ನಟ ‘ಸೈಫ್ ಅಲಿ ಖಾನ್’ ಗೆ ಚಾಕು ಇರಿದು ದಾಳಿಕೋರ ಹೆಡ್ ಫೋನ್ ಖರೀದಿಸಿದ್ದು, ಸಿಸಿಟಿವಿಯಲ್ಲಿ ದೃಶ್ಯಾವಳಿಗಳು ಸೆರೆಯಾಗಿದೆ.
ಹೊಸ ಸಿಸಿಟಿವಿ ದೃಶ್ಯಾವಳಿಯಲ್ಲಿ, ಸೈಫ್ ಅಲಿ ಖಾನ್ ಅವರ ದಾಳಿಕೋರನು ದಾದರ್ನ ಲಕ್ಷ್ಮಿ ಹೋಟೆಲ್ ಬಳಿಯ “ಇಕ್ರಾ” ಎಂಬ ಮೊಬೈಲ್ ಫೋನ್ ಅಂಗಡಿಯಿಂದ ಹೆಡ್ಫೋನ್ಗಳನ್ನು ಖರೀದಿಸುತ್ತಿರುವುದು ಕಂಡುಬಂದಿದೆ.
ದಾದರ್ನ ಲಕ್ಷ್ಮಿ ಹೋಟೆಲ್ ಪ್ರದೇಶದಲ್ಲಿ ಮುಂಬೈ ಕ್ರೈಂ ಬ್ರಾಂಚ್ ನಿನ್ನೆ ರಾತ್ರಿ 9 ಗಂಟೆಗೆ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದೆ.
ಬಾಲಿವುಡ್ ನಟ ಸೈಫ್ ಅಲಿ ಖಾನ್ ಮೇಲೆ ಬುಧವಾರ ರಾತ್ರಿ ಅವರ ಬಾಂದ್ರಾ ನಿವಾಸದಲ್ಲಿ ಚಾಕುವಿನಿಂದ ಹಲ್ಲೆ ನಡೆಸಲಾಗಿತ್ತು. ಈ ಘಟನೆಯಲ್ಲಿ ನಟನ ಬೆನ್ನಿನಲ್ಲಿ ಚಾಕು ಸಿಲುಕಿಕೊಂಡಿದ್ದು, ತೀವ್ರವಾಗಿ ಗಾಯಗೊಂಡಿದ್ದರು.ಲೀಲಾವತಿ ಆಸ್ಪತ್ರೆಯಲ್ಲಿ ನಡೆದ ಶಸ್ತ್ರಚಿಕಿತ್ಸೆಯಲ್ಲಿ ಚಾಕುವನ್ನು ತೆಗೆಯಲಾಗಿದ್ದು, ಸೈಫ್ ಅಪಾಯದಿಂದ ಪಾರಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. ನಟನ ಬೆನ್ನಿನ ಜೊತೆಗೆ ಕೈ ಮತ್ತು ಕುತ್ತಿಗೆಗೂ ಗಾಯಗಳಾಗಿವೆ
Mumbai, Maharashtra: Officers from the Crime Branch visited the Kabutarkhana area in Dadar and collected CCTV footage from a mobile shop named “Iqra” from where he purchased headphones after attacking actor Saif Ali Khan pic.twitter.com/ILxBjsD7eZ
— IANS (@ians_india) January 18, 2025