alex Certify ಎಂ.ಬಿ. ಪಾಟೀಲ್ –ಯತ್ನಾಳ್ ಶಕ್ತಿ ಪ್ರದರ್ಶನಕ್ಕೆ ವೇದಿಕೆ ಸಜ್ಜು: ಭಾರೀ ಕುತೂಹಲ ಮೂಡಿಸಿದ ವಿಜಯಪುರ ಮೇಯರ್ –ಉಪಮೇಯರ್ ಚುನಾವಣೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಎಂ.ಬಿ. ಪಾಟೀಲ್ –ಯತ್ನಾಳ್ ಶಕ್ತಿ ಪ್ರದರ್ಶನಕ್ಕೆ ವೇದಿಕೆ ಸಜ್ಜು: ಭಾರೀ ಕುತೂಹಲ ಮೂಡಿಸಿದ ವಿಜಯಪುರ ಮೇಯರ್ –ಉಪಮೇಯರ್ ಚುನಾವಣೆ

ವಿಜಯಪುರ: ನಾಳೆ ವಿಜಯಪುರ ಮಹಾನಗರ ಪಾಲಿಕೆಯ ಮೇಯರ್ ಚುನಾವಣೆ ನಡೆಯಲಿದೆ. 22ನೇ ಅವಧಿಯ ಮೇಯರ್, ಉಪಮೇಯರ್ ಆಯ್ಕೆಗಾಗಿ ಮತದಾನ ನಡೆಯಲಿದೆ.

ಹಿಂದುಳಿದ ವರ್ಗ ಎ ಗೆ ಮೇಯರ್ ಸ್ಥಾನ ಮೀಸಲಾಗಿದೆ. ಸಾಮಾನ್ಯ ಮಹಿಳಾ ವರ್ಗಕ್ಕೆ ಉಪಮೇಯರ್ ಸ್ಥಾನ ಮೀಸಲಾಗಿದೆ. ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲ್ ಹಾಗೂ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಶಕ್ತಿ ಪ್ರದರ್ಶನಕ್ಕೆ ಈ ಚುನಾವಣೆ ವೇದಿಕೆಯಾಗಿದೆ.

ಒಟ್ಟು 35 ಸದಸ್ಯರ ಬಲ ಹೊಂದಿರುವ ವಿಜಯಪುರ ಮಹಾನಗರ ಪಾಲಿಕೆಯಲ್ಲಿ ಬಿಜೆಪಿ 17, ಕಾಂಗ್ರೆಸ್ 10, ಪಕ್ಷೇತರರು 5, ಎಂಐಎಂ 2, ಜೆಡಿಎಸ್ ಬಳಿ 1 ಸ್ಥಾನವಿದೆ.

11 ಶಾಸಕರು, ಸಂಸದರು ಸೇರಿ ಒಟ್ಟು 46 ಜನ ಪ್ರತಿನಿಧಿಗಳಿಗೆ ಮತದಾನದ ಹಕ್ಕು ಇದೆ. ಬಿಜೆಪಿಯಿಂದ ಬಸನಗೌಡ ಪಾಟೀಲ್, ಸಂಸದ ರಮೇಶ ಜಿಗಜಿಣಗಿ, ಪರಿಷತ್ ಸದಸ್ಯರಾದ ರವಿಕುಮಾರ್, ಕೇಶವ ಪ್ರಸಾದ್ ಗೆ ಮತದಾನದ ಹಕ್ಕು ಇದೆ. 17 ಪಾಲಿಕೆ ಸದಸ್ಯರು, ನಾಲ್ವರು ಜನಪ್ರತಿನಿಧಿಗಳು ಸೇರಿ ಬಿಜೆಪಿ ಬಳಿ 21 ಮತಗಳಿವೆ.

ಕಾಂಗ್ರೆಸ್ ನಲ್ಲಿ 10 ಪಾಲಿಕೆ ಸದಸ್ಯರು ಸೇರಿದಂತೆ ಸಚಿವ ಎಂ.ಬಿ. ಪಾಟೀಲ್, ಶಾಸಕ ವಿಠಲ ಕಟಕದೊಂಡ, ಪರಿಷತ್ ಸದಸ್ಯರಾದ ಸುನಿಲ್ ಗೌಡ ಪಾಟೀಲ್, ತಿಮ್ಮಣ್ಣ ಕಮಕನೂರ, ಜಗದೇವ ಗುತ್ತಿಗೆದಾರ, ಬಾಖಲಿಸಾ ಬಾನು, ಹಾಗೂ ಎ. ವಸಂತಕುಮಾರ್ ಸೇರಿ 17 ಮತಗಳು ಕಾಂಗ್ರೆಸ್ ಬಳಿ ಇವೆ.

ಪಕ್ಷೇತರರು ಐವರು, ಎಂಐಎಂ 2, ಜೆಡಿಎಸ್ 1 ಬೆಂಬಲವಿದೆ ಎಂದು ಜಿಲ್ಲಾ ಕಾಂಗ್ರೆಸ್ ನಾಯಕರು ಹೇಳುತ್ತಿದ್ದಾರೆ. ಹೀಗಾಗಿ ವಿಜಯಪುರದಲ್ಲಿ ಪಕ್ಷೇತರರೇ ನಿರ್ಣಾಯಕರಾಗಿದ್ದಾರೆ.

ನಾಳೆ ಬೆಳಗ್ಗೆ 9 ಗಂಟೆಗೆ ನಾಮಪತ್ರ ಸಲ್ಲಿಕೆ, ಮಧ್ಯಾಹ್ನ 1 ಗಂಟೆಗೆ ಮತದಾನ ನಡೆಯಲಿದೆ. ಕಲಬುರಗಿ ಹೈಕೋರ್ಟ್ ಆದೇಶದಂತೆ ನಾಳೆ ಮತದಾನ ಮಾತ್ರ ನಡೆಯಲಿದೆ. ಕಾಂಗ್ರೆಸ್ ನ ನಾಲ್ವರು ಎಂಎಲ್‌ಸಿಗಳಾದ ತಿಮ್ಮಣ್ಣ ಕಮಕನೂರ, ಜಗದೇವ ಗುತ್ತಿಗೆದಾರ, ಬಾಖಲಿಸಬಾನು, ವಸಂತಕುಮಾರ್ ಅವರ ಮತದಾನ ಪ್ರಶ್ನಿಸಿ ಹೈಕೋರ್ಟ್ ಪಾಲಿಕೆಯ ಬಿಜೆಪಿ ಸದಸ್ಯರು ಕಲಬುರಗಿ ಹೈಕೋರ್ಟ್ ಮೊರೆ ಹೋಗಿದ್ದಾರೆ. ಈ ಬಗ್ಗೆ ಜನವರಿ 29ರಂದು ಕಲಬುರಗಿ ಹೈಕೋರ್ಟ್ ನಿಂದ ಆದೇಶ ನೀಡುವ ಸಾಧ್ಯತೆ ಇದೆ. ಹೈಕೋರ್ಟ್ ಆದೇಶದವರೆಗೂ ಚುನಾವಣೆ ಫಲಿತಾಂಶ ಪ್ರಕಟಿಸುವಂತಿಲ್ಲ. ಮೇಯರ್, ಉಪಮೇಯರ್ ಸ್ಥಾನಕ್ಕಾಗಿ ಬಿಜೆಪಿ ಮತ್ತು ಕಾಂಗ್ರೆಸ್ ನಲ್ಲಿ ಪೈಪೋಟಿ ಶುರುವಾಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...