alex Certify BIG NEWS : ‘ಏಷಿಯನ್ ಸಿನಿಮಾ ಸ್ಪರ್ಧಾ’ ವಿಭಾಗಕ್ಕೆ ಚಲನಚಿತ್ರಗಳ ಆಹ್ವಾನ, ಈ ರೀತಿ ಅರ್ಜಿ ಸಲ್ಲಿಸಿ.! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS : ‘ಏಷಿಯನ್ ಸಿನಿಮಾ ಸ್ಪರ್ಧಾ’ ವಿಭಾಗಕ್ಕೆ ಚಲನಚಿತ್ರಗಳ ಆಹ್ವಾನ, ಈ ರೀತಿ ಅರ್ಜಿ ಸಲ್ಲಿಸಿ.!

ಬೆಂಗಳೂರು : 16ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವವನ್ನು ಮಾರ್ಚ್ 1 ರಿಂದ 8ರ ವರೆಗೆ ಹಮ್ಮಿಕೊಳ್ಳಲಾಗಿದ್ದು, ಸರ್ವಜನಾಂಗದ ಶಾಂತಿಯ ತೋಟ ಘೋಷವಾಕ್ಯದಡಿ ನಡೆಯಲಿದೆ. ಈ ಹಿನ್ನೆಲೆ ಮೂರು ಸ್ಪರ್ಧಾ ವಿಭಾಗಗಳಿಗೆ ಅರ್ಹ ಚಲನಚಿತ್ರಗಳನ್ನು ಆಹ್ವಾನಿಸಲಾಗಿದೆ.

ಏಷಿಯನ್ ಸಿನಿಮಾ ಸ್ಪರ್ಧಾ ವಿಭಾಗದಲ್ಲಿ ಸಲ್ಲಿಸಬೇಕಾದ ಕಥಾ ಚಿತ್ರಗಳು ಕನಿಷ್ಠ 70 ನಿಮಿಷದ ಅವಧಿಯದ್ದಾಗಿರಬೇಕು. ಜನವರಿ 1, 2024 ರಿಂದ ಡಿಸೆಂಬರ್ 31, 2024ರ ಒಳಗೆ ನಿರ್ಮಾಣಗೊಂಡಿರಬೇಕು. ಏಷ್ಯಾದ ಯಾವುದೇ ದೇಶದಲ್ಲಿ ತಯಾರಾದ ಚಿತ್ರಗಳನ್ನು ಕಳುಹಿಸಬಹುದು.

ಚಲನಚಿತ್ರಗಳನ್ನು ಸಲ್ಲಿಸುವ ಪ್ರಕ್ರಿಯೆಯು 2025ರ ಜನವರಿ 9 ರಿಂದ ಆರಂಭವಾಗಿದ್ದು, ಅರ್ಜಿ ಸಲ್ಲಿಕೆಗೆ ಜನವರಿ 23ರವರೆಗೆ ಅವಕಾಶವಿದೆ. www.biffes.org ಮೂಲಕ ಎಲ್ಲಾ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಬಹುದು. ಪ್ರತಿ ಚಿತ್ರಕ್ಕೂ ಪ್ರವೇಶ ಶುಲ್ಕ ₹3,000 ಇರುತ್ತದೆ.ಹೆಚ್ಚಿನ ಮಾಹಿತಿಗಾಗಿ 8904645529, biffesblr@gmail.com & biffes.org ಸಂಪರ್ಕಿಸಬಹುದು.

 

Related News

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...