HomeEntertainmentBIG NEWS : 'ಏಷಿಯನ್ ಸಿನಿಮಾ ಸ್ಪರ್ಧಾ' ವಿಭಾಗಕ್ಕೆ ಚಲನಚಿತ್ರಗಳ ಆಹ್ವಾನ, ಈ ರೀತಿ ಅರ್ಜಿ...

BIG NEWS : ‘ಏಷಿಯನ್ ಸಿನಿಮಾ ಸ್ಪರ್ಧಾ’ ವಿಭಾಗಕ್ಕೆ ಚಲನಚಿತ್ರಗಳ ಆಹ್ವಾನ, ಈ ರೀತಿ ಅರ್ಜಿ ಸಲ್ಲಿಸಿ.!

ಬೆಂಗಳೂರು : 16ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವವನ್ನು ಮಾರ್ಚ್ 1 ರಿಂದ 8ರ ವರೆಗೆ ಹಮ್ಮಿಕೊಳ್ಳಲಾಗಿದ್ದು, ಸರ್ವಜನಾಂಗದ ಶಾಂತಿಯ ತೋಟ ಘೋಷವಾಕ್ಯದಡಿ ನಡೆಯಲಿದೆ. ಈ ಹಿನ್ನೆಲೆ ಮೂರು ಸ್ಪರ್ಧಾ ವಿಭಾಗಗಳಿಗೆ ಅರ್ಹ ಚಲನಚಿತ್ರಗಳನ್ನು ಆಹ್ವಾನಿಸಲಾಗಿದೆ.

ಏಷಿಯನ್ ಸಿನಿಮಾ ಸ್ಪರ್ಧಾ ವಿಭಾಗದಲ್ಲಿ ಸಲ್ಲಿಸಬೇಕಾದ ಕಥಾ ಚಿತ್ರಗಳು ಕನಿಷ್ಠ 70 ನಿಮಿಷದ ಅವಧಿಯದ್ದಾಗಿರಬೇಕು. ಜನವರಿ 1, 2024 ರಿಂದ ಡಿಸೆಂಬರ್ 31, 2024ರ ಒಳಗೆ ನಿರ್ಮಾಣಗೊಂಡಿರಬೇಕು. ಏಷ್ಯಾದ ಯಾವುದೇ ದೇಶದಲ್ಲಿ ತಯಾರಾದ ಚಿತ್ರಗಳನ್ನು ಕಳುಹಿಸಬಹುದು.

ಚಲನಚಿತ್ರಗಳನ್ನು ಸಲ್ಲಿಸುವ ಪ್ರಕ್ರಿಯೆಯು 2025ರ ಜನವರಿ 9 ರಿಂದ ಆರಂಭವಾಗಿದ್ದು, ಅರ್ಜಿ ಸಲ್ಲಿಕೆಗೆ ಜನವರಿ 23ರವರೆಗೆ ಅವಕಾಶವಿದೆ. www.biffes.org ಮೂಲಕ ಎಲ್ಲಾ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಬಹುದು. ಪ್ರತಿ ಚಿತ್ರಕ್ಕೂ ಪ್ರವೇಶ ಶುಲ್ಕ ₹3,000 ಇರುತ್ತದೆ.ಹೆಚ್ಚಿನ ಮಾಹಿತಿಗಾಗಿ 8904645529, [email protected] & biffes.org ಸಂಪರ್ಕಿಸಬಹುದು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

 

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular