HomeIndiaBREAKING : ತಿರುಪತಿ ಕಾಲ್ತುಳಿತದಲ್ಲಿ ಗಾಯಗೊಂಡವರಿಗೆ ತಿಮ್ಮಪ್ಪನ ವಿಶೇಷ 'ದರ್ಶನ ಭಾಗ್ಯ' ಕಲ್ಪಿಸಿದ TTD.!

BREAKING : ತಿರುಪತಿ ಕಾಲ್ತುಳಿತದಲ್ಲಿ ಗಾಯಗೊಂಡವರಿಗೆ ತಿಮ್ಮಪ್ಪನ ವಿಶೇಷ ‘ದರ್ಶನ ಭಾಗ್ಯ’ ಕಲ್ಪಿಸಿದ TTD.!

ತಿರುಪತಿಯಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ ಗಾಯಗೊಂಡವರಿಗೆ ಟಿಟಿಡಿ ಆಡಳಿತ ಮಂಡಳಿ ತಿಮ್ಮಪ್ಪನ ವಿಶೇಷ ದರ್ಶನ ಭಾಗ್ಯ ಕಲ್ಪಿಸಿದೆ.

ಗಾಯಾಳು 35 ಜನರನ್ನು ಕರೆದುಕೊಂಡು ಹೋದ ಟಿಟಿಡಿ ಆಡಳಿತ ಮಂಡಳಿ ತಿಮ್ಮಪ್ಪನ ವಿಶೇಷ ದರ್ಶನ ಮಾಡಿಸಿದೆ. ನಿನ್ನೆ ಆಂಧ್ರಪ್ರದೇಶ ಸಿಎಂ ಚಂ‍ದ್ರಬಾಬು ನಾಯ್ಡು ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳ ಆರೋಗ್ಯ ವಿಚಾರಿಸಿದರು.

ತಿರುಪತಿಯಲ್ಲಿ ನಡೆದಿದ್ದ ಕಾಲ್ತುಳಿತ ದುರಂತದಲ್ಲಿ 6 ಭಕ್ತರು ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿದ್ದಾರೆ. ದುರಂತ ಘಟನೆ ಹಿನ್ನೆಲೆಯಲ್ಲಿ ಆಂಧ್ರ ಮುಖ್ಯಮಂತ್ರಿ ಚಂದ್ರಬಾಬು ನಾಯ್ದು ಘಟನಾ ಸ್ಥಳಕ್ಕೆ ಭೇಟಿ ನೀಡಿ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ತಿರುಪತಿಯ ಭೈರಾಗಿಪಟ್ಟೆಡದ ಪದ್ಮಾವತಿ ಪಾರ್ಕ್ ಬಳಿ ನಡೆದ ದುರಂತ ನಡೆದ ಸ್ಥಳಕ್ಕೆ ಸಿಎಂ ಚಂದ್ರಬಾಬು ನಾಯ್ದು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಘಟನೆ ಹೇಗೆ ನಡೆಯಿತು? ಯಾಕೆ ಹೀಗೆ ಆಗಿದೆ? ಎಲ್ಲಿ ಲೋಪವಾಗಿದೆ? ಎಂದು ಅಧಿಕಾರಿಗಳನ್ನು ಪ್ರಶ್ನಿಸಿದ್ದಾರೆ.ಭದ್ರತೆ ವಿಚಾರದಲ್ಲಿ ಮತ್ತಷ್ಟು ನಿಗಾ ವಹಿಸಬೇಕು. 2000 ಜನರು ಮಾತ್ರ ಒಳಗೆ ಹೋಗಲು ಅವಕಾಶವಿರುವಾಗ 2500 ಜನರನ್ನು ಒಳಗೆ ಬಿಟ್ಟಿದ್ದು ಯಾಕೆ? ಎಂದು ಸಿಎಂ ಗರಂ ಆಗಿದ್ದಾರೆ.

 

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular