾರಿಟಿ) ಅಧಿಕಾರಿಗಳು ನಂತರ ಮಧ್ಯಪ್ರವೇಶಿಸಿ ಜನರನ್ನು ಚದುರಿಸಿದರಲ್ಲದೇ ಗಾಯಗೊಂಡವರನ್ನು ಆಸ್ಪತ್ರೆಗೆ ಸಾಗಿಸಲಾಯಿತು. ಚಾಲಕನಿಗೆ ನಿದ್ದೆ ಬಂದ ಕಾರಣ ಪಿಕಪ್ ಉರುಳಿತು ಎಂದು ಪೊಲೀಸರು ತಿಳಿಸಿದ್ದಾರೆ.

 

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...
Odpadněte myši ze sklepa: tento lék vždy Jak efektivně vyprat ručníky: 3 zásady pro nově vypadající Rukopis a charakter: Způsoby, jak Jaký džem je nejzdravější: lahodná podpora pro tělo Jak často byste Skvělý trik pro skladování hrnců, pánví