HomeIndiaBIG NEWS: ಮುಂಬೈನ ಪ್ರಸಿದ್ದ ಸಿದ್ಧಿವಿನಾಯಕ ದೇವಸ್ಥಾನದಲ್ಲಿ ವಸ್ತ್ರ ಸಂಹಿತೆ ಜಾರಿ

BIG NEWS: ಮುಂಬೈನ ಪ್ರಸಿದ್ದ ಸಿದ್ಧಿವಿನಾಯಕ ದೇವಸ್ಥಾನದಲ್ಲಿ ವಸ್ತ್ರ ಸಂಹಿತೆ ಜಾರಿ

ಮುಂಬೈನ ಪ್ರಸಿದ್ಧ ಸಿದ್ಧಿವಿನಾಯಕ ದೇವಸ್ಥಾನವು ಭಕ್ತರಿಗಾಗಿ ಹೊಸ ನಿಯಮವನ್ನು ಜಾರಿಗೆ ತಂದಿದ್ದು, ದೇವಾಲಯಕ್ಕೆ ಭೇಟಿ ನೀಡುವ ಭಕ್ತರು ಸೂಕ್ತವಾದ ಉಡುಪುಗಳನ್ನು ಧರಿಸಬೇಕು ಎಂದು ದೇವಸ್ಥಾನದ ಟ್ರಸ್ಟ್ ಆದೇಶಿಸಿದೆ. ಹರಿದ ಜೀನ್ಸ್, ಸ್ಕರ್ಟ್‌ ಮತ್ತು ಅರೆಬರೆ ದೇಹ ಕಾಣುವಂತೆ ಉಡುಪು ಧರಿಸಿ ದೇವಾಲಯಕ್ಕೆ ಪ್ರವೇಶಿಸಲು ಅನುಮತಿ ಇಲ್ಲ ಎಂದು ತಿಳಿಸಲಾಗಿದೆ.

ದೇವಸ್ಥಾನದ ನಿರ್ವಹಣಾ ಸಮಿತಿಯ ಹೇಳಿಕೆಯೊಂದನ್ನು ಬಿಡುಗಡೆ ಮಾಡಿ, “ಶ್ರೀ ಸಿದ್ಧಿವಿನಾಯಕ ಗಣಪತಿ ದೇವಸ್ಥಾನಕ್ಕೆ ಭೇಟಿ ನೀಡುವ ಭಕ್ತರು ದೇವಾಲಯದ ಪವಿತ್ರತೆಗೆ ಗೌರವ ತೋರುವಂತಹ ಉಡುಪುಗಳನ್ನು ಧರಿಸಬೇಕು. ಕಟ್-ಆಫ್ ಜೀನ್ಸ್, ಸ್ಕರ್ಟ್‌ಗಳು, ಅಥವಾ ಕನಿಷ್ಠ ಉಡುಪುಗಳನ್ನು ಧರಿಸಿದವರಿಗೆ ಭಗವಂತನ ದರ್ಶನಕ್ಕೆ ಅವಕಾಶ ನೀಡಲಾಗುವುದಿಲ್ಲ” ಎಂದು ಹೇಳಿದೆ.

ಟ್ರಸ್ಟ್‌ನ ಉಪ ಕಾರ್ಯನಿರ್ವಾಹಕ ಅಧಿಕಾರಿ ಸಂದೀಪ್ ರಾಠೋಡ್, ಈ ನಿರ್ಧಾರವನ್ನು ದೀರ್ಘಕಾಲದಿಂದ ನಡೆಸಿದ ಅವಲೋಕನಗಳ ಆಧಾರದ ಮೇಲೆ ತೆಗೆದುಕೊಳ್ಳಲಾಗಿದೆ ಎಂದು ಹೇಳಿದ್ದಾರೆ. “ಸಮುದಾಯ ಸಭೆಗಳು ಮತ್ತು ಉತ್ಸವಗಳಿಗೆ ಜನರು ಉತ್ತಮ ಉಡುಗೆ ತೊಡುತ್ತಾರೆ, ಆದ್ದರಿಂದ ದೇವಾಲಯಕ್ಕೂ ಅದೇ ಗೌರವವನ್ನು ನೀಡಬೇಕು ಎಂದು ಭಾವಿಸಲಾಯಿತು” ಎಂದು ಅವರು ತಿಳಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಹೊಸ ಉಡುಪು ಸಂಹಿತೆಯ ಬಗ್ಗೆ ತಿಳಿದಿರದ ಅಥವಾ ಇತರ ನಗರಗಳಿಂದ ಬಂದಿರುವ ಭಕ್ತರಿಗೆ ಪರ್ಯಾಯ ಉಡುಪುಗಳನ್ನು ಒದಗಿಸುವ ಬಗ್ಗೆ ಟ್ರಸ್ಟ್ ಪರಿಶೀಲಿಸುತ್ತಿದೆ ಎಂದು ರಾಠೋಡ್ ತಿಳಿಸಿದ್ದಾರೆ.

ಧಾರ್ಮಿಕ ಸ್ಥಳಗಳಲ್ಲಿ ಸೂಕ್ತ ಉಡುಪು ಧರಿಸುವುದು ಸಂಸ್ಕೃತಿಯ ಭಾಗವಾಗಿದೆ ಎಂದು ಕೆಲವರು ಪ್ರತಿಪಾದಿಸಿದ್ದು, ಮತ್ತಷ್ಟು ಮಂದಿ ಇದು ವೈಯಕ್ತಿಕ ಸ್ವಾತಂತ್ರ್ಯದ ಉಲ್ಲಂಘನೆ ಎಂದು ಕೆಲವರು ವಾದಿಸಿದ್ದಾರೆ. ಈ ನಿರ್ಧಾರ ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದೆ.

For Latest News Updates, Join Our Whatsapp Community🚩
RELATED ARTICLES

Most Popular