ಬಾಗಲಕೋಟೆ: ಸಾಲಗಾರರ ಕಿರುಕುಳ, ಮಾನಸಿಕ ಹಿಂಸೆಗೆ ಬೇಸತ್ತು ದಂಪತಿ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬಾಗಲಕೋಟೆ ಜಿಲ್ಲೆಯ ಮುಧೋಳ ನಗರದಲ್ಲಿ ನಡೆದಿದೆ.
ಮಲ್ಲಪ್ಪ ಲಾಳಿ (55) ಹಾಗೂ ಪತ್ನಿ ಮಾದೇವಿ ಲಾಳಿ (50) ಮೃತರು. ಡೆತ್ ನೋಟ್ ಬರೆದಿಟ್ಟಿರುವ ದಂಪತಿ, ಯಾದವಾಡ ರಸ್ತೆ ಬಳಿ ಘಟಪ್ರಭಾ ನದಿ ಸೇತುವೆಯ ಕಬ್ಬಿಣದ ಪೈಪ್ ಗೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಮೃತ ದಂಪತಿ ಸೊರಗಾವಿ ಗ್ರಾಮದ ನಿವಾಸಿಗಳು. ಇತ್ತೀಚೆಗೆ ಮುಧೋಳ ತಾಲೂಕಿನ ಮೆಟಗುಡ್ಡದಲ್ಲಿ ನೆಲೆಸಿದ್ದರು. ಮೆಟಗುಡ್ಡದಲ್ಲಿ ಕಿರಾಣಿ ಅಂಗಡಿ ನಡೆಸುತ್ತಿದ್ದರು. ಹಲವರ ಬಳಿ ಸಾಲ ಮಾಡಿದ್ದರು. ಕಿರಾಣಿ ಅಂಗಡಿಯೂ ಚನ್ನಾಗಿಯೇ ನಡೆಯುತ್ತಿತ್ತು. ಆದರೆ ಸಾಲಗಾರರು ಹಣಕ್ಕಾಗಿ ಪೀಡಿಸುತ್ತಿದ್ದರು. ಮನೆ ಬಳಿ ಬಂದು ಹಣ ವಾಪಾಸ್ ಕೊಡುವಂತೆ ಕೇಳುತ್ತಿದ್ದರು. ಸಾಲಗಾರರ ಕಿರುಕುಳಕ್ಕೆ ಬೇಸತ್ತು ದಂಪತಿ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ತಿಳಿದುಬಂದಿದೆ.